ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಪರಿಣಾಮ ದೇಶದ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಗುರುವಾರ (ಜೂನ್ 17) ಬಿಡುಗಡೆಗೊಳಿಸಿರುವ ಜೂನ್ 2021ರ ಮಾಸಿಕ ಬುಲೆಟಿನ್ ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ: ಸೋಮಶೇಖರ ರೆಡ್ಡಿ ಅಸಮಾಧಾನ
ಕೋವಿಡ್ 19 ಎರಡನೇ ಅಲೆ ಸಣ್ಣ ನಗರ ಪ್ರದೇಶದಿಂದ ಹಿಡಿದು ಹಳ್ಳಿಗಳಿಗೂ ವ್ಯಾಪಿಸುವ ಮೂಲಕ ಕೋವಿಡ್ ಲಾಕ್ ಡೌನ್, ನಿರ್ಬಂಧಗಳಿಂದ ಬಹುತೇಕ ವಹಿವಾಟು, ಹಣಕಾಸು ವ್ಯವಹಾರ ಸ್ಥಗಿತಗೊಂಡಿತ್ತು ಎಂದು ವರದಿ ಹೇಳಿದೆ.
ಹಲವು ಕ್ರಮಗಳ ನಡುವೆಯೂ ಆರ್ಥಿಕ ಚೇತರಿಕೆ ಬಗ್ಗೆ ಆಶಾವಾದ ಕಂಡುಬಂದರೂ ಕೂಡಾ ಭಾರತದ ಆರ್ಥಿಕತೆ ಕೋವಿಡ್ ಎರಡನೇ ಅಲೆಯ ಪರಿಣಾಮ ಹಿಂಜರಿಕೆಯನ್ನು ಮುಂದುವರಿಸಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗಮನಿಸಿದೆ. ಅಲ್ಲದೇ ಕೋವಿಡ್ ಎರಡನೇ ಅಲೆಯು ಮುಖ್ಯವಾಗಿ ದೇಶೀಯ ವಸ್ತುಗಳ ಬೇಡಿಕೆ ಮೇಲೆ ದೊಡ್ಡ ಹೊಡೆತ ನೀಡಿರುವುದಾಗಿ ವಿವರಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ತನ್ನ ಮಾಸಿಕ ಬುಲೆಟಿನ್ ನಲ್ಲಿ, ಒಟ್ಟಾರೆ ದೇಶದ ಎಲ್ಲಾ ರಾಜ್ಯಗಳ ಆರ್ಥಿಕ ಸ್ಥಿತಿ, ಭಾರತದ ಸಾರ್ವಭೌಮತೆ ಫಲ ಮತ್ತು ದೇಶದ ಹಣಕಾಸಿನ ಚೌಕಟ್ಟನ್ನು ಆಧರಿಸಿರುವುದಾಗಿ ವಿವರಿಸಿದೆ.
ಆರ್ಥಿಕ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ, ಕೋವಿಡ್ ಎರಡನೇ ಅಲೆಯಿಂದಾಗಿ ದೇಶಿ ಬೇಡಿಕೆ ಕುಸಿತ ಕಂಡಿತ್ತು. ಅಷ್ಟೇ ಅಲ್ಲ ಕೃಷಿ ಮತ್ತು ಇನ್ನಿತರ ಕ್ಷೇತ್ರಗಳ ಮೇಲೆ ಅಪಾರ ಪರಿಣಾಮ ಬೀರಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೈಗಾರಿಕಾ ಉತ್ಪಾದನೆ ಮತ್ತು ರಫ್ತು ಪ್ರಮಾಣ ಹೆಚ್ಚಳವಾಗಿರುವುದಾಗಿ ವರದಿಯಲ್ಲಿ ತಿಳಿಸಿದೆ.