Advertisement

ಕೋವಿಡ್:ಬಾಗಲಕೋಟೆ-ಯಾದಗಿರಿಯಲ್ಲಿಂದು ಶೂನ್ಯ ಪ್ರಕರಣ; ರಾಜ್ಯದಲ್ಲಿ ಪತ್ತೆಯಾದ ಕೇಸ್ ಎಷ್ಟು ?

07:29 PM Jul 04, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿಂದು 1564 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಹಾಗೂ 59 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 04) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಕಳೆದ 24 ಗಂಟೆಗಳ (ದಿನಾಂಕ:03.07.2021,00:00 ರಿಂದ 23:59 ರವರೆಗೆ) ಅವಧಿಯಲ್ಲಿ 4775 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಗುಣಮುಖರಾದವರ ಸಂಖ್ಯೆ 2773407 ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-0, ಬಳ್ಳಾರಿ-17, ಬೆಳಗಾವಿ-28, ಬೆಂಗಳೂರು ಗ್ರಾಮಾಂತರ-42, ಬೆಂಗಳೂರು ನಗರ-352, ಬೀದರ್-3, ಚಾಮರಾಜನಗರ-48, ಚಿಕ್ಕ ಬಳ್ಳಾಪುರ-12, ಚಿಕ್ಕಮಗಳೂರು-72,   ಚಿತ್ರದುರ್ಗ-6, ದಕ್ಷಿಣ ಕನ್ನಡ-154, ದಾವಣಗೆರೆ-37, ಧಾರವಾಡ-8, ಗದಗ-5,  ಹಾಸನ-59, ಹಾವೇರಿ-4, ಕಲಬುರಗಿ-10, ಕೊಡಗು-150, ಕೋಲಾರ-57, ಕೊಪ್ಪಳ-7, ಮಂಡ್ಯ-65, ಮೈಸೂರು-162, ರಾಯಚೂರು-4, ರಾಮನಗರ-14, ಶಿವಮೊಗ್ಗ-77, ತುಮಕೂರು-116, ಉಡುಪಿ-28, ಉತ್ತರ ಕನ್ನಡ-24, ವಿಜಯಪುರ-3. ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next