Advertisement

ರಾಜ್ಯದಲ್ಲಿ 1.15 ಲಕ್ಷ ಜನ ಕ್ವಾರಂಟೈನ್‌

07:32 AM May 24, 2020 | Lakshmi GovindaRaj |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಸಡಿಲಿಕೆಯಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 1,15,558 ಜನರನ್ನು ಸರ್ಕಾರ ಅಧಿಕೃತ ಕ್ವಾರಂಟೈನ್‌ ಮಾಡಿದೆ. ಕಲಬುರ್ಗಿಯಲ್ಲಿ ಅತಿ ಹೆಚ್ಚು 30,707 ಜನರನ್ನು ಸಾಂಸ್ಥಿಕ  ಕ್ವಾರಂಟೈನ್‌ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ವಿಜಯಪುರ 13,516, ಯಾದಗಿರಿಯಲ್ಲಿ 12,854 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಅಂದರೆ ಕೇವಲ 61 ಜನರನ್ನುಕ್ವಾರಂಟೈನ್‌  ಮಾಡಲಾಗಿದ್ದು, ಬೆಂಗಳೂ ರು ಗ್ರಾಮಾಂತರ 192 ಹಾಗೂ ದಾವಣಗೆರೆ 231 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

ಕ್ವಾರಂಟೈನ್‌ ಸಮಸ್ಯೆ: ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿ  ಗಳನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಲು ನಿಗದಿಪಡಿಸಿದ ಆಸ್ಪತ್ರೆಗಳು ಸಾಲದಂತಾಗಿದೆ. ಹಿಂದುಳಿ ದ ವರ್ಗದ  ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆಗೆ ಸಂಬಂಧಿಸಿರುವ ಹಾಸ್ಟೆಲ್‌ ಗಳನ್ನು ಹಾಗೂ ಸರ್ಕಾರಿ ಶಾಲೆಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, ನಗರ ಪ್ರದೇಶ, ತಾಲೂಕು ಕೇಂದ್ರಗಳು  ಹಾಗೂ ಹೋಬಳಿ ಮಟ್ಟದಲ್ಲಿರುವ ಹಾಸ್ಟೇಲ್‌ಗ‌ಳು, ಸಮುದಾಯ ಭವನಗ ಳಲ್ಲಿಯೂ ಕ್ವಾರಂಟೈನ್‌ ಮಾಡಿದರೂ ಕೆಲವು ಜಿಲ್ಲೆಗಳಲ್ಲಿ ಜಾಗ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯ ಸರ್ಕಾರಕ್ಕೆ ಕ್ವಾರಂಟೈನ್‌ ಮಾಡುವುದೇ  ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬೀದರ್‌, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಗೆ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದು ಈ ಜಿಲ್ಲೆಗಳಲ್ಲಿ ಪ್ರತಿ ದಿನ 2 ರಿಂದ 3 ಸಾವಿರ ಜನರು ವಲಸಿಗರು  ಆಗಮಿಸು ತ್ತಿದ್ದು, ಅವರೆಲ್ಲರನ್ನೂ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡುವುದು ಜಿಲ್ಲಾಡಳಿತಗಳಿಗೂ ಸವಾಲಾಗಿದೆ. ಈ ನಡುವೆ ಸರ್ಕಾರ ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಕ್ಯಾನ್ಸರ್‌, ಕಿಡ್ನಿ ವೈಫಲ್ಯದಂತಹ ಗಂಭೀರ ರೋಗ  ಗಳಿಂದ ಬಳಲುತ್ತಿರುವ ರೋಗಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸದೆ ಅವರನ್ನು ಮನೆಗೆ ಕಳುಹಿಸಿ ಹೋಮ್‌ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಲಾಗುತ್ತಿದೆ.

ಕ್ವಾರಂಟೈನ್‌ ಅವಧಿ ಕಡಿತ: ಹೊರ ರಾಜ್ಯಗಳಿಂದ ಬರುವವರನ್ನು 14 ದಿನ ಕ್ವಾರಂಟೈನ್‌ ಮಾಡಲು ಕಷ್ಟವಾಗುತ್ತಿರುವುದರಿಂದ ವಿಶೇಷವಾಗಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಜ್ಯಗಳಾದ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ರಾಜಸ್ಥಾನ, ಹಾಗೂ ಮಧ್ಯಪ್ರದೇಶಗಳಿಂದ ಆಗಮಿಸುವ ವಲಸಿಗರನ್ನು 14 ದಿನಗಳ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, 7 ದಿನ ಹೋಮ್‌ ಕ್ವಾರಂಟೈನ್‌ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗೂ  ವ್ಯಾಪಾರದ ಮೇಲೆ ಪ್ರವಾಸ ಮಾಡುವವರು ಐಸಿಎಂಆರ್‌ ಗುರುತಿಸಿರುವ ಆಸ್ಪತ್ರೆಗಳಿಂದ ತಪಾಸಣೆ ವರದಿ ಪಡೆದುಕೊಂಡರೆ ಅಂಥವರನ್ನು ಯಾವುದೇ ಕ್ವಾರಂಟೈನ್‌ಗೆ ಒಳಪಡಿಸದಿರಲು ಸರ್ಕಾರ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next