Advertisement

ಮೊಗವೀರ ಬಡಮಕ್ಕಳ ಉನ್ನತ ಶಿಕ್ಷಣಕ್ಕೆ 1 ಕೋ.ರೂ.: ಡಾ|ಜಿ. ಶಂಕರ್‌

10:23 PM May 01, 2022 | Team Udayavani |

ಕಾಪು: ಮೊಗವೀರ ಸಮುದಾಯದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಸಹಿತ ಸಮಗ್ರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ದ.ಕ. ಮೊಗವೀರ ಮಹಾಜನ ಸಂಘದ ಮೂಲಕ 1 ಕೋಟಿ ರೂ.ಗಳಷ್ಟು ವಿದ್ಯಾರ್ಥಿವೇತನ ವಿತರಣೆಗೆ ಯೋಜನೆ ರೂಪಿಸಲಾಗುವುದು ಎಂದು ಡಾ| ಜಿ. ಶಂಕರ್‌ ಹೇಳಿದರು.

Advertisement

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಸೇವೆ ಸಲ್ಲಿಸಿದವರಿಗೆ ರವಿವಾರ ಉಚ್ಚಿಲ ಮೊಗವೀರ ಭವನದಲ್ಲಿ ದ.ಕ. ಮೊಗವೀರ ಮಹಾ ಜನ ಸಂಘದ ವತಿಯಿಂದ ನಡೆದ ಕೃತಜ್ಞತೆ ಸಮರ್ಪಣೆ ಮತ್ತು ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ ವತಿಯಿಂದ ಗೌರವಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದೆಲ್ಲೆಡೆ ಶಾಖೆ
ವಿಸ್ತರಣೆಗೆ ಚಿಂತನೆ
ಮಹಾಲಕ್ಷ್ಮೀ ಕೋ ಆಪರೇಟಿಬ್‌ ಬ್ಯಾಂಕ್‌ ಲಿ. ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಮಾತನಾಡಿ, ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಸಮಸ್ತ ಹಿಂದೂ ಸಮಾಜದ ಶಕ್ತಿ ಕೇಂದ್ರವಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ಕಂಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತೀ ಜಿಲ್ಲಾ ಕೇಂದ್ರದಲ್ಲೂ ಮಹಾಲಕ್ಷ್ಮೀ ಬ್ಯಾಂಕಿನ ಶಾಖೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಮಾಜಿ ಶಾಸಕ ಯು.ಆರ್‌. ಸಭಾಪತಿ, ಉದ್ಯಮಿ ಹರಿಯಪ್ಪ ಕೋಟ್ಯಾನ್‌, ಗಣ್ಯರಾದ ಸುಭಾಶ್ಚಂದ್ರ ಮೆಂಡನ್‌, ಸುಧಾಕರ ಕುಂದರ್‌, ಭರತ್‌ ಎರ್ಮಾಳು, ಮೋಹನ್‌ ಕರ್ಕೇರ ತೋನ್ಸೆ, ಉದಯ ಕುಮಾರ್‌ ಹಟ್ಟಿಯಂಗಡಿ, ಸತೀಶ್‌ ಅಮೀನ್‌ ಬಾರ್ಕೂರು, ರಾಜೇಂದ್ರ ಸುವರ್ಣ, ನಿತಿನ್‌ ಕುಮಾರ್‌, ಶಶಿಕುಮಾರ್‌ ಮೆಂಡನ್‌, ಹರಿಯಪ್ಪ ಕೋಟ್ಯಾನ್‌, ಭರತ್‌ ಕುಮಾರ್‌ ಉಳ್ಳಾಲ, ಅನಿಲ್‌ ಕುಮಾರ್‌, ಅಜಿತ್‌ ಸುವರ್ಣ ಮುಂಬಯಿ, ರಮೇಶ್‌ ಕೋಟ್ಯಾನ್‌, ರಾಜು ವಂಡ್ಸೆ, ಮನೋಜ್‌ ಸಾಲ್ಯಾನ್‌ ವಂಡ್ಸೆ, ಅಪ್ಪಿ ಎಸ್‌. ಸಾಲಿಯಾನ್‌, ಯಶೋದಾ ಕರ್ಕೇರ ಉಪಸ್ಥಿತರಿದ್ದರು.

ಸಮ್ಮಾನ, ಅಭಿನಂದನೆ
ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ| ಜಿ. ಶಂಕರ್‌, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಜೀಣೊìàದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್‌, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್‌ ಅವರನ್ನು ಸಮ್ಮಾನಿಸಲಾಯಿತು. ಸುಮಾರು 3 ಸಾವಿರ ಸ್ವಯಂ ಸೇವಕ ರನ್ನು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

Advertisement

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರ. ಕಾರ್ಯದರ್ಶಿ ಸುಧಾಕರ ಕುಂದರ್‌ ವಂದಿಸಿದರು. ಸತೀಶ್‌ ಅಮೀನ್‌ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.

ಉಚ್ಚಿಲದಲ್ಲಿ ದಸರಾ
ಮಂಗಳೂರು ಮಾದರಿಯಲ್ಲಿ ಉಚ್ಚಿಲದಲ್ಲೂ ದಸರಾ ಆಯೋಜನೆಗೆ ಸಂಕಲ್ಪಿಸಲಾಗಿದೆ ಎಂದು ಡಾ| ಜಿ. ಶಂಕರ್‌ ಹೇಳಿದರು.

ಅತ್ಯುನ್ನತ ಪ್ರಶಸ್ತಿ ಲಭಿಸಲಿ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ಡಾ| ಜಿ. ಶಂಕರ್‌ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸುವಂತಾಗಬೇಕು ಎಂದು ಉದ್ಯಮಿ ಹರಿಯಪ್ಪ ಕೋಟ್ಯಾನ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next