Advertisement

ವಿಶ್ವದ ವಿವಿಧೆಡೆ ಜಾರಿಯಲ್ಲಿರೋ ವಿಚಿತ್ರ ದಂಡ ಪದ್ಧತಿ ಹೇಗಿದೆ ಗೊತ್ತಾ?

09:27 AM Sep 14, 2019 | Nagendra Trasi |

ಬನಿಯನ್‌ ಹಾಕಿ ಟ್ರಕರ್‌ ವಾಹನ ಚಲಾಯಿಸಿದಕ್ಕೊ ಅಥವಾ ಹವಾಯಿ ಚಪ್ಪಲ್‌ ತೊಟ್ಟು  ವಾಹನ ಚಲಾವಣೆ ಮಾಡಿದಕ್ಕೆ ದಂಡ ಹಾಕಿದ್ದ  ಪೊಲೀಸರ ವಿರುದ್ಧ  ಕೆಲ ಜನರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅದನ್ನು ಹಾಸ್ಯವಾಗಿ ಪರಿಗಣಿಸಿದ್ದರು. ಆದರೆ ಮತ್ತಷ್ಟು ವಿಚಿತ್ರ ಅನ್ನಿಸುವಂತಹ ದಂಡಗಳು ವಿದೇಶಗಳಲ್ಲಿ  ಚಾಲ್ತಿಯಲ್ಲಿದ್ದು , ಈ ವಿಷಯಗಳಿಗೂ ದಂಡ ತೆರಬೇಕೆ ಎಂಬ ಉದ್ಘಾರ ಬರುವುದು ಸುಳ್ಳಲ್ಲ.

Advertisement

ಇಲ್ಲಿ  ಜ್ಯೂಸಿ ಪದಾರ್ಥಗಳ ಬಳಕೆ ನಿಷಿದ್ಧ

ನೀವು ಜ್ಯೂಸಿ ಐಟಂಗಳ ಪ್ರಿಯರೋ ಅಥವಾ ಚೂಯಿಂಗ್‌ ಗಮ್‌ ಜಗಿಯುವ  ಹವ್ಯಾಸ ಉಳ್ಳವರೋ ಆಗಿದ್ದರೆ  ಸಿಂಗಾಪುರ್‌ಗೆ ಹೋಗುವ ಮುನ್ನ ಹತ್ತಾರು ಬಾರಿ ಯೋಚಿಸಿ. ಏಕೆಂದರೆ ಇಲ್ಲಿ ಈ ಪದಾರ್ಥಗಳನ್ನು ಆಮದು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು,  ಇಂತಹ ಪದಾರ್ಥಗಳನ್ನು ಬಳಕೆ ಮಾಡಿದವರಿಗೆ 5,500 ದಂಡದೊಂದಿಗೆ, ಒಂದು ವರ್ಷ ಜೈಲು ವಾಸವನ್ನು ವಿಧಿಸಲಾಗುತ್ತದೆ.

ಗ್ರೀಸ್ ನಲ್ಲಿ ಪಾದರಕ್ಷೆಗೆ ನಿಷೇಧ:

ಗ್ರೀಸ್‌ ದೇಶ ಹೈ ಹೀಲ್ಡ್ ಚಪ್ಪಲ್‌ ಧರಿಸುವಿಕೆಯನ್ನು ಪ್ರತಿಬಂಧಿಸಿದೆ. ವಿಶೇಷವಾಗಿ ಐತಿಹಾಸಿಕ ಸ್ಥಳಗಳಲ್ಲಿ  ಹೈ ಹೀಲ್ಡ್ ಪಾದರಕ್ಷೆಗಳನ್ನು ಧರಿಸಿ ಸ್ಥಳ ನೋಡುವುದಕ್ಕೆ ಹೋಗುವವರಿಗೆ ಪ್ರವೇಶವನ್ನು ನಿಷೇಧಿಸಿದೆ.

Advertisement

ನಿಮ್ಮ  ಜುಟ್ಟು  ಸರಕಾರದ ಕೈಯಲ್ಲಿ:

ಉತ್ತರ  ಕೋರಿಯಾದ ಸರಕಾರ ಅಲ್ಲಿನ ಜನರ ಜುಟ್ಟನ್ನು  ತನ್ನ ಮುಷ್ಟಿಯಲ್ಲಿ  ಹಿಡಿದುಕೊಂಡಿದೆ. ಅಂದರೆ ಇಂತದೇ ಕೇಶ ವಿನ್ಯಾಸ ಮಾಡಿಕೊಳ್ಳಬೇಕೆಂಬ ಕಾನೂನು ಇದ್ದು, ಮಹಿಳೆಗೆ 18 ಹಾಗೂ ಪುರುಷರಿಗೆ 10 ವಿವಿಧ ಹೇರ್‌ಸ್ಟೈಲ್‌ಗ‌ಳ ಪಟ್ಟಿ ಮಾಡಿದೆ.

