Advertisement

1.10 ಕೋಟಿ ವೆಚ್ಚದಲ್ಲಿ ಹನಕೆರೆ ಅಭಿವೃದ್ಧಿ

04:20 PM Dec 22, 2019 | Suhan S |

ಮಂಡ್ಯ: ಸಣ್ಣ ನೀರಾವರಿ ಇಲಾಖೆಯಿಂದ 1.10 ಕೋಟಿ ರೂ. ವೆಚ್ಚದಲ್ಲಿ ಹನಕೆರೆ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಎಂ. ಶ್ರೀನಿವಾಸ್‌ ತಿಳಿಸಿದರು.

Advertisement

ವಿಧಾನಸಭಾ ಕ್ಷೇತ್ರದ ಹನಕೆರೆ ಗ್ರಾಮದಲ್ಲಿ ನಾಡ ಕಚೇರಿ ಉದ್ಘಾಟನೆ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತ ನಾ ಡಿ, ನಾನು ಮೂರು ಬಾರಿ ಶಾಸಕನಾಗಿದ್ದರೂ ಹನಕೆರೆ ಗ್ರಾಮ ಅಭಿವೃದ್ಧಿ ಕಂಡಿರಲಿಲ್ಲ. ಈ ಬಾರಿ ಹನಕೆರೆ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದ ಬಳಿ ಹೋರಾಟ ಮಾಡಿ ಕೆಲಸ ಮಂಜೂರು ಮಾಡಿಸಿದ್ದೇನೆ. ಸಾರ್ವಜನಿಕರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಮನುಷ್ಯನ ಹುಟ್ಟು-ಸಾವಿನ ನಡುವೆ ಏನಾದರೂ ಸಾಧನೆ ಮಾಡಬೇಕು. ಒಳ್ಳೆಯ ಕೆಲಸ ಮಾಡುವಾಗ ಕೆಲವು ಅನನುಕೂಲಗಳಾಗುತ್ತವೆ. ಅದನ್ನು ಪ್ಧಾ ನವಾಗಿರಿಸಿಕೊಳ್ಳದೆ ಊರಿನ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿದರು. ಜಾತಿ , ಆದಾಯ ಪ್ರಮಾಣ ಪತ್ರ ಸಲ್ಲಿಸಲು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ತಾಲೂಕು ಮಟ್ಟದಲ್ಲಿ ವಿತರಿಸಲಾಗುತ್ತಿತ್ತು. ನಾಗರಿಕರು ಈ ಸೌಲಭ್ಯಗಳನ್ನು ಇನ್ನು ಮುಂದೆ ಹನಕೆರೆ ಗ್ರಾಮದಲ್ಲೇ ಪಡೆಯಬಹುದು ಎಂದು ತಿಳಿಸಿದರು.

ಜಿಪಂ ಸದಸ್ಯ ಎಚ್‌.ಎನ್‌ .ಯೋಗೇಶ್‌, ತಾಪಂ ಸದಸ್ಯ ಎಚ್‌.ಡಿ.ಕಿರಣ್‌ಕುಮಾರ್‌, ಗ್ರಾಪಂ ಅಧ್ಯಕ್ಷ ಎಚ್‌. ಟಿ .ಶೇಖರ್‌, ತಹಶೀಲ್ದಾರ್‌ ಎಲ್‌.ನಾಗೇಶ್‌, ಉಪ ತಹಶೀಲ್ದಾರ್‌ ಡಿ.ತಮ್ಮಣ್ಣಗೌಡ, ಗ್ರಾಮ ಲೆಕ್ಕಿಗರಾದ ಸೌಂದರ್ಯ, ರೇಣುಕಮ್ಮ, ಸಂದೀಪ್‌, ಮುಖಂಡರಾದ ಅಶ್ವಥ್ ಶಿವರಾಮ ಪುಟ್ಟ ಸ್ವಾಮಿ, ಸಹಾಯಕ ಎಂಜಿನಿಯರ್‌ ಎಸ್‌. ದೊಡ್ಡ ವೀರಯ್ಯ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next