Advertisement
ಇಸ್ರೇಲ್‌ನಲ್ಲಿ ಬೋಟ್ಲ್ವಾನಾ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಗಳು ಇವೆ ಎಂದು ಪ್ರಧಾನಿ ನೆಫ್ವಾಲಿ ಬೆನ್ನೆಟ್ ಹೇಳಿದ್ದಾರೆ.
ಜರ್ಮನಿಯಲ್ಲಿ ಹೊಸ ಮೈತ್ರಿಕೂಟ ಮುಂದಿನ ತಿಂಗಳು ಅಧಿಕಾರಕ್ಕೆ ಬರುತ್ತಿರುವಂತೆಯೇ ಸೋಂಕಿನ 4ನೇ ಅಲೆ ಕಾಣಿಸಿಕೊಳ್ಳಲಾರಂಭಿಸಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ಯುರೋಪ್‌ನಲ್ಲಿ 76 ಸಾವಿರ ಕೇಸುಗಳು ದೃಢಪಟ್ಟಿವೆ. ಈಗಲೇ ಹೇಳಲಾಗದು:
ಹೊಸ ರೂಪಾಂತರಿ ಎಷ್ಟು ಅಪಾಯಕಾರಿ ಎಂಬ ಬಗ್ಗೆ ತಕ್ಷಣಕ್ಕೆ ಏನನ್ನೂ ಹೇಳಲಾಗದು. ಅದಕ್ಕೆ ಇನ್ನೂ ಕೆಲವು ವಾರಗಳು ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
Related Articles
ದೇಶದಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 10,549 ಹೊಸ ಕೇಸುಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 488 ಮಂದಿ ಅಸುನೀಗಿದ್ದಾರೆ. ಈ ಪೈಕಿ ಕೇರಳದಲ್ಲಿಯೇ 384 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 1,10,133ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.33 ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
Advertisement
ಡಿ.15ರಿಂದ ಅಂತಾರಾಷ್ಟ್ರೀಯ ವಿಮಾನಯಾನಜಗತ್ತಿನ ಕೆಲವು ಭಾಗಗಳಲ್ಲಿ ಬೋಟ್ಸ್ವಾನಾ ರೂಪಾಂತರಿ ಸೋಂಕು ಪತ್ತೆಯಾಗಿರುವಂತೆಯೇ ಡಿ.15ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಶುರು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸದ್ಯ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೂಡ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ನಿರ್ಧರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ 14 ದೇಶಗಳನ್ನು ಹೊರತು ಪಡಿಸಿ ವಿಮಾನಯಾನ ಶುರುವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಯು.ಕೆ, ಸಿಂಗಪುರ್, ಚೀನಾ, ಬ್ರೆಜಿಲ್, ಬಾಂಗ್ಲಾದೇಶ, ಮಾರಿಷಸ್, ಜಿಂಬಾಬ್ವೆ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬೋಟ್ಸಾ$Ìನಾ, ಇಸ್ರೇಲ್ ಮತ್ತು ಹಾಂಕಾಂಗ್‌ಗಳಿಗೆ ವಿಮಾನಯಾನ ಇರುವುದಿಲ್ಲ. ಭಾರತದಲ್ಲಿ ಮೂರನೇ ಅಲೆ ಇಲ್ಲ: ಗುಲೇರಿಯಾ
“ಭಾರತದಲ್ಲಿ ಈ ಹಿಂದೆ ಬಂದುಹೋಗಿರುವ ಕೊರೊನಾ ಅಲೆಗಳಿಗಿಂತ ಹೆಚ್ಚು ಮಾರಕವಾಗಿರುವ ಕೊರೊನಾ ಮೂರನೇ ಅಲೆಯು ಭಾರತಕ್ಕೆ ಅಪ್ಪಳಿಸುವ ಭೀತಿ ಸದ್ಯಕ್ಕಿಲ್ಲ” ಎಂದು ನವದೆಹಲಿಯ ಅಖೀಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅಭಯ ನೀಡಿದ್ದಾರೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಕೊರೊನಾ ಅಲೆ ಬಂದು ಅಪ್ಪಳಿಸಿದ ರೀತಿಯಲ್ಲಿ ಮೂರನೇ ಅಲೆ ಬರುವುದಿಲ್ಲ. ನಮ್ಮಲ್ಲಿ ಅನೇಕರು ಲಸಿಕೆ ಪಡೆದುಕೊಂಡಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿರಲಿದ್ದಾರೆ. ಸದ್ಯಕ್ಕೆ ಲಸಿಕೆಯ ಮೂರನೇ ಡೋಸ್ ಲಸಿಕೆಯ ಅಗತ್ಯತೆಯೂ ಕಂಡುಬರುತ್ತಿಲ್ಲ’ ಎಂದಿದ್ದಾರೆ. ಏನಿದು ಬೋಟ್ಸ್ವಾನಾ ರೂಪಾಂತರಿ?
