Advertisement

ಕ್ರೀಡಾಂಗಣಕ್ಕೆ 10 ಕೋ.ರೂ. ಬಿಡುಗಡೆ: ಸಚಿವ ರೈ

04:18 PM Dec 14, 2017 | Team Udayavani |

ಬಂಟ್ವಾಳ: ಬೆಂಜನಪದವು ಸರಕಾರಿ ಪ.ಪೂ. ಕಾಲೇಜಿನ ವಾರ್ಷಿಕ ಪ್ರತಿಭಾ ಪುರಸ್ಕಾರ ದಿನಾಚರಣೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಡಿ. 12ರಂದು ನಡೆಯಿತು.

Advertisement

ಕಾಲೇಜು ವಠಾರದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣಕ್ಕೆ 10 ಕೋ.ರೂ. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ ಎಂದರು. ಮುಖ್ಯ ಅತಿಥಿಗಳಾಗಿ ತುಂಬೆ ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ , ಅಮ್ಮುಂಜೆ ತಾ.ಪಂ. ಸದಸ್ಯ ಶಿವಪ್ರಸಾದ ಕನಪಾಡಿ, ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷ ಪ್ರೇಮಲತಾ, ಅಮ್ಮುಂಜೆ ಗ್ರಾ.ಪಂ. ಸದಸ್ಯರಾದ ಅಬ್ದುಲ್‌ ರಜಾಕ್‌, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಎಸ್‌.ಡಿ.ಎಂ.ಸಿ. ಸದಸ್ಯ ಅಬ್ದುಲ್‌ ರಹಿಮಾನ್‌, ದೇವಪ್ಪ ಮುಖಾರಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಉಪಪ್ರಾಂಶುಪಾಲೆ ಶ್ರೀದೇವಿ ವರದಿ ವಾಚಿಸಿದರು. ಬಹುಮಾನ ವಿತರಣ ಕಾರ್ಯಕ್ರಮವನ್ನು ಆಂಗ್ಲ ಭಾಷಾ ಶಿಕ್ಷಕಿ ಮರ್ಲಿನ್‌ ಮೇಬಲ್‌ ನೆರವೇರಿಸಿದರು.

ಪ್ರೋತ್ಸಾಹ ಬಹುಮಾನಗಳ ವಿತರಣೆಯ ನಿರ್ವಹಣೆಯನ್ನು ಶಿಕ್ಷಕಿ ಶಾಲಿನಿ ತಂತ್ರಿ, ಕ್ರೀಡಾ ವಿಭಾಗದ ವಿಜೇತ ಬಹುಮಾನಗಳ ನಿರ್ವಹಣೆಯನ್ನು ಶಿಕ್ಷಕ ಮಹಮ್ಮದ್‌ ಇಕ್ಬಾಲ್‌ ಯು.ಎ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next