Advertisement

1 ಕಿಲೋ ಮೀನಿನಲ್ಲಿ ಶೇ. 63.6 ಫಾರ್ಮಾಲಿನ್‌!

01:31 PM Jun 26, 2018 | Harsha Rao |

ಕಾಸರಗೋಡು: “ಆಪರೇಶನ್‌ ಸಾಗರ ರಾಣಿ’ ಹೆಸರಿನ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ 6 ಸಾವಿರ ಕಿ.ಗ್ರಾಂ ಸಿಗಡಿಯಲ್ಲಿ ವಿಷಕಾರಿ ಫಾರ್ಮಾಲಿನ್‌ ಇರುವುದು ದೃಢವಾಗಿದೆ. ಒಂದು ಕಿ.ಗ್ರಾಂ ಸಿಗಡಿಯಲ್ಲಿ ಶೇ. 63.6ರಷ್ಟು ಫಾರ್ಮಾಲಿನ್‌ ಅಂಶ ಇರುವುದು ಪ್ರಾಥಮಿಕ ತಪಾಸಣೆಯಲ್ಲಿ ಪತ್ತೆಯಾಗಿದೆ.

Advertisement

ಶವಾಗಾರದಲ್ಲಿ ಶವಗಳು ಕೆಡದಂತೆ ಬಳಸುವ ವಿಷಕಾರಿ ರಾಸಾಯನಿಕ ಫಾರ್ಮಾಲಿನ್‌ ಉಪಯೋಗಿಸಿ ಮೀನುಗಳನ್ನು ಕೆಡದಂತೆ ಕಾಯ್ದಿಡಲಾಗುತ್ತಿದೆ. ಫಾರ್ಮಾಲಿನ್‌ ದೇಹದೊಳಗೆ ಹೋದಲ್ಲಿ ಕ್ಯಾನ್ಸರ್‌ ಸಹಿತ ಮಾರಕ ರೋಗಗಳು ಬಾಧಿಸುವ ಸಾಧ್ಯತೆಯಿದೆ.

ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಮಂಡಳಿ (ಸಿಫ್ಟ್‌) ಅಭಿವೃದ್ಧಿಪಡಿಸಿದ ಸ್ಟ್ರಿಪ್‌ ಬಳಸಿ ಆಹಾರ ಸುರಕ್ಷಾ ಅಧಿಕಾರಿಗಳು ಪ್ರಾಥಮಿಕ ತಪಾಸಣೆ ನಡೆಸುತ್ತಿದ್ದಾರೆ. ಆ ಬಳಿಕ ಕೊಚ್ಚಿಯಲ್ಲಿರುವ ಸಿಫ್ಟ್‌ನ ಲ್ಯಾಬ್‌ಗ ಸಿಗಡಿಯನ್ನು ರವಾನಿಸಲಾಗಿದೆ. ಆಂಧ್ರಪ್ರದೇಶದಿಂದ ಕಂಟೈನರ್‌ನಲ್ಲಿ ತಂದ ಸಿಗಡಿಯನ್ನು ಕೇರಳ ಗಡಿ ಪ್ರದೇಶದ ವಾಳಯಾರ್‌ ಚೆಕ್‌ಪೋಸ್ಟ್‌ನಲ್ಲಿ ಸ್ಟ್ರಿಪ್‌ ಬಳಸಿ ತಪಾಸಣೆ ಮಾಡಿದಾಗ ಮೀನುಗಳಲ್ಲಿ ಫಾರ್ಮಾಲಿನ್‌ ಇರುವುದು ಪತ್ತೆಯಾಯಿತು.

ಆಹಾರ ಸುರಕ್ಷಾ ಜಾಯಿಂಟ್‌ ಕಮಿಷನರ್‌ (ಅಡ್ಮಿನಿಸ್ಟ್ರೇಶನ್‌) ಎಂ. ಅನಿಲ್‌ ಕುಮಾರ್‌, ಪಾಲಾ^ಟ್‌ ಅಸಿಸ್ಟೆಂಟ್‌ ಕಮಿಷನರ್‌ ಕೆ.ಎಸ್‌. ಜಾರ್ಜ್‌ ವರ್ಗೀಸ್‌, ಫುಡ್‌ ಸೇಫ್ಟಿ ಅಧಿಕಾರಿಗಳಾದ ರಿನಿ ಮೋಣಿಕ್‌, ಸುಜಿತ್‌, ಅರುಣ್‌ ಪಿ. ಕಾರ್ಯಾಡ್‌, ಗೋಪ ಕುಮಾರ್‌, ಆಹಾರ ಸುರಕ್ಷಾ ಇಂಟಲಿಜೆನ್ಸ್‌ ವಿಭಾಗ ಅಧಿಕಾರಿಗಳಾದ ರಣ್‌ದೀಪ್‌, ಅಜಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

6 ಟನ್‌ ಮೀನು ವಾಪಸ್‌
ಕಳೆದ ವಾರ 12 ಟನ್‌ ಮೀನಿನಲ್ಲಿ ವಿಷಕಾರಿ ರಾಸಾಯನಿಕ ಬಳಸಿದ್ದು ಪತ್ತೆಯಾಗಿತ್ತು. ತಿರುವನಂತಪುರ ಅಮರವಿಳ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅನ್ಯ ರಾಜ್ಯಗಳಿಂದ ಬಂದ ಆರು ಟನ್‌ ಮೀನಿನಲ್ಲಿ ಫಾರ್ಮಾಲಿನ್‌ ಪತ್ತೆಯಾಗಿತ್ತು. ವಾಳಯಾರ್‌ನಲ್ಲಿ ಒಂದು ವಾರದ ಹಿಂದೆ ಸೇವನೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಆರು ಟನ್‌ ಮೀನನ್ನು ವಾಪಸು ಮಾಡಲಾಗಿತ್ತು.    

Advertisement

ಕಲಬೆರಕೆ ಪದಾರ್ಥ ನಿಷೇಧ
ಯಾವುದೇ ವಸ್ತುವಿಗೆ ಕಲಬೆರಕೆ ಮಾಡಿದ್ದು ಪತ್ತೆಯಾದಲ್ಲಿ ಅಂತಹ ವಸ್ತುಗಳನ್ನು ನಿಷೇಧಿಸಬೇಕೆಂದು ಆಹಾರ ಸುರಕ್ಷಾ ಕಮಿಷನರ್‌ ಎಂ.ಜಿ. ರಾಜಮಾಣಿಕ್ಯಂ ಎಲ್ಲ ಜಿಲ್ಲೆಗಳಿಗೂ, ಅಸಿಸ್ಟೆಂಟ್‌ ಆಹಾರ ಸುರಕ್ಷಾ ಕಮಿಷನರ್‌ಗಳಿಗೂ ನಿರ್ದೇಶ ನೀಡಿದ್ದಾರೆ. ಮೀನುಗಳಿಗೆ ರಾಸಾಯನಿಕ ವಸ್ತುಗಳನ್ನು ಬಳಸಿದ್ದಾರೆಯೇ ಎಂದು ಪತ್ತೆಹಚ್ಚಲು ಮಾರುಕಟ್ಟೆಗಳಲ್ಲೂ ತಪಾಸಣೆ ನಡೆಸಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next