Advertisement

1.35 ಕೋ.ರೂ. ವೆಚ್ಚದಲ್ಲಿ ಭುಜಂಗ ಪಾರ್ಕ್‌ ಅಭಿವೃದ್ಧಿ

08:57 PM Aug 28, 2021 | Team Udayavani |

ಉಡುಪಿ: ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆ ಜಂಟಿ ಸಹಯೋಗದಲ್ಲಿ 1.35 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ.

Advertisement

ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಚಿಣ್ಣರ ಆಟದ ಉದ್ಯಾನವನಕ್ಕೆ ಹೈಟೆಕ್‌ ಸ್ಪರ್ಶ ನೀಡಲಾಗಿದ್ದು ಇದೀಗ ಇಡೀ ಭುಜಂಗ ಪಾರ್ಕ್‌ ಅನ್ನು ಆಧುನೀಕರಿಸಲು ಸಿದ್ಧತೆ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ 1 ಕೋ.ರೂ. ಹಾಗೂ ನಗರ ಸಭೆ ಯಿಂದ 35 ಲ.ರೂ. ಅನುದಾನ ಮಂಜೂರಾಗಿದೆ. ಒಟ್ಟು 1.35 ಕೋ.ರೂ. ವೆಚ್ಚದಲ್ಲಿ ಪಾರ್ಕ್‌ ಅಭಿವೃದ್ಧಿಯಾಗಲಿದೆ.

ಹೊರಾಂಗಣ ಜಿಮ್‌
ಉಡುಪಿ ನಗರದಲ್ಲಿ ಹೊರಾಂ ಗಣ ಜಿಮ್‌ ಪ್ರಾರಂಭವಾಗಲಿದೆ. ಇದೀಗ ಭುಜಂಗ ಪಾರ್ಕ್‌ನಲ್ಲಿ ಹಿರಿಯರಿಗೆ, ಸಾರ್ವಜನಿಕರಿಗೆ ವ್ಯಾಯಾಮ ಹಾಗೂ ದೈಹಿಕ ಕಸರತ್ತು ಮಾಡಲು ಅನುಕೂಲವಾಗುವಂತೆ ವ್ಯವಸ್ಥಿತ ಹೊರಾಂಗಣ ಜಿಮ್‌ ನಿರ್ಮಾಣ ಕಾಮಗಾರಿ ಪ್ರಾರಂಭ ವಾಗಲಿದೆ. ಜತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತದೆ.

ಚಿಟ್ಟೆ ಪಾರ್ಕ್‌- ಲೈಟಿಂಗ್‌
ಭುಜಂಗ ಪಾರ್ಕ್‌ನಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಾಣ ವಾಗಲಿದೆ. ಈಗಾಗಲೇ ಚಿಟ್ಟೆ ತಜ್ಞರ ನೆರವಿನೊಂದಿಗೆ ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಜತೆಗೆ ಚಿಟ್ಟೆಗಳ ಬಣ್ಣ ಬಣ್ಣದ ಕಲಾಕೃತಿಗಳ ಜತೆಗೆ ನೈಜ ಚಿಟ್ಟೆಗಳನ್ನು ಆಕರ್ಷಿಸಲು ಅಗತ್ಯವಿರುವ ವಾತಾವರಣ ಸೃಷ್ಟಿಯಾಗಲಿದೆ. ಜತೆಗೆ ನೀರಿನ ಕೊಳದಲ್ಲಿ ಬಣ್ಣ ಬಣ್ಣದ ದೀಪಗಳನ್ನು ಹಾಕಲಾಗುತ್ತದೆ.

ಚಿಣ್ಣರ ಜಿಮ್‌!
ವರ್ಷದ ಹಿಂದೆ ಚಿಣ್ಣರ ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಹಾಗೂ ದೈಹಿಕ ವ್ಯಾಯಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಅಮೃತ್‌ ಯೋಜನೆ ಯಡಿ 15 ಲ.ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಪಾರ್ಕ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

Advertisement

ಗಾಂಧೀಜಿ ಬಂದ ಪಾರ್ಕ್‌
ಭುಜಂಗ ಪಾರ್ಕ್‌ಗೆ ವಿಶೇಷವಾದ ಹೆಸರಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಈ ಪಾರ್ಕ್‌ಗೆ ಬಂದಿದ್ದರು. ಅವರು ಕುಳಿತುಕೊಂಡ ಬಂಡೆಕ‌ಲ್ಲೊಂದು ಇಂದಿಗೂ ಇದ್ದು, ಅದನ್ನು ಗಾಂಧಿಕಟ್ಟೆ ಎಂದು ಕರೆಯಲಾಗುತ್ತಿದೆ.

ಜಿಮ್‌ ನಲ್ಲಿ ಏನೇನಿರಲಿದೆ?
ಹೊರಾಂಗಣ ಜಿಮ್‌ ನಿರ್ಮಾಣಕ್ಕೆ ನಗರಸಭೆಯಿಂದ 35 ಲ.ರೂ. ವೆಚ್ಚದ ಅನುದಾನ ಬಳಕೆ ಮಾಡಲಾಗುತ್ತಿದೆ. ಲೆಗ್‌ ಪ್ರಸ್‌, ಸೈಕ್ಲಿಂಗ್‌, ಶೋಲ್ಡರ್‌ ಪ್ರಸ್‌, ಸ್ವೆಪ್‌ ಟ್ರೈನರ್‌, ಚೆಸ್ಟ್‌ ಪ್ರಸ್‌ ಸೇರಿದಂತೆ 10ಕ್ಕೂ ಅಧಿಕ ಪರಿಕರ ಆಳವಡಿಸಲಾಗುತ್ತದೆ. ವಾಕಿಂಗ್‌ ಹಾಗೂ ಸಮಯ ಕಳೆಯಲು ಪಾರ್ಕ್‌ಗೆ ಬರುವವರಿಗೆ ದೈಹಿಕ ಕಸರತ್ತು ಮಾಡಲು ಅನುಕೂಲವಾಗಲಿದೆ.

2 ತಿಂಗಳಲ್ಲಿ ಕಾಮಗಾರಿ ಪೂರ್ಣ
ನಗರದ ಮಧ್ಯ ಭಾಗದಲ್ಲಿರುವ ಭುಜಂಗ ಪಾರ್ಕ್‌ನಲ್ಲಿ ಚಿಟ್ಟೆ ಪಾರ್ಕ್‌ ಹಾಗೂ ವಾಟರ್‌ ಪೌಂಡ್‌ ನಿರ್ಮಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಲಾಗಿದೆ. ಎರಡು ತಿಂಗಳುಗಳ‌ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
-ಕೆ. ರಘುಪತಿ ಭಟ್‌, ಶಾಸಕರು, ಉಡುಪಿ

ನಿರ್ವಹಣೆಗೂ ಗಮನಹರಿಸಿ
ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಪಾರ್ಕ್‌ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸ ತಂದಿದೆ. ಶೀಘ್ರ ಕಾಮಗಾರಿ ಮುಗಿಸಿ, ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸ ಬೇಕು. ಜತೆಗೆ ಕಾಲ ಕಾಲಕ್ಕೆ ನಿರ್ವಹಣೆ ಕಡೆ ಗಮನ ಹರಿಸಬೇಕು.
-ವಿನಾಯಕ , ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next