Advertisement

ಹೊಲದಲ್ಲಿ ಬೆಳೆಗಳ ಮಧ್ಯೆ ಬೆಳೆದಿದ್ದ 1.80 ಲಕ್ಷ ಮೌಲ್ಯದ ಹಸಿ ಗಾಂಜಾ ವಶಕ್ಕೆ

07:08 PM Apr 14, 2023 | Pranav MS |

ಮುದ್ದೇಬಿಹಾಳ: ತಾಲೂಕಿನ ಮಲಗಲದಿನ್ನಿ ಗ್ರಾಮ ವ್ಯಾಪ್ತಿಯ ಬಸವರಾಜ ಮಲ್ಲೇಶಪ್ಪ ಬಿರಾದಾರ ಎಂಬಾತನ ಹೊಲದಲ್ಲಿ ಬೆಳೆಗಳ ಮಧ್ಯೆ ಕಾನೂನು ಬಾಹಿರವಾಗಿ ಬೆಳೆದಿದ್ದ ಅಂದಾಜು 1.80 ಲಕ್ಷ ಮೌಲ್ಯದ 36.820 ಕೆಜಿಯಷ್ಟು ಹಸಿ ಗಾಂಜಾ ಬೆಳೆಯನ್ನು ಮುದ್ದೇಬಿಹಾಳ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಗಾಂಜಾ ಗಿಡ ಬೆಳೆದಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ನೇತೃತ್ವದಲ್ಲಿ ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸ್ ಸಿಬ್ಬಂದಿ ಹೊಲದ ಮೇಲೆ ದಾಳಿ ನಡೆಸಿ ಅಲ್ಲಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪೊಲೀಸ್ ಸಿಬ್ಬಂದಿಗಳಾದ ಗೋವಿಂದ ಗೆಣ್ಣೂರ, ವಿರೇಶ ಹಾಲಗಂಗಾಧರಮಠ, ಮಲ್ಲನಗೌಡ ಬೋಳರೆಡ್ಡಿ, ಚಿದಾನಂದ್ ಸುರುಗಿಹಳ್ಳಿ, ಶ್ರೀಕಾಂತ ಬಿರಾದಾರ, ನರಸಿಂಹ ಚೌಧರಿ, ಶಿವರಾಜ ನಾಗರೆಡ್ಡಿ, ಮಂಜುನಾಥ ಬುಳ್ಳ, ಮಾಳಪ್ಪ ನಾಲತವಾಡ, ರವಿ ಲಮಾಣಿ ಭಾಗವಹಿದ್ದರು. ಗೆಜೆಟೆಡ್ ಅಧಿಕಾರಿಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ನಾಗರಬೆಟ್ಟ ಗ್ರಾಪಂ ಸಿಬ್ಬಂದಿ ನೇತೃತ್ವದಲ್ಲಿ ವಶಪಡಿಸಿಕೊಂಡ ಗಾಂಜಾ ಗಿಡಗಳ ಪಂಚನಾಮೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next