Advertisement

ಕೋವಿಡ್ 19 ಎಫೆಕ್ಟ್; 1.84 ಕೋಟಿ ಉದ್ಯೋಗ ನಷ್ಟ, ಬೇಸಾಯಕ್ಕಿಳಿದವರ ಸಂಖ್ಯೆ 1.49ಕೋಟಿ

01:12 PM Aug 20, 2020 | Nagendra Trasi |

ನವದೆಹಲಿ:ಕೋವಿಡ್ 19 ಮಹಾಮಾರಿಯಿಂದ ದೇಶಾದ್ಯಂತ ದಿನದಿಂದ ದಿನಕ್ಕೆ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಏಪ್ರಿಲ್ ನಿಂದ ಈವರೆಗೆ ಕೆಲಸ ಕಳೆದುಕೊಂಡವರ ಸಂಖ್ಯೆ 1.89 ಕೋಟಿಗೇರಿದೆ. ಕಳೆದ ತಿಂಗಳು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವುದಾಗಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ಅಂಕಿಅಂಶ ತಿಳಿಸಿದೆ.

Advertisement

ಈ ಅಂಕಿಅಂಶದ ಪ್ರಕಾರ, ಜೂನ್ ತಿಂಗಳಿನಲ್ಲಿ 39 ಲಕ್ಷ ಮಂದಿಗೆ ಉದ್ಯೋಗ ಸಿಕ್ಕಿದ್ದು, ಜುಲೈನಲ್ಲಿ 50 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಏಪ್ರಿಲ್ ನಲ್ಲಿ ಒಟ್ಟು 1.77 ಕೋಟಿ ಜನರು ಉದ್ಯೋಗರಹಿತರಾಗಿರುವುದಾಗಿ ವಿವರಿಸಿದೆ. ಮೇ ತಿಂಗಳಿನಲ್ಲಿ ಒಂದು ಲಕ್ಷ ಜನರ ಉದ್ಯೋಗ ನಷ್ಟವಾಗಿದೆ.

ಕೆಲಸ(ಉದ್ಯೋಗ) ಸುಲಭವಾಗಿ ನಷ್ಟವಾಗುವುದಿಲ್ಲ. ಆದರೆ ಒಂದು ಬಾರಿ ಉದ್ಯೋಗ ಕಳೆದುಕೊಂಡರೆ ಮತ್ತೆ ಕೆಲಸ ಸಿಗುವುದು ತುಂಬಾ ಕಷ್ಟಕರವಾಗಿದೆ ಎಂದು ಸೆಂಟರ್ ಸಿಇಒ ಮಹೇಶ್ ವ್ಯಾಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

2019-20ರಲ್ಲಿ ಸಂಬಳದ ಉದ್ಯೋಗ ಸಾಮಾನ್ಯವಾಗಿ ಸುಮಾರು 19 (190ಲಕ್ಷ) ಮಿಲಿಯನ್ ನಷ್ಟಿತ್ತು. ಅಂದರೆ ಇದು ಕಳೆದ ವರ್ಷಕ್ಕಿಂತ ಶೇ.22ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಕೋವಿಡ್ 19 ಸೋಂಕಿನ ಪರಿಣಾಮವಾಗಿ ಸುಮಾರು 68 ಲಕ್ಷ ದಿನಗೂಲಿ ಆದಾಯ ಇರುವವರು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಅಂಕಿಅಂಶ ವಿವರಿಸಿದೆ. ಈ ಸಂದರ್ಭದಲ್ಲಿ 1.49 ಕೋಟಿ ಮಂದಿ ಬೇಸಾಯ ಕೈಗೊಂಡಿರುವುದಾಗಿ ತಿಳಿಸಿದೆ.

Advertisement

ಜಾಗತಿಕವಾಗಿ ಕ್ಷಿಪ್ರವಾಗಿ ಕೋವಿಡ್ 19 ಹರಡುತ್ತಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಘೋಷಿಸಿತ್ತು. ಇದರಿಂದ ಭಾರೀ ಪ್ರಮಾಣದ ಆರ್ಥಿಕ ಹೊಡೆತಕ್ಕೆ ಸಿಲುಕಿದ ಕಂಪನಿಗಳು ಉದ್ಯೋಗ ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದವು. ಅಷ್ಟೇ ಅಲ್ಲ ಸಂಬಳ ಕಡಿತ ಹಾಗೂ ಸಂಬಳ ರಹಿತ ರಜೆಯಂತಹ ಕ್ರಮಗಳನ್ನು ಕಂಪನಿಗಳು ಕೈಗೊಂಡಿರುವುದಾಗಿ ತಿಳಿಸಿದೆ.

ಕೋವಿಡ್ 19 ಸೋಂಕಿನ ಆರ್ಥಿಕ ನಷ್ಟದಿಂದ ಕಂಪನಿಗಳು ಚೇತರಿಸಿಕೊಳ್ಳಲು ಹಾಗೂ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಆರ್ಥಿಕ ಬೆಂಬಲ ನೀಡಬೇಕು ಎಂದು ಇಂಡಸ್ಟ್ರೀಸ್ ಮಂಡಳಿ ಹಾಗೂ ಹಲವಾರು ಆರ್ಥಿಕ ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next