Advertisement

ಸತ್ತೇಗಾಲ ಸಂಘಕ್ಕೆ1.4 ಲಕ್ಷ ರೂ. ಲಾಭ

03:06 PM Dec 23, 2020 | Suhan S |

ಕೊಳ್ಳೇಗಾಲ: ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 1,43,576 ರೂ.ನಿವ್ವಳ ಲಾಭ ದೊರಕಿದೆ ಎಂದು ಅಧ್ಯಕ್ಷ ಪುಟ್ಟಸ್ವಾಮಿಗೌಡ ತಿಳಿಸಿದರು.

Advertisement

ತಾಲೂಕಿನ ಉಗನಿಯ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಶೂನ್ಯ ಬಡ್ಡಿ ದರದಲ್ಲಿ 1.25 ಕೋಟಿ ರೂ. ಕೃಷಿಸಾಲ, 1000 ರೈತರಿಗೆ 1.28 ಕೋಟಿ ರೂ. ಕೃಷಿಯೇತರ ಸಾಲ ನೀಡಲಾಗಿದೆ. ಈ ಅವಧಿಯಲ್ಲಿ 125 ರೈತರಿಗೆ 50 ಲಕ್ಷ ರೂ. ಸಾಲ ನೀಡಲು ಮೈಸೂರು ಮತ್ತು ಚಾಮ ರಾಜನಗರ ಸಹಕಾರ ಸಂಘದಿಂದ ಮಂಜೂರಾತಿ ಆಗಿದ್ದು, ದಾಖಲಾತಿ ಒದ ಗಿಸಿದರೆ ತಕ್ಷಣವೇ ತಮ್ಮ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ರಾಮು 2019-20ನೇ ಸಾಲಿನ ಆಯವ್ಯಯ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಕೆಂಪಮ್ಮ, ನಿರ್ದೇಶಕರಾದಶಿವಕುಮಾರ್‌, ರಮೇಶ್‌, ಜಯಮ್ಮ, ನಟರಾಜು, ಉಬೇದುಲ್ಲಾ, ನಂಜುಂಡ, ಶಿವಮಲ್ಲು, ಎಂ.ಮಲ್ಲೇಶ್‌, ಗೌರಮ್ಮ, ಎಂಡಿಸಿಸಿ ಬ್ಯಾಂಕಿನ ಪ್ರತಿನಿಧಿ ನಾಗರಾಜು,ಲೆಕ್ಕಾಧಿಕಾರಿ ಪ್ರಿಯಾಂಕ, ನೌಕರರಾದ ಗಂಗಾಂಬಾ, ರವಿ ಮತ್ತು ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

ಅತಿ ಸೂಕ್ಷ್ಮ ಮತಗಟ್ಟೆಗೆ ಐಜಿಪಿ ಭೇಟಿ :

ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಒಂದಾದ ಹಂಗಳ ಮತಗಟ್ಟೆಗೆ ದಕ್ಷಿಣವಲಯದ ಐಜಿಪಿ ವಿಪುಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಹಂಗಳ ಅತಿಸೂಕ್ಷ್ಮ ಮತಗಟ್ಟೆಯೂ ಆಗಿದ್ದು ಮತದಾನಕ್ಕೂ ಮೊದಲು ಪೊಲೀಸ್‌ ಸಿಬ್ಬಂದಿ ಪಥ ಸಂಚಲನ ನಡೆಸಿದ್ದರು. ಸುತ್ತಮುತ್ತಲೂ ಏಳೆಂಟು ಮತಗಟ್ಟೆಗಳು ಒಂದೇ ಕಡೆ ಇರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಐಜಿಪಿ ವಿಪುಲ್‌ ಕುಮಾರ್‌ ಭೇಟಿ ನೀಡಿ ಅಧಿಕಾರಿಗಳಿಂದ ಮತದಾನದ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದರು

ಈ ವೇಳೆ ಎಸ್‌ಪಿ ದಿವ್ಯಾಸಾರಾ ಥಾಮಸ್‌, ಎಎಸ್‌ಪಿ ಅನಿತಾ ಹದ್ದಣ್ಣನವರ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹದೇವಸ್ವಾಮಿ, ಪಿಎಸ್‌ಐ ರಾಜೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next