Advertisement

ಐಟಿ ಕಂಪೆನಿಗಳಿಂದ 1.2 ಲಕ್ಷ ಹೊಸಬರ ನೇಮಕ

01:07 AM Oct 26, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಅಬ್ಬರ ತಗ್ಗುತ್ತಿರುವಂತೆಯೇ ವಿವಿಧ ಕ್ಷೇತ್ರಗಳಲ್ಲಿ ನೇಮಕ ಪ್ರಕ್ರಿಯೆ ಬಿರುಸಾಗಿದೆ.ಅದಕ್ಕೆ ನಿದರ್ಶನ ಎಂಬಂತೆ ಟಿಸಿಎಸ್‌, ಇನ್ಫೋಸಿಸ್‌, ವಿಪ್ರೋ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪೆನಿಗಳು ಪ್ರಸಕ್ತ ವಿತ್ತೀಯ ವರ್ಷದೊಳಗೆ 1.2 ಲಕ್ಷ ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಿವೆ.

Advertisement

ಈ 4 ಪ್ರಮುಖ ಐಟಿ ಕಂಪೆನಿಗಳು 2ನೇ ತ್ತೈಮಾಸಿಕದಲ್ಲಿ 50 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಈಗಾಗಲೇ ನೇಮಕ ಮಾಡಿಕೊಂಡಿವೆ.

ಹೀಗಾಗಿ ವಿತ್ತೀಯ ವರ್ಷದ ಉಳಿದ ಅವಧಿಯಲ್ಲೂ ತೇಜಿ ಯಾಗಿ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ವಿಶ್ಲೇಷಿ ಸಲಾಗುತ್ತಿದೆ. ನೇಮಕ ಪ್ರಕ್ರಿಯೆಯನ್ನು ಗಮನಿಸಿದಾಗ 2010ರ ಸಂದರ್ಭದ ಅನುಭವ ಉಂಟಾಗುತ್ತಿದೆ ಎಂದು ಇನ್ಫೋಸಿಸ್‌ ಮುಖ್ಯ ನಿರ್ವಹಣ ಅಧಿಕಾರಿ ಪ್ರವೀಣ್‌ ರಾವ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

Advertisement

Udayavani is now on Telegram. Click here to join our channel and stay updated with the latest news.

Next