ಜಮ್ಮು-ಕಾಶ್ಮೀರ: ಅವಂತಿಪೋರಾದ ತ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಂದು ಮುಂಜಾನೆ ಎನ್ ಕೌಂಟರ್ ಮೂಲಕ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಹತ್ಯೆಯಾದ ಉಗ್ರನ ಗುರುತು ಪತ್ತೆಯಾಗಿಲ್ಲವಾಗಿದ್ದು, ಅವಂತಿಪೋರಾದಲ್ಲಿ ಕಾರ್ಯಚರಣೆ ಪ್ರಗತಿಯಲ್ಲಿದೆ ಎಂದು ಜಮ್ಮು ಕಾಶ್ಮಿರ ಪೋಲಿಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್ ಪಿಎಫ್ ಯೋಧರು ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದು ತ್ರಾಲ್ ನ ಛೆನಾ ಉಲಾರ್ ಪ್ರದೇಶದಲ್ಲಿ ಅಡಿಗಿದ್ದ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಇನ್ನು ಹಲವು ಉಗ್ರರು ಅಡಗಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಭದ್ರತಾ ಪಡೆಗಳು ಜಮ್ಮು ಕಾಶ್ಮೀರದಲ್ಲಿ ಈ ವರ್ಷದ ಆರಂಭದಿಂದ ಸುಮಾರು 100 ಉಗ್ರರನ್ನು ಹೊಡೆದುರುಳಿಸಿವೆ. ಹಲವು ಎನ್ ಕೌಂಟರ್ ಗಳು ದಕ್ಷಿಣ ಕಾಶ್ಮೀರ ಪ್ರದೇಶದಲ್ಲೇ ನಡೆದಿವೆ. ಮಾತ್ರವಲ್ಲದೆ ಈ ಪ್ರದೇಶವನ್ನು ಉಗ್ರರ ಅಡುಗುತಾಣವೆಂದೇ ಕರೆಯಲಾಗಿದೆ.