ಮಾಸಿ: ಕರ್ನಾಟಕ ಪಬ್ಲಿಕ್ ಶಾಲೆಯ 1.99 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಕೊಠಡಿ ನಿರ್ಮಾಣ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆರ್‌ಐಡಿಎಫ್, ಆರ್‌ಎಂಎಸ್‌ಎ ಯೋಜನೆಯಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ನ ನೂತನ ಕೊಠಡಿಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಆರ್‌ಐಡಿಎಫ್, ಆರ್‌ಎಂಎಸ್‌ಎ ಯೋಜನೆಯಡಿ 1.99 ಕೋಟಿ ರೂ. ಅನುದಾನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಸುಸಜ್ಜಿತ ಶಾಲಾ ಕಟ್ಟಡಗಳು ನಿರ್ಮಾಣವಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಲು ಅನುಕೂಲವಾಗಲಿದೆ ಎಂದ ಅವರು, ಗುಣಮಟ್ಟದ ಕಟ್ಟಡ ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
14 ಕೊಠಡಿ ನಿರ್ಮಾಣ: ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರಾಮಚಂದ್ರಪ್ಪ ಮಾತನಾಡಿ, ಶಾಲೆಗೆ 1.99 ಕೋಟಿ ರೂ. ಅನುದಾನದಲ್ಲಿ ಕೊಠಡಿಗಳು ನಿರ್ಮಾಣವಾಗಲಿದ್ದು, ಒಂದೇ ಸೂರಿನಡಿಯಲ್ಲಿ 3 ಹಂತಸ್ತುಗಳಲ್ಲಿ 14 ಕೊಠಡಿಗಳು ನಿರ್ಮಾಣವಾಗಲಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.
1.99 ಕೋಟಿ ರೂ.ನಲ್ಲಿ ಹಲವು ಸೌಲಭ್ಯ: ಆರ್‌ಐಡಿಎಫ್ ಯೋಜನೆಯಡಿ 93 ಲಕ್ಷ ರೂ., ಆರ್‌ಎಂಎಸ್‌ಎ ಯೋಜನೆಯಡಿ 63 ಲಕ್ಷ ರೂ., ಎಸ್‌ಎಸ್‌ಎ ಯೋಜನೆಯಡಿ 43 ಲಕ್ಷ ರೂ. ಸೇರಿ ಒಟ್ಟು 1.99 ಕೋಟಿ ರೂ. ವೆಚ್ಚದಲ್ಲಿ ಸ್ಕೂಲ್ ಕಟ್ಟಡ, ಶೌಚಾಲಯ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಿದೆ ಎಂದರು.
ಡಾ.ಮಾಸ್ತಿ ಟ್ರಸ್ಟ್ ಅಧ್ಯಕ್ಷ ರಂಗನಾಥನ್, ಜಿ.ಪಂ. ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯ ಎಚ್.ವಿ.ಶ್ರೀನಿವಾಸ್, ತಾಪಂ ಅಧ್ಯಕ್ಷೆ ತ್ರಿವರ್ಣರವಿ, ಸದಸ್ಯರಾದ ರೇಖಾ , ಆಶಾ, ಆರ್.ಎ.ಅಬ್ಬಯ್ಯ, ಗ್ರಾಪಂ ಅಧ್ಯಕ್ಷೆ ಸುಗಣಮ್ಮ ಶ್ರೀನಿವಾಸ್, ಉಪಾಧ್ಯಕ್ಷ ಎಚ್.ವಿ.ಸತೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚೆನ್ನರಾಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಚ್.ಕೃಷ್ಣಕುಮಾರ್, ಸದಸ್ಯ ಸಬ್ದಾರ್‌ಬೇಗ್, ಗ್ರಾಪಂ ಸದಸ್ಯರಾದ ಶೌಕತ್ ಉಲ್ಲಾಬೇಗ್, ಜೊನ್ನ ಮುನಿಯಪ್ಪ, ಮೋಹನ್‌ರಾವ್, ಜೆಸಿಬಿ ನಾಗರಾಜ್, ಎಂ.ಸಿ.ನಾರಾಯಣಸ್ವಾಮಿ, ಈರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಮುನಿಯಪ್ಪ, ಸಹಾಯಕ ನಿರ್ದೇಶಕ ರವಿ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೇತನ್, ಕರೀಸಂದ್ರ ಪ್ರವೀಣ್‌ಕುಮಾರ್, ಪಿಡಬ್ಲ್ಯುಡಿ ಎಂಜಿನಿಯರ್ ಪುಟ್ಟರಾಜು, ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಪಿಡಿಒ ಕಾಶಿನಾಥ್ ಇದ್ದರು.