Advertisement

1.15 ಲಕ್ಷ ಸಸಿ ನಾಟಿಗೆ ಸಿದ್ಧ: ರಾಜೇಶ್‌ ನಾೖಕ್‌

12:50 PM Jun 03, 2022 | Team Udayavani |

ಬಂಟ್ವಾಳ: ಬಂಟ್ವಾಳ ಅರಣ್ಯ ಇಲಾಖೆ ವ್ಯಾಪ್ತಿಯ ಶಂಭೂರು ನರ್ಸರಿಯಲ್ಲಿ ಈ ಬಾರಿ ಸುಮಾರು 144 ಜಾತಿಯ 1.15 ಲಕ್ಷ ಸಸಿಗಳನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ 55 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ಹಂಚಿ ಉಳಿದವುಗಳನ್ನು ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನಾಟಿ ಮಾಡಲಾಗುತ್ತದೆ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಶಂಭೂರಿನಲ್ಲಿರುವ ಅರಣ್ಯ ಇಲಾಖೆ ನರ್ಸರಿಗೆ ಭೇಟಿ ನೀಡಿ ಈ ಸಾಲಿನ ಸಸಿಗಳ ವಿತರಣೆಗೆ ಚಾಲನೆ ನೀಡಿದರು. ಇಲಾಖೆಯು ಪ್ರತಿವರ್ಷ ಗಿಡಗಳನ್ನು ನಾಟಿ ಮಾಡಿ ಅರಣ್ಯ ವೃದ್ಧಿಸುವ ಕಾರ್ಯ ಮಾಡುತ್ತಿದ್ದು, ಸಾರ್ವಜನಿಕರು ತಮ್ಮ ಖಾಲಿ ಜಾಗಗಳಲ್ಲಿ ಹೆಚ್ಚಿನ ಸಸಿಗಳ ನಾಟಿಗೆ ಮುಂದಾಗಬೇಕು. ತಮ್ಮ ಮಕ್ಕಳ ಹೆಸರಿನಲ್ಲಿ ಸಸಿಗಳನ್ನು ಬೆಳೆದಾಗ ಮಕ್ಕಳೇ ಅದರ ರಕ್ಷಣೆ ಮಾಡುತ್ತಾರೆ ಎಂದರು.

ಈ ಹಿಂದೆ ಸರಕಾರವು 9 ಲಕ್ಷ ಹೆಕ್ಟೇರ್‌ ಪ್ರದೇಶ ಅರಣ್ಯ ಎಂದು ವರದಿ ನೀಡಿದ್ದು, ಆದರೆ ಅಭಿವೃದ್ಧಿಗೆ ತೊಂದರೆಯಾಗುವ ಉದ್ದೇಶ ದಿಂದ ಅದನ್ನು 3.50 ಲಕ್ಷ ಹೆಕ್ಟೇರ್‌ ಪ್ರದೇಶ ಗುರುತಿಸಿದೆ. ಅಂದರೆ ಒಮ್ಮೆ ಒಂದು ಪ್ರದೇಶವನ್ನು ಇಲಾಖೆಯ ವ್ಯಾಪ್ತಿ ಯಲ್ಲಿ ಗುರುತಿಸಿದರೆ ಬಳಿಕ ಅದು ಹಲವು ಕಾನೂನುಗಳಿಗೆ ಒಳಪಡುತ್ತದೆ. ಹೀಗಾಗಿ ನಾವು ನಮ್ಮ ಜಾಗಗಳಲ್ಲೇ ಗಿಡಗಳನ್ನು ನೆಟ್ಟು ಕಾಡು ಬೆಳೆಸಬೇಕಿದೆ ಎಂದರು.

ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾರ್‌ ಮಾಹಿತಿ ನೀಡಿ ದರು. ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್‌ ಮಡಿಮುಗೇರು, ಸದಸ್ಯ ರಾದ ಕಿಶೋರ್‌ ಶೆಟ್ಟಿ ಅಂತರ, ಸುಜಾತಾ, ಸವಿತಾ, ಯೋಗೀಶ್‌, ರಂಜಿತ್‌ ಕೆದ್ದೇಲು, ಸಂತೋಷ್‌ಕುಮಾರ್‌, ಪ್ರಮುಖರಾದ ಆನಂದ ಶಂಭೂರು, ಗಣೇಶ್‌ ರೈ ಮಾಣಿ, ಸುಪ್ರೀತ್‌ ಆಳ್ವ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲ್ಯಾನ್‌, ಪ್ರೇಮನಾಥ ಶೆಟ್ಟಿ ಅಂತರ, ಮಾಧವ ಕರ್ಬೆಟ್ಟು, ಅರಣ್ಯ ರಕ್ಷಕರಾದ ಶೋಭಿತ್‌, ದಯಾನಂದ, ರವಿಕುಮಾರ್‌, ಅನಿತಾ, ಸ್ಮಿತಾ, ರೇಖಾ, ಪ್ರವೀಣ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next