ನವದೆಹಲಿ: ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬ ದಿನಕ್ಕೆ ಒಂದು ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ವರ್ಷಕ್ಕೆ ಬರೋಬ್ಬರಿ 1.2 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ.
ದೇವನ್ ಎಂಬ ಅಡ್ಡನಾಮದ ಟೆಕಿ, ಸಂಬಳದ ಜತೆಗೆ ಈ ವರ್ಷ ಬೋನಸ್ ಕೂಡ ಪಡೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಗೂಗಲ್ ಉಪಕರಣಗಳು ಹಾಗೂ ಉತ್ಪನ್ನಗಳಿಗೆ ಕೋಡ್ ಬರೆಯುವ ಕೆಲಸವನ್ನು ದೇವನ್ ಮಾಡುತ್ತಾರೆ. ತಮ್ಮ ಬಾಸ್ ನೀಡುವ ವಾರದ ಕೆಲಸವನ್ನು ಅವರು ಕೆಲವೇ ದಿನದಲ್ಲಿ ಪೂರ್ಣಗೊಳಿಸುತ್ತಾರೆ. ನಂತರ ಉಳಿದ ದಿನಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಕಳೆದ ಬಾರಿ ಪ್ರಾಜೆಕ್ಟ್ ಒಂದನ್ನು ಬೇಗ ಪುರ್ಣಗೊಳಿಸಿ, ಉಳಿದ ಅವಧಿಯಲ್ಲಿ ರಜೆ ಮೇಲೆ ಹವಾಯ್‌ಗೆ ಪ್ರವಾಸಕ್ಕೆ ಹೋಗಿದ್ದರು.
“ಕೆಲಸ-ಜೀವನದ ಸಮತೋಲನ ಮತ್ತು ಸೌಲಭ್ಯಗಳಿಗಾಗಿ ಅನೇಕ ಉದ್ಯೋಗಿಗಳು ಗೂಗಲ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾರ್ಡ್ ವರ್ಕ್ ಮಾಡುವ ಬದಲು ಸ್ಮಾರ್ಟ್ ವರ್ಕ್‌ಗೆ ನಾನು ಮೊರೆ ಹೋಗುತ್ತೇನೆ’ ಎಂದು ದೇವನ್ ಹೇಳಿದ್ದಾರೆ. ವಿಶಾಲವಾದ ಕ್ಯಾಂಪಸ್, ಉಚಿತ ಆಹಾರ ಮತ್ತು ದೊಡ್ಡ ಪ್ರಮಾಣದ ಸಂಬಳದ ಕಾರಣ ಗೂಗಲ್ ಕಂಪನಿ ಪ್ರಖ್ಯಾತವಾಗಿದೆ.