Advertisement

ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು: ಪೋಷಕರೇ ಎಚ್ಚರ!

07:47 PM Feb 06, 2021 | Team Udayavani |

ತೀರ್ಥಹಳ್ಳಿ: ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದೂರಿನಲ್ಲಿ ಎಳೆಯ ಕಂದಮ್ಮ ಹಸುಗೂಸು ಒಂದು ವರ್ಷ ಒಂದು ತಿಂಗಳ ಮಗುವೊಂದು ಮನೆಯಲ್ಲಿ ವೀಳ್ಯದೆಲೆ ಹಾಕುವ ಬಟ್ಟಲಿನಲ್ಲಿದ್ದ ಅಡಿಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಮನಕಲುಕುವ ಧಾರುಣ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಹೆದೂರಿನ ಅರ್ಚನಾ ಸಂದೇಶ್ ದಂಪತಿಗಳ ಪುತ್ರ ಶ್ರೀಹಾನ್ ಎಂದು ತಿಳಿದುಬಂದಿದೆ ವಿಷಯ ತಿಳಿಯುತ್ತಿದ್ದಂತೆ ಅದೆ ರಸ್ತೆಯಲ್ಲಿ ಸಂಚಾರಿಸುತಿದ್ದ ಆರೋಗ್ಯ ಸಹಾಯಕಿ ಲಕ್ಮೀ ಎಂಬುವರು ಗಮನಿಸಿ ಅ ಮಗುವನ್ನು ಕೂಡಲೇ ಹತ್ತಿರದ ಕಾಟಗಾರು ಆಸ್ಪತ್ರೆಗೆ ರವಾನಿಸಲು ತಿಳಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸ್ಥಳೀಯ ವಾಹನದಲ್ಲಿ ರವಾನಿಸಿದ್ದಾರೆ. ದಾರಿ ಮಧ್ಯೆ ವಾಹನದಿಂದ ಸ್ಥಳಂತರಿಸಿ ಅಂಬುಲೈಸ್ ಮುಖಾಂತರ ಜೆಸಿ ಆಸ್ಪತ್ರೆಗೆ ಕರೆತಂದರಾದರು ಮಗು ಚಿಕಿತ್ಸೆ ಪಲಕಾರಿಯಾಗದೆ ಅಸುನಿಗಿದೆ.

ಇವರ ತಂದೆ ಸಂದೇಶ್ ದೂರದ ಬೆಂಗಳೂರಿನಲ್ಲಿದ್ದು ಲಾಕ್ ಡೌನ್ ಸಂದರ್ಭ ಮಗು ಮತ್ತು ತಾಯಿಯನ್ನು ಹೆದೂರಿನಲ್ಲಿ ಬಿಟ್ಟಿದ್ದರು. ನಿನ್ನೆಯಷ್ಟೇ ಸಂದೇಶ್ ಫೋನ್ ಮಾಡಿ ಬಾನುವಾರ ಬಂದು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ ವಿದಿಯಾಟ ಮಗು ಅಡಿಕೆ ನುಂಗಿ ಶನಿವಾರ ಅಸುನಿಗಿದೆ. ಈ ಮಗು ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಕೂಡ ಗಳಿಸಿತ್ತು ಎನ್ನಲಾಗಿದೆ.

ಇದನ್ನೂ ಓದಿ:Backward Body skip ಮಾಡುವ ಮೂಲಕ 6ನೇ ವಿಶ್ವದಾಖಲೆ ನಿರ್ಮಿಸಿದ ತನುಶ್ರೀ ಪಿತ್ರೋಡಿ

ಪೋಷಕರೇ ಎಚ್ಚರ
ಮಲೆನಾಡಿನಲ್ಲಿ ಈಗಾಗಲೇ ಅಡಿಕೆ ಕೊಯ್ಲಿನ ಅಂತಿಮ ಹಂತದ ಸಮಯವಾಗಿದ್ದು ಎಲ್ಲಾ ಕಡೆಗಳಲ್ಲಿ ಅಡಿಕೆ ಸುಲಿದು ಬೇಯಿಸಿ ಒಣಗಿಸಿರುತ್ತಾರೆ ಈ ಸಮಯದಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ಅಡಿಕೆ ಕೆಲಸ ಮಾಡುವಾಗ ಜಾಗೃತಿ ವಹಿಸಿ ಯಾವುದೇ ರೀತಿಯ ಅವಗಡವಾಗದಂತೆ ಎಚ್ಚರವಹಿಸುವು ಉತ್ತಮ.

Advertisement
Advertisement

Udayavani is now on Telegram. Click here to join our channel and stay updated with the latest news.

Next