Advertisement

“ಸಾಗರ ಮಾಲಾದಡಿ ಎನ್‌ಎಂಪಿಟಿ ಸಮಗ್ರ ಅಭಿವೃದ್ಧಿ’ : ಸರ್ಬಾನಂದ ಸೋನೊವಾಲ್‌

12:04 AM Sep 25, 2021 | Team Udayavani |

ಮಂಗಳೂರು: ಸಾಗರ ಮಾಲಾ ಯೋಜನೆಯಡಿ ನವಮಂಗಳೂರು ಬಂದರನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಬಂದರು, ನೌಕಾಯಾನ ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೊವಾಲ್‌ ತಿಳಿಸಿದರು.

Advertisement

ನವ ಮಂಗಳೂರು ಬಂದರು ಟ್ರಸ್ಟ್‌ (ಎನ್‌ಎಂಪಿಟಿ) ವತಿಯಿಂದ ಪಣಂಬೂರಿನಲ್ಲಿ ನಿರ್ಮಿಸಿರುವ ವ್ಯಾಪಾರ ಅಭಿವೃದ್ಧಿ ಕೇಂದ್ರದ ಲೋಕಾರ್ಪಣೆ ಮತ್ತು ಸ್ವಾತಂತ್ರೊéàತ್ಸವದ ಅಮೃ ತೋತ್ಸವ ಆಚರಣೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಸಾಗರಮಾಲಾ ಯೋಜನೆಯಡಿ ಬಂದರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗು ವುದು. ಗುರುಪುರದ ಫಲ್ಗುಣಿ ನದಿ ಸಮುದ್ರ ಸೇರುವ ಸ್ಥಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಮೀನುಗಾರಿಕೆ ಬೋಟುಗಳಿಗೆ ತುರ್ತು ಸಂದರ್ಭದಲ್ಲಿ ರಕ್ಷಣೆ ಒದಗಿಸುವುದರ ಸಹಿತ ಮೀನುಗಾರರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಳಾಯಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಅಡಚಣೆಗಳನ್ನು ನಿವಾರಿಸಿ ಅತೀ ಶೀಘ್ರದಲ್ಲಿ ಅದರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಂದರಿನಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ, ಮಲ್ಯ ಗೇಟ್‌ ನವೀಕರಣ ಸಹಿತ ಅನೇಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಬಂದರಿನಲ್ಲಿ ಸರಕು ನಿರ್ವಹಣೆ ಸುಲಭವಾಗಲಿದೆ. ಸರಕು ರಫ್ತು ಮತ್ತು ಆಮದಿಗೆ ಅನುಕೂಲಕರ ವಾತಾವರಣ ಕಲ್ಪಿಸಲಾಗುವುದು. ಸಮುದ್ರ ಮಾರ್ಗದಲ್ಲಿ ಅಕ್ರಮ, ನಿಷೇ ಧಿತ ವಸ್ತುಗಳ ಕಳ್ಳಸಾಗಾಟದ ಬಗ್ಗೆ ಮೀನುಗಾರರು ಇಲಾಖೆಗೆ ಸಹಕಾರ ನೀಡುವ ವಿಶ್ವಾಸ ಇದೆ ಎಂದರು.

Advertisement

ನವಮಂಗಳೂರು ಬಂದರು ಆಶ್ರಯದಲ್ಲಿ ಬೀದಿ ಜಾನುವಾರು ಸಂರಕ್ಷಣ ಕೇಂದ್ರ ಸ್ಥಾಪಿಸುವ ಉದ್ದೇಶವಿದ್ದು, ಇದೊಂದು ಉತ್ತಮ ಯೋಜನೆ ಯಾಗಿದೆ ಎಂದು ಶ್ಲಾಘಿಸಿದರು.

“ಮಂಗಳೂರು ಎಂಬ  ಹೆಸರು ಬರಲು ಕಾರಣಕರ್ತ ಳಾದ ಮಂಗಳಾದೇವಿ ದೇವರ ಆಶೀರ್ವಾದ ಪಡೆದು ನಾನು ಈ ಪ್ರದೇಶದ ಎರಡು ದಿನಗಳ ಪ್ರವಾಸ ಆರಂಭಿಸುತ್ತಿದ್ದೇನೆ’  ಸರ್ಬಾನಂದ ಸೋನೊವಾಲ್‌( ಮಂಗಳೂರಿಗೆ ಭೇಟಿ  ಹಿನ್ನೆಲೆಯಲ್ಲಿ ಕನ್ನಡದಲ್ಲಿಯೇ ಟ್ವೀಟ್‌)

Advertisement

Udayavani is now on Telegram. Click here to join our channel and stay updated with the latest news.

Next