Advertisement
ಕಾರಣವಿಷ್ಟೇ. ಅಲ್ಲೀಗ ಹಲವು ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಪ್ರಮುಖವಾಗಿ ಆಫ್ರಿಕಾದ 7 ರಾಷ್ಟ್ರಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಉದ್ಭವಿಸಿದೆ.
ಇನ್ನು ಮಧ್ಯ ಆಫ್ರಿಕಾದ ಗಣರಾಜ್ಯವೊಂದರಲ್ಲಿ ತನ್ನ 50 ಲಕ್ಷ ಜನರಿಗೆ ಮೂರು ವೆಂಟಿಲೇಟರ್‌ಗಳನ್ನಷ್ಟೇ ಹೊಂದಿದೆ. ಲೈಬೀರಿಯಾದಲ್ಲಿ 6 ವೆಂಟಿಲೇಟರ್‌ಗಳಿದ್ದು, ಅವುಗಳ ಪೈಕಿ ಒಂದು ಅಮೆರಿಕದ ರಾಯಭಾರ ಕಚೇರಿಯಲ್ಲಿದೆ. ಒಟ್ಟಾರೆ 41 ಆಫ್ರಿಕನ್ ದೇಶಗಳಲ್ಲಿ 2,000 ಕ್ಕಿಂತ ಕಡಿಮೆ ವೆಂಟಿಲೇಟರ್‌ಗಳಿವೆ. ಇವುಗಳ ನೆರವಿನಿಂದ ಈಗ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಕ್ಷಾಂತರ ಜನರಿಗೆ ಸೇವೆ ನೀಡಬೇಕು. ವಿಪರ್ಯಾಸ ಎಂದರೆ ಈ 41ರ ಪೈಕಿ 10 ರಾಷ್ಟ್ರಗಳಲ್ಲಿ ವೆಂಟಿಲೇಟರ್ ಎಂದರೇನು ಎಂಬುದೇ ಗೊತ್ತಿಲ್ಲ.
Related Articles
ವಿಶ್ವ ಸಂಸ್ಥೆ ಪ್ರಕಾರ ಆಫ್ರಿಕಾದ ಕೆಲವು ಭಾಗಗಳಲ್ಲಿ ಶುದ್ಧ ನೀರಿನ ಕೊರತೆ ಇದೆ. ಸಬ್ -ಸಹಾರನ್‌ನ ಆಫ್ರಿಕನ್ನರಲ್ಲಿ ಕೇವಲ ಶೇ. 15 ಮಂದಿಗೆ ಮಾತ್ರ ಕೈ ತೊಳೆಯುವ ಸೌಲಭ್ಯವಿದೆ. ಲೈಬೀರಿಯಾದಲ್ಲಿ 2017ರ ಮಾಹಿತಿಯಂತೆ ಶೇ. 97 ಮನೆಗಳಲ್ಲಿ ಶುದ್ಧ ನೀರು ಮತ್ತು ಮೈ ಕೈ ತೊಳೆಯಲು ಸಾಬೂನು ಇಲ್ಲವಂತೆ. ಈ ಮಧ್ಯೆ ಆಫ್ರಿಕಾದಲ್ಲಿ ಇತರ ರಾಷ್ಟ್ರಗಳಂತೆ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿಲ್ಲ. ಸೀಮಿತ ಪರೀಕ್ಷಾ ಕೇಂದ್ರಗಳಿರುವುದೂ ಕಾರಣ. ಇದರಿಂದಾಗಿ ಯಾರಿಗೆಲ್ಲಾ ಕೋವಿಡ್ ವೈರಸ್ ಸೋಂಕುಗಳನ್ನು ತಗುಲಿದೆ ಎಂಬುದನ್ನು ತಿಳಿಯಲಾಗುತ್ತಿಲ್ಲ. ಇವುಗಳ ಮಧ್ಯೆ ಹಲವು ಆಫ್ರಿಕನ್ ದೇಶಗಳಲ್ಲಿ ಸೋಂಕು ಹರಡುತ್ತಿದೆ. ಪ್ರತಿ ಆರು ದಿನಗಳಿಗೊಮ್ಮೆ ಗಿನಿಯಾದಲ್ಲಿನ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಘಾನಾದಲ್ಲಿ ಒಂಬತ್ತು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ 2,600ಕ್ಕೂ ಹೆಚ್ಚು ಪ್ರಕರಣಗಳಿದ್ದರೆ, ಕ್ಯಾಮರೂನ್‌ನಲ್ಲಿ ಸುಮಾರು ಸಾವಿರ ಪ್ರಕರಣಗಳಿವೆ.
Advertisement
ಎಷ್ಟು ಹಾಸಿಗೆಗಳಿವೆಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಂತೆ ಆಫ್ರಿಕಾದ 55 ದೇಶಗಳ ಪೈಕಿ 43 ರಾಷ್ಟ್ರಗಳಲ್ಲಿ 5000 ಕ್ಕಿಂತಲೂ ಕಡಿಮೆ ತೀವ್ರ ನಿಗಾ ವ್ಯವಸ್ಥೆಯ ಹಾಸಿಗೆಗಳಿವೆ. ಅಂದರೆ 1 ಲಕ್ಷ ಮಂದಿಗೆ 5 ಹಾಸಿಗೆಗಳು. ಆದರೆ ಯುರೋಪಿನಲ್ಲಿ ಪ್ರತಿ 1 ಲಕ್ಷ ಜನರಿಗೆ ಸುಮಾರು 4,000 ಹಾಸಿಗೆಗಳಿವೆ ಎನ್ನಲಾಗಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಆಫ್ರಿಕಾಕ್ಕೆ ಬೇರೆ ಬೇರೆ ರಾಷ್ಟ್ರಗಳು, ಸಂಘಸಂಸ್ಥೆಗಳು ವೆಂಟಿಲೇಟರ್ ದಾನ ಮಾಡಲು ಮುಂದಾಗಿವೆ. ಆದರೆ ಯಂತ್ರಗಳನ್ನು ಚಾಲನೆ ಮಾಡಲು ತರಬೇತಿ ಪಡೆದ ವೈದ್ಯಕೀಯ ಸಿಬಂದಿ ಇಲ್ಲ. ಜತೆಗೆ ಅಗತ್ಯ ವಿದ್ಯುತ್ ಸರಬರಾಜು ಮತ್ತು ಆಮ್ಲಜನಕ ಪೂರೈ ಕೆಯೂ ಕಷ್ಟ. ಕೇವಲ ಶೇ. 3 ರಷ್ಟು ರೋಗಿಗಳಿಗೆ ಮಾತ್ರ ವೆಂಟಿಲೇಟರ್‌ಗಳು ಬೇಕು ಎನ್ನುತ್ತಾರೆ ಇಥಿಯೋಪಿಯಾದ ವೈದ್ಯಕೀಯ ಪರಿಣಿತರು. ಆದರೆ ಪರಿಸ್ಥಿತಿ ಇದಕ್ಕಿಂತ ಗಂಭೀರವಾಗಿದೆ.