Advertisement
ಅರಬ್ ಮೂಲದ ನೆಟ್‌ವರ್ಕ್ ಕಂಪೆನಿಗೆ ಸೇರಿದ ಸೆಟಲೈಟ್ ಸೇವೆಯ ಫೋನ್ ಬಳಸಿ ಬೆಳ್ತಂಗಡಿ ಮೂಲದ ವ್ಯಕ್ತಿ ಪಾಕ್‌ಗೆ ಕರೆ ಮಾಡಿದ್ದಾನೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆತನ ವಿವರವನ್ನು ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ. ಆತನೇ ಕರೆ ಮಾಡಿದ್ದಾನೆಯೇ ಅಥವಾ ಬೇರೆಯವರ ಸೂಚನೆ ಮೇರೆಗೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.
2008ರಲ್ಲಿ ದೇಶದ ವಿವಿಧೆಡೆ ನಡೆದ ವಿಧ್ವಂಸಕ ಕೃತ್ಯ ಎಸಗಿದ್ದ ಶಂಕಿತ ಉಗ್ರರು ಇದೇ ಕಂಪೆನಿಯ ಸೆಟಲೈಟ್ ಫೋನ್ ಬಳಕೆ ಮಾಡಿದ್ದರು ಎಂಬುದು ಅಂದಿನ ತನಿಖಾ ಸಂಸ್ಥೆಗಳ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಕೇಂದ್ರ ಸರಕಾರ ಇಡೀ ದೇಶದಲ್ಲಿ ಸೆಟಲೈಟ್ ಫೋನ್‌ಗಳ ಸಂಪರ್ಕವನ್ನು ನಿಷೇಧಿಸಿತ್ತು. ಒಂದು ವೇಳೆ ದೇಶದ ಯಾವುದೇ ಮೂಲೆಯಲ್ಲಿ ಈ ಕಂಪೆನಿಯ ನೆಟ್‌ವರ್ಕ್ ಸೇವೆ ಹೊಂದಿದ ಸೆಟಲೈಟ್ ಫೋನ್ ಬಳಕೆ ಮಾಡಿದರೆ ಕೂಡಲೇ ಕರೆ ಮಾಡಿದ ಮಾಹಿತಿಯನ್ನು ಸ್ಥಳದ ಸಹಿತ (ಎಲ್‌ಬಿಎಸ್- ಲೋಕೆಷನ್ ಬೇಸಡ್ ಸಿಸ್ಟಂ) ಕೇಂದ್ರದ ತನಿಖಾ ಸಂಸ್ಥೆಗಳಿಗೆ ರವಾನೆಯಾಗುತ್ತಿದೆ.