Advertisement

1 ಕೋ. ರೂ. ರವಾನೆ: ಬೆಂಗಳೂರು ವ್ಯಕ್ತಿ ಸೆರೆ

04:04 AM May 18, 2019 | Team Udayavani |

ಮಂಗಳೂರು: ದಾಖಲೆ ಪತ್ರಗಳಿಲ್ಲದೆ ಬೆಂಗಳೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಒಂದು ಕೋಟಿ ರೂ. ನಗದು ಸಾಗಿಸುತ್ತಿದ್ದ ಮಲ್ಲೇಶ್ವರಂ ನಿವಾಸಿ ಮಂಜುನಾಥ್‌ (56) ಅವರನ್ನು ಬಂದರು ಪೊಲೀಸರು ಶುಕ್ರವಾರ ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಬಂಧಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಮಂಜುನಾಥ್‌ ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು ಕಾರ್‌ಸ್ಟ್ರೀಟ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತು ನಿರತ ಬಂದರು ಠಾಣೆ ಇನ್ಸ್‌ಪೆಕ್ಟರ್‌ ಗೋವಿಂದರಾಜು ಮತ್ತು ಸಿಬಂದಿ ಬ್ಯಾಗ್‌ ಪರಿಶೀಲಿಸಿದಾಗ 2,000 ರೂ. ಹಾಗೂ 500 ರೂ. ಮುಖಬೆಲೆಯ ಒಟ್ಟು 1 ಕೋಟಿ ರೂ. ಹಣ ಪತ್ತೆಯಾಯಿತು ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ಹಣಕ್ಕೆ ಸಂಬಂಧಿಸಿ ದಾಖಲೆ ಪತ್ರ ತೋರಿಸುವಂತೆ ಹೇಳಿದಾಗ ಯಾವುದೇ ದಾಖಲೆ ಪತ್ರಗಳು ಆತನ ಬಳಿ ಇರಲಿಲ್ಲ. ಸಮರ್ಪಕವಾದ ಉತ್ತರವನ್ನೂ ನೀಡದ ಕಾರಣ ಬಂಧಿಸಲಾಯಿತು. ಬೆಂಗಳೂರಿನ ವ್ಯಕ್ತಿಯೊಬ್ಬರು ನೀಡಿದ ಈ ಹಣವನ್ನು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನೀಡಲು ಬಂದಿದ್ದೇನೆ ಎಂದಷ್ಟೇ ಆತತಿಳಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಆಯುಕ್ತರು ಹೇಳಿ‌ರು.

ಬಿಗು ತಪಾಸಣೆ
ನಗರದಲ್ಲಿ ಅಕ್ರಮವಾಗಿ ಹಣದ ರವಾನೆಯಾಗುತ್ತಿದೆ ಎಂಬ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದ 3 ದಿನಗಳಿಂದ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದಾರೆ.

2 ವರ್ಷಗಳಲ್ಲಿ 2ನೇ ಪ್ರಕರಣ
ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಇಷ್ಟು ದೊಡ್ಡ ಮೊತ್ತದ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪತ್ತೆ ಹಚ್ಚಿರುವ ಎರಡನೇ ಪ್ರಕರಣ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next