ಬೆಂಗಳೂರು: ಮುಂಬೈ ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲಿ ಉದ್ಯಮಿಗೆ ಕರೆ ಮಾಡಿದ ವಂಚಕರು “ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಮಾದಕ ವಸ್ತುವನ್ನು ಕೊರಿಯರ್ ಮೂಲಕ ಕಳುಹಿಸುತ್ತಿರುವ ಬಗ್ಗೆ ದೂರು ಬಂದಿದೆ.
ಈ ಬಗ್ಗೆ ದೂರು ದಾಖಲಿಸದಿರಲು ಹಣ ನೀಡುವಂತೆ ಬೆದರಿಸಿ ಬರೋಬರಿ 1.98 ಕೋಟಿ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಎಚ್‌ಎಸ್ ಆರ್ ಲೇಔಟ್ ನಿವಾಸಿ ತಾರಕ್ ಶಾ(53) ಎಂಬವರು ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ರಾಹುಲ್ ಕುಮಾರ್ ಮತ್ತು ಬಲ್‌ಸಿಂಗ್ ರಜಪೂತ್ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಡಿ
.2ರಂದು ತಾರಕ್ ಶಾಗೆ ಸ್ಕೈಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ ವಂಚಕರು, ಫೆಡೆಕ್ಸ್ ಕೊರಿಯರ್‌ನಿಂದ ಕರೆ ಮಾಡುತ್ತಿದ್ದು, ನಿಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಅಕ್ರಮವಾಗಿ ಮುಂಬೈ ನಿಂದ ತೈವಾನ್ ದೇಶಕ್ಕೆ ಎಂಡಿಎಂಎ ಮಾದಕ ವಸ್ತುಗಳನ್ನು ಕೊರಿಯರ್ ಮೂಲಕ ಕಳುಹಿಸ ಲಾಗುತ್ತಿದೆ. ಈ ಸಂಬಂಧ ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೀಗಾಗಿ ನಿಮ್ಮನ್ನು ವಿಚಾರಣೆ ಮಾಡಬೇಕು ಎಂದಿದ್ದಾನೆ. ಅದರಿಂದ ಆತಂಕಗೊಂಡ ತಾರಕ್, ತಮಗೂ ಕೋರಿಯರ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ. ದುಷ್ಕರ್ಮಿಗಳು, ಈ ಸಂಬಂಧ ಪರಿಶೀಲಿಸುವ ಅಗತ್ಯವಿದೆ ಎಂದು ಕರೆ ಸ್ಥಗಿತಗೊಳಿಸಿದ್ದಾರೆ.
ಕೆಲ ಹೊತ್ತಿನ ಬಳಿಕ ಮತ್ತೂಮ್ಮೆ ಕರೆ ಮಾಡಿದ ವಂಚಕರು, ಘಟನೆ ಕುರಿತು ದೂರು ದಾಖಲಿಸದಿರಲು