Advertisement

ಕಿಡ್ನಿ ವೈಫ‌ಲ್ಯ, ಕ್ಯಾನ್ಸರ್‌ ರೋಗಿಗಳಿಗೆ 1.23 ಕೋ. ರೂ. ನೆರವು

01:39 AM Oct 05, 2019 | mahesh |

ಮಂಗಳೂರು: ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಅವರು ತಮ್ಮ 64ನೇ ವರ್ಷದ ಜನ್ಮ ದಿನದ ಪ್ರಯುಕ್ತ ಶುಕ್ರವಾರ ನಗರದ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆ ಮತ್ತು ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಮತ್ತು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಒಟ್ಟು 1.23 ಕೋಟಿ ರೂ.ಗಳ ನೆರವು ನೀಡಿದ್ದಾರೆ.

Advertisement

ಕೆಎಂಸಿ ಆಸ್ಪತ್ರೆಯ 289 ಕ್ಯಾನ್ಸರ್‌ ರೋಗಿಗಳಿಗೆ ಒಟ್ಟು 73 ಲಕ್ಷ ರೂ. ಹಾಗೂ ಫಾದರ್‌ ಮುಲ್ಲರ್‌ ಆಸ್ಪತ್ರೆಯ 76 ಕ್ಯಾನ್ಸರ್‌ ಹಾಗೂ 107 ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸುಮಾರು 50 ಲಕ್ಷ ರೂ. ನೆರವು ಹಸ್ತಾಂತರಿಸಿದರು.

ಕೆಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ. ಶಂಕರ್‌, ಕ್ಯಾನ್ಸರ್‌ ರೋಗಕ್ಕೆ ತುತ್ತಾದವರು ಹೆದರಬೇಡಿ. ಇತ್ತೀಚಿನ ದಿನಗಳಲ್ಲಿ ಎಲ್ಲ ರೋಗಗಳನ್ನು ಸಮರ್ಪಕ ಚಿಕಿತ್ಸೆಯಿಂದ ಗುಣಪಡಿಸಬಹುದು. ಸಾವು ಎಂಬುದು ಎಲ್ಲರಿಗೂ ಬರುತ್ತದೆ. ಅದನ್ನು ಎದುರಿಸಲು ಶಕ್ತಿ ಬೇಕು. ಕಾಯಿಲೆಗೆ ಒಳಪಟ್ಟ ರೋಗಿಗೆ ಮನೆ ಮಂದಿ ಆತ್ಮಸ್ಥೆ çರ್ಯ ತುಂಬಬೇಕು. ಕಳೆದ 4 ವರ್ಷಗಳಿಂದ ಮಂಗಳೂರು ಭಾಗದ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ರೋಗ, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಧನ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕೆಎಂಸಿ ಆಸ್ಪತ್ರೆ ಮಕ್ಕಳ ಕ್ಯಾನ್ಸರ್‌ ತಜ್ಞ ಡಾ| ಹರ್ಷ ಪ್ರಸಾದ್‌ ಮಾತನಾಡಿ, ಇದೊಂದು ಮಹತ್ವದ ದಿನವಾಗಿದೆ. ಡಾ| ಶಂಕರ್‌ ಅವರು ಎಲ್ಲರಿಗೂ ಸ್ಫೂರ್ತಿ. ಕಠಿನ ಪರಿಶ್ರಮದಿಂದ ಈ ಮಟ್ಟದ ಸಾಧನೆ ಮಾಡಿದ್ದಾರೆ. ಅಶಕ್ತರಿಗೆ ಸಹಾಯ ಮಾಡುವಂತಹ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಡಾ| ಜಿ. ಶಂಕರ್‌ ಅವರನ್ನು ಕೆ.ಎಂ.ಸಿ. ಆಸ್ಪತ್ರೆಯ ವತಿಯಿಂದ ಸಮ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಜಾನ್‌ ರಾಮಪುರಂ, ಜ್ಯೋತಿ ಬಳಿಯ ಕೆ.ಎಂ.ಸಿ. ಆಸ್ಪತ್ರೆಯ ಪ್ರಾದೇಶಿಕ ವೈದ್ಯಕೀಯ ಸೇವೆಯ ಪ್ರಮುಖರಾದ ಡಾ| ಆನಂದ ವೇಣುಗೋಪಾಲ್‌, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ| ದೀಪಕ್‌ ಮಡಿ, ಡಾ| ಜಿ. ಶಂಕರ್‌ ಅವರ ಅಳಿಯ ನವೀನ್‌ ಉಪಸ್ಥಿತರಿದ್ದರು. ಹರ್ಷಪ್ರಸಾದ್‌ ಸ್ವಾಗತಿಸಿ, ಉದಯಶಂಕರ್‌ ನಿರೂಪಿಸಿ, ವಂದಿಸಿದರು.

ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನಿಂದ ಸಾಂತ್ವನದ ಕೆಲಸ
ಫಾದರ್‌ ಮುಲ್ಲರ್‌ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಫಾ| ರಿಚರ್ಡ್‌ ಕುವೆಲ್ಲೋ ಮಾತನಾಡಿ, ರೋಗ ಬಾಧಿಸುತ್ತಿದ್ದಂತೆ ರೋಗಿಗಳ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡ ಬೀಳಲು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಕಾಳಜಿ ವಹಿಸುವುದು, ಸಾಂತ್ವನ ನೀಡುವುದು ಬಹಳ ಮುಖ್ಯ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಈ ಕೆಲಸವನ್ನು ಮಾಡುತ್ತಿದೆ ಎಂದರು. ಆಡಳಿತಾಧಿಕಾರಿ ರುಡಾಲ್ಫ್ ಡೇಸಾ, ಮುಖ್ಯ ವೈದ್ಯಾಧಿಕಾರಿ ಉದಯ್‌ ಕುಮಾರ್‌, ಚೀಫ್‌ ನರ್ಸಿಂಗ್‌ ಆಫೀಸರ್‌ ಸಿ. ಜನೆಟ್‌ ಉಪಸ್ಥಿತರಿದ್ದರು. ಜೋನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next