Advertisement

Bengaluru: ಬೆಂಗಳೂರಲ್ಲಿ 1.16 ಕೋಟಿ ವಾಹನ; ದೇಶದಲ್ಲೇ ಅತ್ಯಧಿಕ!

10:21 AM Apr 17, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲೇ ಅತ್ಯಧಿಕ ವಾಹನಗಳಿದ್ದು, ದೆಹಲಿಯನ್ನೂ ಹಿಂದಿಕ್ಕಿದೆ. ಅಂಕಿ ಅಂಶದ ಪ್ರಕಾರ ಬೆಂಗಳೂರಿನಲ್ಲಿ 1.16 ಕೋಟಿ ವಾಹನಗಳು ನೋಂದಣಿಯಾಗಿವೆ.

Advertisement

ಪೀಕ್‌ ಅವರ್‌ಗಳಲ್ಲಿ 60 ಲಕ್ಷ ವಾಹನಗಳು ರಸ್ತೆಗಿಳಿಯುತ್ತವೆ. ಇಡೀ ದೇಶದಲ್ಲಿ ಬೆಂಗಳೂರಿ ನಲ್ಲಿ ಅತ್ಯಧಿಕ ಖಾಸಗಿ ವಾಹನಗಳಿವೆ. ವಾಹನಗಳ ವಿಚಾರದಲ್ಲಿ ಬೆಂಗ ಳೂರು ದೆಹಲಿಯನ್ನೂ ಹಿಂದಿ ಕ್ಕಿದೆ.

ಈ ಕುರಿತು ಮಾಹಿತಿ ನೀಡಿದ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌. ಅನುಚೇತ್‌, ಸಂಚಾರ ಪೊಲೀಸರು ಎಲ್ಲ ಸಿಗ್ನಲ್‌ಗ‌ಳಲ್ಲೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಜೈಕಾದಿಂದ ಈಗಾಗಲೇ 28 ಸಿಗ್ನಲ್‌ ಅಳವಡಿಸಲಾಗಿದೆ. ಸಂಚಾರ ಪೊಲೀಸ್‌ ವಿಭಾಗದಿಂದ 165 “ಸಿ’ ಡ್ಯಾಕ್‌ ಅಭಿವೃದ್ಧಿಪಡಿಸಿರುವ ಕಾಸಿಕಾಸ್ಟ್‌ ಸಿಗ್ನಲ್‌ ಅಳವಡಿಸುತ್ತಿದ್ದೇವೆ. ಮುಂದಿನ 6 ರಿಂದ 8 ತಿಂಗಳುಗಳಲ್ಲಿ ಆ ಯೋಜನೆ ಪೂರ್ಣಗೊಳ್ಳಲಿದೆ. ಸಂಚಾರ ವ್ಯವಸ್ಥೆ ಸುಧಾರಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next