Advertisement

ಸೌಲಭ್ಯ ವಂಚಿತ ಶಾಲೆಗಳ ಬಲವರ್ಧನೆ ಅತ್ಯವಶ್ಯ

05:03 PM Apr 04, 2019 | Team Udayavani |

ದಾವಣಗೆರೆ: ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ ಸೊರಗುತ್ತಿರುವ ಸರ್ಕಾರಿ ಶಾಲೆಗಳ ಬಲವರ್ಧನೆ ಅತ್ಯವಶ್ಯ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದರು.

Advertisement

ಕಾರ್ಯಕ್ರಮದ ಅಂಗವಾಗಿ ಬುಧವಾರ ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬಹುತೇಕ ಕಡೆ ಕಟ್ಟಡಗಳು ಶಿಥಿಲಗೊಂಡಿವೆ. ಮೂಲಭೂತ ಸೌಲಭ್ಯಗಳಾದ ಶೌಚಾಲಯ, ನೀರಿನ ವ್ಯವಸ್ಥೆ, ಮಕ್ಕಳು ಕುಳಿತುಕೊಳ್ಳಲು ಬೇಕಾದ ಆಸನಗಳ ಕೊರತೆ ಎದ್ದು ಕಾಣುತ್ತಿದೆ. ಇವುಗಳ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ. ಸೋಮಶೇಖರ್‌ ಮಾತನಾಡಿ, ದೇಶದ ಬಹುತೇಕ ಮೇಧಾವಿಗಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಗ್ರಾಮೀಣ ಶಾಲೆಗಳನ್ನು ಉಳಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಆದರೆ, ಇಂದು ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದಂತಾಗಿದೆ ಎಂದರು.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪಾಠ ಪ್ರವಚನಗಳು ಸರಿಯಾಗಿ ನಡೆಯದ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳತ್ತ
ಮುಖ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸದೇ ಹೋದಲ್ಲಿ ಶಿಕ್ಷಣ ಅತ್ಯಂತ ದುಬಾರಿಯಾಗಿ, ಬಡವರ
ಕೈಗೆಟುಕದಂತಾಗಲಿದೆ ಎಂದು ಎಚ್ಚರಿಕೆ ನೀಡಿದರು.

Advertisement

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌.ಅರುಣ್‌ ಕುಮಾರ್‌ ಮಾತನಾಡಿ, ನರಗನಹಳ್ಳಿ ಪ್ರಾಥಮಿಕ ಶಾಲೆಯು ಶಿಕ್ಷಕರ ಉತ್ತಮ ಬೋಧನೆಯಿಂದಾಗಿ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಿದೆ. ಈ ಶಾಲೆಯ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸಹ ಮೇಲುಗೈ ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಒಂದು ಕಾಲಕ್ಕೆ 750 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ ಈಗ ಕೇವಲ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು. ಇಂದಿನ ಪರಿಸ್ಥಿತಿಗೆ ಕೈಗನ್ನಡಿ ಎಂದು ಬೇಸರ ವ್ಯಕ್ತಪಡಿಸಿದರು.

ನರಗನಹಳ್ಳಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎನ್‌.ಪಿ. ನಾಗರಾಜ್‌, ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಎನ್‌. ಜಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎನ್‌.ಆರ್‌. ಅಣ್ಣೇಶಪ್ಪ, ಗ್ರಾಮದ ಮುಖಂಡರಾದ ಎಚ್‌. ಚನ್ನಪ್ಪ, ಎನ್‌.ಕೆ. ನಾಗರಾಜ್‌, ಎನ್‌.ಆರ್‌. ತಿಪ್ಪೇಸ್ವಾಮಿ, ಎಚ್‌. ಪರಮೇಶ್ವರಪ್ಪ, ಎನ್‌.ಜಿ.ಗುರುದೇವ್‌, ಎನ್‌.ಜಿ. ಅರವಿಂದ್‌, ಎನ್‌.ಆರ್‌. ರುದ್ರೇಶ್‌, ಮಂಡಲೂರು ಬಸವಂತಪ್ಪ, ಸಿ.ಎಂ. ಶಿವಯೋಗಿ, ನಾಗರಸನಹಳ್ಳಿ ಪ್ರಕಾಶ್‌, ಎನ್‌.ಆರ್‌. ಕೃಷ್ಣ ರಾಜ್‌, ಮುಖ್ಯ ಶಿಕ್ಷಕ ಯಲ್ಲಪ್ಪ ಕಡೇಮನಿ, ಶಿಕ್ಷಕರಾದ ಪ್ರಕಾಶ್‌ ಕೊಡಗನೂರು, ಬಿ.ಎಂ. ಮಂಜುಳಮ್ಮ, ಯು. ಅರುಣಾದೇವಿ, ಆರ್‌.ಶ್ಯಾಮಲ, ಕೆ.ಶಶಿಕಲಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next