Advertisement

ಕೋವಿಡ್ ನಿಯಂತ್ರಣಕ್ಕೆ ದೆಹಲಿ ಸರಕಾರದ ಹೊಸ ತಂತ್ರ! ಮಾಸ್ಕ್ ಧರಿಸದಿದ್ದರೆ 2000ರೂ ದಂಡ

06:53 PM Nov 19, 2020 | sudhir |

ನವದೆಹಲಿ: ನಗರದಲ್ಲಿ ಹೆಚ್ಚಿತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರಕಾರ ಮಾಸ್ಕ್ ಧರಿಸದೇ ಇರುವವರಿಗೆ ವಿಧಿಸುವ ದಂಡದ ಮೊತ್ತವನ್ನು 500ರ ಬದಲು 2000ಕ್ಕೆ ಏರಿಕೆ ಮಾಡಿ ಸೂಚನೆ ಹೊರಡಿಸಿದೆ.

Advertisement

ಈ ಮೂಲಕ ಕಡ್ಡಾಯವಾಗಿ ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚನೆಯನ್ನು ನೀಡಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಮಿತಿಮೀರಿದ್ದು ಮೂರನೇ ಹಂತವನ್ನೂ ದಾಟಿದೆ ಹಾಗಾಗಿ ಸೋಂಕು ನಿಯಂತ್ರಿಸುವುದು ಬಹಳ ಅಗತ್ಯವಾಗಿದೆ, ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಈ ಮೊದಲು ಇದ್ದ 500 ರೂ ದಂಡ ಮೊತ್ತವನ್ನು 2000ಕ್ಕೆ ಏರಿಸಲು ಸೂಚನೆ ನೀಡಿದ್ದಾರೆ.

ದಂಡದ ಮೊತ್ತಕ್ಕೆ ಹೆದರಿ ಜನರು ಮಾಸ್ಕ್ ಧರಿಸುತ್ತಾರೆ ಎನ್ನುವ ಕಾರಣದಿಂದ ಈ ದಂಡ ಪ್ರಮಾಣವನ್ನು ಏರಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಚರಂಡಿ ಸೇರುತ್ತಿದೆ “ಜೀವ ಜಲ’! ಮುಖ್ಯ ಪೈಪ್‌ಲೈನ್‌ ಒಡೆದು ಕಳೆದಿವೆ ಹಲವು ತಿಂಗಳು

ಈಗಾಗಲೇ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳ ಸಂಖ್ಯೆಯನ್ನು ಜಾಸ್ತಿ ಮಾಡಲಾಗಿದೆ.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಐಸಿಯುನಲ್ಲಿ ಶೇ 80ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವ ನಿರ್ಧಾರವನ್ನು ಇಂದಿನಿಂದ ಜಾರಿಗೆ ತರಲಾಗಿದೆ ಎಂದು ಅವರು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next