Advertisement

10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌

02:48 PM May 16, 2021 | Team Udayavani |

ಬೆಂಗಳೂರು: ಕೋವಿಡ್  ಎರಡನೇ ಅಲೆಯಿಂದಸಂಕಷ್ಟಕ್ಕೆ ಸಿಲುಕಿರುವ ಸೋಂಕಿತರ ರಕ್ಷಣೆಗೆಪ್ರಮುಖವಾಗಿ 10 ಕ್ರಯೋಜನಿಕ್‌ ಆಮ್ಲಜನಕಟ್ಯಾಂಕರ್‌ಗಳನ್ನು ಪ್ರತಿ ಕಂದಾಯ ವಿಭಾಗಗಳಿಗೆ 2ಟ್ಯಾಂಕರ್‌ಗಳು ಹಾಗೂ ಕರಾವಳಿಗೆ ಪ್ರತ್ಯೇಕವಾಗಿ 2ಟ್ಯಾಂಕರ್‌ ನೀಡಲು ಗಣಿ ಮತ್ತು ಭೂ ವಿಜ್ಞಾನಸಚಿವ ಮುರುಗೇಶ್‌ ನಿರಾಣಿ ಸೂಚನೆ ನೀಡಿದ್ದಾರೆ.

Advertisement

ಶನಿವಾರ ವಿಕಾಸಸೌಧದಲ್ಲಿ ಗಣಿ ಮತ್ತುಭೂವಿಜ್ಞಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ಪಾಂಡೆ, ನಿದೇರ್ಶಕ ಪಿ.ಆರ್‌ ರವೀಂದ್ರ ಸೇರಿಮತ್ತಿತರ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾಘಟಕಗಳನ್ನು ಅಳವಡಿಸಲಾಗುತ್ತದೆ. ಆರೋಗ್ಯಇಲಾಖೆಯೊಂದಿಗೆ ಸಮಾಲೋಚಿಸಿ ಗಣಿ ಮತ್ತುಭೂವಿಜ್ಞಾನ ವಿಭಾಗದ ಸಮಿತಿಯು ಆಸ್ಪತ್ರೆಗುರುತಿಸುವ ಹೊಣೆಗಾರಿಕೆಯನ್ನು ಸಭೆ ನೀಡಿದೆ.ಇನ್ನು ಗಣಿ ಇಲಾಖೆಯಿಂದ 1000 ಆಮ್ಲಜನಕಸಾಂದ್ರಕಗಳನ್ನು ಸಂಗ್ರಹಿಸಿ ಅವುಗಳನ್ನು ಎಲ್ಲಾ ಜಿಲ್ಲೆಗಳಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆಸಚಿವರು ನಿರ್ದೇಶನ ನೀಡಿದರು.

ಹೆಚ್ಚಿನ ಸಂಖ್ಯೆಯ ಆಕ್ಸಿಮೀಟರಗಳನ್ನು ಸಂಗ್ರಹಿಸಿಇವುಗಳನ್ನು ಗ್ರಾಮ ಪಂಚಾಯಿತಿ ಆರೋಗ್ಯಸಮಿತಿಗಳಿಗೆ ನೀಡಲಾಗುವುದು. ಇದನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ನೀಡಿದರೆ, ಗ್ರಾಮಸ್ಥರಿಗೆಆಮ್ಲಜನಕದ ಶುದ್ಧತ್ವವನ್ನು ನಿಯಮಿತವಾಗಿಪರಿಶೀಲಿಸಬಹುದು ಎಂದು ಸಲಹೆ ನೀಡಿದರು.ರಾಯಚೂರು ಜಿಲ್ಲೆ  ಲಿಂಗಸೂರು ತಾಲ್ಲೂಕಿನಲ್ಲಿರುವ ಹಟ್ಟಿ ಗೋಲ್ಡ್  ಮೈನ್ಸ್‌ ಕ್ಯಾಂಪ್‌ನಲ್ಲಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕಾಲೇಜುಸ್ಥಾಪಿಸಿಸಲು ತೀರ್ಮಾನಿಸಲಾಗಿದೆ.

ಇದರಿಂದರಾಯಚೂರು ಜಿಲ್ಲೆಯ ಪ್ಯಾರಾ-ಮೆಡಿಸಿನ್‌ ಮತ್ತುದಾದಿಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಈಆಸ್ಪತ್ರೆಯಲ್ಲಿ ವಿಶೇಷ ಆಮ್ಲಜನಕ ಜನರೇಟರ್‌ಸ್ಥಾವರವನ್ನು ಸ್ಥಾಪಿಸಲು ನಿರಾಣಿ ಸೂಚಿಸಿದರು.ಯಾವ ಜಿಲ್ಲೆಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆಇದೆಯೋ ಅಂತಹ ಕಡೆ ಮೊದಲ ಆದ್ಯತೆಯಾಗಿಹೆಚ್ಚಿನ ಗಮನ ಹರಿಸಬೇಕು. ಸೋಂಕಿತರ ಪ್ರಾಣರಕ್ಷಣೆಗೆ ಇಲಾಖೆ ವತಿಯಿಂದ ಎಲ್ಲಾ  ಕ್ರಮಗಳನ್ನುತೆಗೆದುಕೊಳುವಂತೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next