Advertisement

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

10:27 AM Oct 21, 2021 | Team Udayavani |

ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮದಲ್ಲಿ ಈಗ ಬಹಳಷ್ಟು ಮಂದಿ ಹಲವಾರು ರೀತಿಯಲ್ಲಿ ಪ್ರಸಿದ್ದರಾಗುತ್ತಿದ್ದಾರೆ. ವರ್ಚುವಲ್ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿತ್ತಿದ್ದಾರೆ. ಪ್ರಯಾಣ ಮತ್ತು ಆಹಾರದಿಂದ ಆರೋಗ್ಯ ಮತ್ತು ಸೌಂದರ್ಯದವರೆಗೆ ಬಹಳಷ್ಟು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಶಾಲಿಯಾಗಿ ಮಿಂಚುತ್ತಿದ್ದಾರೆ. ಹೀಗೆಯೇ ಒಂದು ವರ್ಷದ ಮಗುವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ತಿಂಗಳಿಗೆ 75000 ರೂ. ಸಂಪಾದನೆ ಮಾಡುತ್ತಿದೆ.

Advertisement

ಡೈಲಿ ಮೇಲ್ ಪ್ರಕಾರ, ಈ ಪ್ರಭಾವಶಾಲಿ ಮಗು ಈಗಾಗಲೇ 45 ವಿಮಾನಗಳಲ್ಲಿ ಪ್ರಯಾಣಿಸಿದೆ. ಅಲಾಸ್ಕಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಉತಾಹ್ ಮತ್ತು ಇಡಾಹೋ ಸೇರಿದಂತೆ 16 ಯುಎಸ್ ರಾಜ್ಯಗಳಿಗೆ ಭೇಟಿ ನೀಡಿದೆ. ಇದಲ್ಲದೆ, ಕಳೆದ ವರ್ಷ ಅಕ್ಟೋಬರ್ 14 ರಂದು ಜನಿಸಿದ ಬೇಬಿ ಬ್ರಿಗ್ಸ್ ಕೇವಲ ಮೂರು ವಾರಗಳ ವಯಸ್ಸಿನಲ್ಲಿ ತನ್ನ ಮೊದಲ ಪ್ರವಾಸ ಮಾಡಿದೆ ಎಂದು ಮಗುವಿನ ತಾಯಿ ಜೆಸ್ ಮಾಹಿತಿ ನೀಡಿದ್ದಾರೆ. ಅಲಾಸ್ಕಾದ ಕರಡಿಗಳನ್ನು, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ತೋಳಗಳನ್ನು, ಉತಾಹ್ ನ ಸೂಕ್ಷ್ಮವಾದ ಕಮಾನು ಮತ್ತು ಕ್ಯಾಲಿಫೋರ್ನಿಯಾದ ಕಡಲತೀರಗಳನ್ನು ಮಗು ಈಗಾಗಲೇ ನೋಡಿದೆ.

ಇದನ್ನೂ ಓದಿ:ಟ್ರಕ್ಕಿಂಗ್: ಹಿಮಾಚಲ್ ಪ್ರದೇಶದಲ್ಲಿ 17 ಚಾರಣಿಗರು ನಾಪತ್ತೆ, ಶೋಧ ಕಾರ್ಯ ಆರಂಭ

ಇನ್ಸ್ಟಾಗ್ರಾಮ್ ನಲ್ಲಿ 30,000 ಕ್ಕೂ ಅಧಿಕ ಫಾಲೊವರ್ಸ್ ಹೊಂದಿರುವ ಬ್ರಿಗ್ಸ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ತಾಯಿ ಈಗಾಗಲೇ ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗ್ ಅನ್ನು ನಡೆಸುತ್ತಿದ್ದರು. ಅದರ ಮೂಲಕ ಅವರು ಪ್ರಪಂಚದಾದ್ಯಂತ ಪ್ರಯಾಣಿಸಲು ಹಣ ಪಡೆಯುತ್ತಿದ್ದರು. ” ನಾನು 2020 ರಲ್ಲಿ ಬ್ರಿಗ್ಸ್‌ನೊಂದಿಗೆ ಗರ್ಭಿಣಿಯಾದಾಗ, ನನ್ನ ವೃತ್ತಿಜೀವನವು ಮುಗಿದಿದೆ ಎಂದು ನಾನು ನಿಜವಾಗಿಯೂ ಹೆದರುತ್ತಿದ್ದೆ, ಏಕೆಂದರೆ ಮಗುವಿನೊಂದಿಗೆ ಮುಂದುವರಿಯುವುದು ಸಾಧ್ಯವೇ ಎಂದು ನನಗೆ ತಿಳಿದಿರಲಿಲ್ಲ” ಎಂದು ಜೆಸ್ ಹೇಳಿದರು.

Advertisement

“ನನ್ನ ಗಂಡ ಮತ್ತು ನಾನು ಅದನ್ನು ಕಾರ್ಯಗತಗೊಳಿಸಲು ನಿಜವಾಗಿಯೂ ಬಯಸಿದ್ದೆವು. ಹಾಗಾಗಿ ನಾನು ಮಗುವಿನ ಪ್ರಯಾಣದ ಬಗ್ಗೆ ಮಾಹಿತಿ ನೀಡುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಲು ಆರಂಭಿಸಿದೆ, ನನಗೆ ಒಂದೇ ಒಂದು ಸಿಗಲಿಲ್ಲ! ಹೀಗಾಗಿ ಮಗುವಿನೊಂದಿಗೆ ಪ್ರಯಾಣಿಸುವ, ಒಳ್ಳೆಯ ಮತ್ತು ಕೆಟ್ಟದ್ದನ್ನು ಹಂಚಿಕೊಳ್ಳುವ ಒಂದು ಮೋಜಿನ ಮಾರ್ಗವಾಗಿ ಸಾಮಾಜಿಕ ಮಾಧ್ಯಮ ಖಾತೆ ತೆರೆಯಲು ನಿರ್ಧರಿಸಿದೆ” ಅವರು ಹೇಳಿದರು.

ಕೋವಿಡ್ -19 ಲಾಕ್‌ಡೌನ್‌ಗಳ ವೇಳೆ ಕುಟುಂಬವು ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ಮೂಲಕ ಪ್ರಯಾಣಿಸಿತು. “ನಾವು ದೊಡ್ಡ ನಗರ ಪ್ರಯಾಣವನ್ನು ತಪ್ಪಿಸಿದೆವು, ಹಾಗಾಗಿ ನಾವು ನ್ಯೂಯಾರ್ಕ್ ನಗರದಂತಹ ಸ್ಥಳಗಳಿಗೆ ಹೋಗಿಲ್ಲ. ಬದಲಾಗಿ ನಾವು ಹೆಚ್ಚು ಪ್ರಚಾರ ಪಡೆಯದ ಸ್ಥಳಗಳನ್ನು ಹುಡುಕುವತ್ತ ಗಮನಹರಿಸಿದ್ದೇವೆ”ಎಂದು ಜೆಸ್ ಡೈಲಿ ಮೇಲ್‌ಗೆ  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next