ಸಭೆಯಲ್ಲಿ ಅಂಗೀಕಾರಗೊಂಡಿದೆ. ನೇಮಕ ಹಗರಣದ ಸಂಚುಕೋರರಿಗೆ 15 ಲಕ್ಷದಿಂದ 10 ಕೋಟಿ ರೂ.ವರೆಗೆ ದಂಡ ವಿಧಿಸುವ ಜತೆಗೆ 8ರಿಂದ 12 ವರ್ಷಗಳ ಕಠಿನ ಶಿಕ್ಷೆ ವಿಧಿಸಲು ಸರಕಾರ ಮುಂದಾಗಿದೆ.
Advertisement
ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದರು. ಪಿಎಸ್‌ಐ ನೇಮಕದ ಜತೆಗೆ ತೀರಾ ಇತ್ತೀಚೆಗೆ ಪರೀಕ್ಷಾ ಪ್ರಾಧಿಕಾರ ನಡೆಸಿದ ನೇಮಕದಲ್ಲೂ ಅಕ್ರಮವಾಗಿದೆ. ಬ್ಲೂಟೂತ್ ಇತ್ಯಾದಿ ವೈಜ್ಞಾನಿಕ ಉಪಕರಣಗಳ ಬಳಕೆ ಜತೆಗೆ ಒಎಂಆರ್ ಶೀಟ್‌ಗಳ ದುರ್ಬಳಕೆ ಯಾಗಿದೆ. ಇದರಿಂದ ಲಕ್ಷಾಂತರ ಯುವಕರಿಗೆ ಅನ್ಯಾಯವಾಗಿದೆ.
Related Articles
– ಅಕ್ರಮಕ್ಕೆ ಒಳಸಂಚು ನಡೆಸುವ ಅಥವಾ ಸಹಕಾರ ನೀಡುವವರ ಮೇಲಿನ ಆರೋಪ ಸಾಬೀತಾದರೆ 8ರಿಂದ 12 ವರ್ಷ ಕಠಿನ ಸಜೆ. 15 ಲಕ್ಷ ರೂ.ನಿಂದ 10 ಕೋಟಿ ರೂ.ವರೆಗೆ ದಂಡ. ದಂಡ ಕಟ್ಟಲು ತಪ್ಪಿದರೆ ಮತ್ತೆ ಎರಡು ವರ್ಷ ಸಜೆ.
– ನಕಲಿ ದಾಖಲೆ ಅಥವಾ ಒಬ್ಬರ ಪರವಾಗಿ ಇನ್ನೊಬ್ಬರು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಆರೋಪಿಗಳಿಗೆ ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದು.
– ಸಿಕ್ಕಿಬಿದ್ದ ಪರೀಕ್ಷಾರ್ಥಿ ಎರಡು ವರ್ಷದವರೆಗೆ ಇನ್ಯಾವುದೇ ಪರೀಕ್ಷೆ ಬರೆಯದಂತೆ ನಿರ್ಬಂಧಿಸುವುದು.
– ಪರೀಕ್ಷಾ ಅಕ್ರಮದ ಮೂಲಕ ಗಳಿಸಿದ ಉದ್ಯೋಗದಿಂದ ಸಂಪಾದಿಸಿದ ಎಲ್ಲ ಬಗೆಯ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು.
– ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ದರ್ಜೆ ಅಧಿಕಾರಿಯಿಂದ ಪ್ರಕರಣದ ತನಿಖೆ.
– ಈ ಪ್ರಕರಣವನ್ನು ಸಜ್ನೆàಯ, ಜಾಮೀನು ರಹಿತ ಹಾಗೂ ರಾಜಿ ಸಂಧಾನ ಮಾಡಿಕೊಳ್ಳಲಾಗದ ಪ್ರಕರಣ ಎಂದು ಪರಿಗಣಿಸುವುದು.
Advertisement
ಯಾವ್ಯಾವ ಪರೀಕ್ಷೆ ಅನ್ವಯ ? :-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)
-ಪರೀಕ್ಷಾ ಪ್ರಾಧಿಕಾರ (ಕೆಇಎ)
-ರಾಜ್ಯ ಸರಕಾರದ ಎಲ್ಲ ಪ್ರಾಧಿಕಾರ ಹಾಗೂ ಏಜೆನ್ಸಿ ಮೂಲಕ ನಡೆಯುವ ನೇಮಕ.
-ರಾಜ್ಯ ಧನಸಹಾಯ ಪಡೆದ ವಿಶ್ವವಿದ್ಯಾನಿಲಯಗಳು.
-ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ.
-ಪೊಲೀಸ್ ನೇಮಕ ಮತ್ತು ಮುಂಭಡ್ತಿ.
-ಸರಕಾರಿ ಒಡೆತನದ ಸಾರ್ವಜನಿಕ ಉದ್ಯಮ.
-ಎಲ್ಲ ಸೊಸೈಟಿ, ನಿಗಮ, ಸ್ಥಳೀಯ ಸಂಸ್ಥೆ, ರಾಜ್ಯ ಸರಕಾರದ ಸಾರ್ವಜನಿಕ – ವಲಯದ ಉದ್ಯಮ ನಡೆಸುವ ಪರೀಕ್ಷೆಗಳಿಗೆ ಈ ನಿಯಮ ಅನ್ವಯವಾಗಲಿದೆ.