ದಕ್ಷಿಣ ಆಫ್ರಿಕಾದ ಅತಿ ಜನನಿಬಿಡ ಪ್ರಾಂತ್ಯವಾದ ಗುಟೆಂಗ್‌ನಲ್ಲಿ ಈ ವೈರಾಣುವಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅತ್ತ, ಹಾಂಕಾಂಗ್, ಬೋಟ್ಸ್ವಾನಾದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಇದೇ ಮಾದರಿಯ ವೈರಾಣು ಪತ್ತೆಯಾಗಿದೆ. ಇದರ ಹೊರತಾಗಿಯೂ ಬೋಟ್ಸ್ವಾನಾ ರೂಪಾಂತರಿ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ. ಹೆಚ್ಚು ಶಕ್ತಿಶಾಲಿ
ಸಾಮಾನ್ಯವಾಗಿ ಕೊರೊನಾ ವೈರಾಣುವಿನ ಮೇಲೆ ಪೊಟೀನ್‌ನಿಂದ ಕೂಡಿದ ಮುಳ್ಳಿನಂಥ ಆಕಾರವಿರುತ್ತದೆ. ಬಿ.1.1.529 ರೂಪಾಂತರಿ ವೈರಾಣುವಿನಲ್ಲಿ ಈ ಪ್ರೋಟೀನ್, ಕನಿಷ್ಟ 30 ಬಾರಿಯಾದರೂ ರೂಪಾಂತರ ಹೊಂದಿದೆ ಎಂದು ಹೇಳಲಾಗಿದೆ. ಹಾಗಾಗಿ, ಇದು ಈವರೆಗಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬುಧವಾರ-ಗುರುವಾರಗಳಂದು ದಾಖಲಾಗಿರುವ 1,100 ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ. 90ರಷ್ಟು ಹೊಸ ರೂಪಾಂತರಿ ಪತ್ತೆಯಾಗಿರುವುದು ಇದರ ತ್ವರಿತ ಹರಡುವಿಕೆಗೆ ಸಾಕ್ಷಿಯಾಗಿದೆ. ಸಮಾಧಾನಕರ ಸಂಗತಿ!
ಕೊರೊನಾಕ್ಕೆ ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಎಲ್ಲಾ ಲಸಿಕೆಗಳು ಈ ಹೊಸ ರೂಪಾಂತರಿ ವೈರಾಣುವನ್ನು ಹತ್ತಿಕ್ಕುವಲ್ಲಿ ಶಕ್ತವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು, ಈ ವೈರಾಣುವಿನಿಂದ ಈವರೆಗೆ ಕಂಡಿರದ ಅತಿ ಭೀಕರ ಕೊರೊನಾ ರೋಗ ಉಂಟಾಗುತ್ತದೆ ಎಂಬುದಂತೂ ಸುಳ್ಳು ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಇವೆರಡೂ ವಿಚಾರಗಳು, ಹೊಸ ರೂಪಾಂತರಿಯ ಭೀತಿಯ ನಡುವೆಯೂ ಈ ವಿಚಾರ ಸಮಾಧಾನ ಹಾಗೂ ಆತ್ಮವಿಶ್ವಾಸ ತರುವಂಥದ್ದಾಗಿವೆ.