ತಪ್ಪು ಒಬ್ಬನದು, ಶಿಕ್ಷೆ ಇಡೀ ಕುಟುಂಬಕ್ಕೆ:

ಹೌದು ಇಂತಹ ಒಂದು ವಿಚಿತ್ರ ಕಾನೂನನ್ನು ಉತ್ತರ  ಕೋರಿಯಾ  ಜಾರಿಗೊಳಿಸಿದೆ. ಯಾರಾದರು ಒಬ್ಬ ವ್ಯಕ್ತಿ ಆಪರಾಧ ಕೃತ್ಯವೆಸಗಿದ್ದಾರೆ, ಆತನ ಕುಟುಂಬದ ಮಂದಿಗೆಲ್ಲಾ  ಶಿಕ್ಷೆ ವಿಧಿಸುತ್ತದೆ.

ಮೂರು ಚಾನಲ್‌ಗ‌ಳ ವೀಕ್ಷಣೆಗೆ  ಮಾತ್ರ ಅವಕಾಶ

ಇಲ್ಲಿ ಕೇವಲ ಮೂರು ಟಿವಿ ಚಾನೆಲ್‌ಗ‌ಳು ಮಾತ್ರ ಚಾಲ್ತಿಯಲ್ಲಿದ್ದು, ಸರಕಾರ ಈ ಮೂರು ಚಾನೆಲ್‌ಗ‌ಳ ವೀಕ್ಷಣೆಗೆ ಮಾತ್ರ ಅವಕಾಶ ನೀಡಿದೆ.

12 ಗಂಟೆ ನಂತರ ಪಿಂಕ್‌ ಪ್ಯಾಂಟ್‌ ಹಾಕುವ ಹಾಗಿಲ್ಲ…

ಆಸ್ಟ್ರೇಲಿಯಾದಲ್ಲಿ  ಇಂತಹ ಒಂದು ನಿಯಮವಿದ್ದು, ಯಾರು ಭಾನುವಾರು 12 ಗಂಟೆ ನಂತರ ಪಿಂಕ್‌ ಪ್ಯಾಂಟ್‌ ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ  ಓಡಾಡುತ್ತಾರೋ ಅವರನ್ನು  ಬಂಧಿಸಲಾಗುತ್ತದೆ.

ಜಪಾನ್ ನಲ್ಲಿ ಸೊಂಟದ ಸುತ್ತಳತೆ 86ಕ್ಕಿಂತ ಜಾಸ್ತಿ ಇರಬಾರದು:

ಹೌದು ಜಪಾನ್‌ ನಿವಾಸಿಗಳ ಸೊಂಟದ ಸುತ್ತಳತೆ 86ಕ್ಕಿಂತ ಜಾಸ್ತಿ ಇರಬಾರದು. ಒಂದು ಪಕ್ಷ  ನಿಮ್ಮ ಬೊಜ್ಜು ಜಾಸ್ತಿಯಾಗಿ ಸುತ್ತಳತೆ ಹೆಚ್ಚಿತು ಎಂದರೆ ನೀವು ದಂಡ ಕಟ್ಟಬೇಕು.

ಆರು ಗಂಟೆ ನಂತರ ಹಾಡುವಂತಿಲ್ಲ!

ಕೆನಡಾ ದೇಶದಲ್ಲಿ  ಸಂಗೀತ ಕಛೇರಿ ಅಥವಾ ಬ್ರಾಡ್‌ಕಾಸ್ಟಿಂಗ್‌ ನಂತಹ ಕೆಲಸಗಳನ್ನು ಬೆಳಿಗ್ಗೆ  ಆರು ಗಂಟೆಯಿಂದ ಸಂಜೆ ಆರು ಗಂಟೆ ಒಳಗೆ ಮುಗಿಸಿಕೊಳ್ಳಬೇಕು. ಸಂಜೆ ಆರು ಗಂಟೆಗೆ ನಿಮ್ಮ  ಹಾಡುಗಾರಿಕೆ ಪ್ರತಿಭೆಯನ್ನು ಪ್ರದರ್ಶಸಿದರೆ ದಂಡ ತೆರಬೇಕಾಗುತ್ತದೆ.

ಬೇಬಿ ವಾಕರ್ಸ್‌ ಉಪಯೋಗ ಇಲ್ಲ

ನಾವು ಮಕ್ಕಳಿಗೆ  ನಡೆಯುವುದನ್ನು ಕಲಿಸುವುದಕ್ಕೆ ಉಪಯೋಗಿಸುವ ಬೇಬಿ ವಾಕರ್ಸ್‌ ಅನ್ನು ಕೆನಡಾದಲ್ಲಿ  ಬಳಸಿದರೆ ಒಂದು ಲಕ್ಷ ಡಾಲರ್‌ (ಕೆನಾಡ ಮೌಲ್ಯ) ದಂಡ ಕಟ್ಟಬೇಕಾಗುತ್ತದೆ.

ಶ್ವಾನದ ವಾಕಿಂಗ್‌ ಕಡ್ಡಾಯ

ರೋಮ್‌ ದೇಶದಲ್ಲಿ  ಪ್ರತಿದಿನ  ನಿಮ್ಮ  ಮನೆಯ ಶ್ವಾನಗಳನ್ನು ವಾಂಕಿಗ್‌ ಕರೆದುಕೊಂಡು ಹೋಗಬೇಕು. ಇಲ್ಲದಿದ್ದರೆ ನಿಮ್ಮ ಜೇಬಿನ  700 ರೂ. ಕತ್ತರಿ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next