ಇಂಫಾಲ್: ಮಣಿಪುರದ ವಿಧಾನಸಭೆಯ ಮತದಾನದ ವೇಳೆ ಕರೋಂಗ್ ಕ್ಷೇತ್ರದಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮ ಭದ್ರತಾ ಪಡೆಯ ಗುಂಡಿನ ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶನಿವಾರ (ಮಾರ್ಚ್ 05) ನಡೆದಿದೆ. ಮಣಿಪುರದ 10 ಜಿಲ್ಲೆಗಳಲ್ಲಿನ 22 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ನಡುವಿನ ಸಮರ; ತಾತ್ಕಾಲಿಕ ಕದನ ವಿರಾಮ ಘೋಷಣೆಗೆ ಕಾರಣವೇನು? ಅಂತಿಮ ಗಡುವು
ಬೆಳಗ್ಗೆ 11ಗಂಟೆವರೆಗೆ ಶೇ.28.20ರಷ್ಟು ಮತದಾನ ನಡೆದಿದ್ದು, 2017ಕ್ಕೆ ಹೋಲಿಸಿದಲ್ಲಿ ಇದು ಶೇ.16.80ರಷ್ಟು ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದಾಗಿ ವರದಿ ತಿಳಿಸಿದೆ. ಮಣಿಪುರದ ತೌಬಾಲ್ ಜಿಲ್ಲೆ ಮತ್ತು ನಾಗಾ ಪ್ರಾಬಲ್ಯದ ಬೆಟ್ಟಪ್ರದೇಶಗಳು ಈ ಬಾರಿ ಆಡಳಿತಾರೂಢ ಬಿಜೆಪಿ ಕಠಿಣ ಸವಾಲನ್ನು ಎದುರಿಸುವಂತಾಗಿದೆ.
ಈ ಜಿಲ್ಲೆಗಳು ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಮತ್ತು ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಇದು ಬಂದ್ ಹಾಗೂ ರಸ್ತೆತಡೆಯ ಪ್ರಮುಖ ಕೇಂದ್ರ ಸ್ಥಳಗಳಾಗಿದೆ ಎಂದು ವರದಿ ವಿವರಿಸಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಹಿಂಸಾಚಾರವನ್ನು ನಡೆಯದಂತೆ ತಡೆಯುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ.
ಮಣಿಪುರದ ಎರಡನೇ ಹಂತದ ಚುನಾವಣೆಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ನ ಓಕ್ರಾಮ್ ಇಬೋಬಿ ಸಿಂಗ್ ಮತ್ತು ಮಾಜಿ ಉಪಮುಖ್ಯಮಂತ್ರಿ ಖೈಕಾಂಗಮ್ ಗಾಂಗ್ ಮೈ ಚುನಾವಣಾ ಅಖಾಡದಲ್ಲಿರುವುದಾಗಿ ವರದಿ ಹೇಳಿದೆ.
ಎರಡನೇ ಹಂತದಲ್ಲಿ 8.38 ಲಕ್ಷ ಮತದಾರರಿದ್ದು, ಭಾರತೀಯ ಜನಾತ ಪಕ್ಷ 22 ಅಭ್ಯರ್ಥಿಗಳನ್ನು, ಕಾಂಗ್ರೆಸ್ 18, ನ್ಯಾಷನಲ್ ಪೀಪಲ್ಸ್ ಪಾರ್ಟಿ 11, ಜನತಾ ದಳ (ಸಂಯುಕ್ತ) 10 ಹಾಗೂ ನಾಗಾ ಪೀಪಲ್ಸ್ ಫ್ರಂಟ್ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ವರದಿ ತಿಳಿಸಿದೆ.