ಗುಂಡ್ಲುಪೇಟೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಗುತ್ತಿಗೆದಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ಮಾಡುತ್ತಿಲ್ಲ ಎಂದು ಪುರಸಭೆ ಸದಸ್ಯ ಎಚ್.ಆರ್. ರಾಜಗೋಪಾಲ್ ಆರೋಪಿಸಿದರು.
ಹಳೆ ಬಸ್ ನಿಲ್ದಾಣದಿಂದ ಕೋಡಹಳ್ಳಿ ವೃತ್ತದವರೆಗೆ 1.9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಗುಣಮಟ್ಟದ ವಸ್ತು ಬಳಸಿಲ್ಲ. ಸಾರ್ವಜನಿಕರಿಗಾಗಿ ಫುಟ್‌ಪಾತ್ ನಿರ್ಮಿಸಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿಲ್ಲ ಎಂದು ದೂರಿ ದರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ 2 ಬದಿ ನಿರ್ಮಿಸಿರುವ ಚರಂಡಿಗಳು ಕಳಪೆಯಾಗಿದ್ದು, ಅಲ್ಲಲ್ಲಿ ಕುಸಿದು ಬೀಳುತ್ತಿದೆ.
ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅದರ ಮಧ್ಯೆಯೇ ಪಟ್ಟಣದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆಯನ್ನು ಗುತ್ತಿಗೆದಾರರ ಕಳಪೆಯಿಂದ ನಡೆಸುತ್ತಿದ್ದರು. ಇವರ ವಿರುದ್ದ ಕ್ರಮಕ್ಕೆ ಮುಂದಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಒಳ ಒಪ್ಪಂದದಿಂದ ಕಳಪೆಯಾಗಿ ಮಾಡಿ ಸಾರ್ವಜನಿಕ ಹಣ ವ್ಯಯ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಮತ್ತೆ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದ ಮಂಗಳಗೌರಿ ಕಾಲೇಜಿಗೆ ಪ್ರಥಮ
ರಸ್ತೆಗೆ 20 ಎಂಎಂ ಜೆಲ್ಲಿ ಬಳಸಬೇಕಿತ್ತು. 40ಎಂಎಂ ಜೆಲ್ಲಿ ಬಳಸಿದ್ದರು. ಬಳಿಕ ಎಂಜಿನಿಯರ್ ಗಮನಕ್ಕೆ ತಂದು ತೆಗಿಸಿ ಕಾಮಗಾರಿ ಶುರುಮಾಡಲಾಗಿದೆ. ಕಳಪೆಯಾಗಿ ಮಾಡಿದರೆ ಬಿಲ್ ಆಗುವುದಿಲ್ಲ.
-ಹೇಮಂತ್ ರಾಜ್, ಪುರಸಭಾ ಮುಖ್ಯಾಧಿಕಾರಿ