Advertisement

ಸರಕಾರಕ್ಕೆ ವಂಚನೆ ಮಾಡಿಲ್ಲ : ವಿಜಯ ನಿರಾಣಿ ಸ್ಪಷ್ಟನೆ

02:23 PM Jul 04, 2021 | Team Udayavani |

ಬೆಂಗಳೂರು : ಸರಕಾರಕ್ಕೆ ಯಾವುದೇ ರೀತಿಯಲ್ಲೂ ವಂಚನೆಮಾಡದೆ, ಕಾನೂನಿನ ಪ್ರಕಾರವೇ ಕಾರ್ಮಿಕರಿಗೆ ಸಕಾಲಕ್ಕೆಸರಿಯಾಗಿ ತಿಂಗಳ ವೇತನ, ರೈತರಿಗೆ ಹಣ ಪಾವತಿ ಹಾಗೂ ಶಾಸನಬದ್ಧವಾಗಿ ಶುಲ್ಕವನ್ನು ಭರಿಸಿದ್ದೇವೆ ಎಂದು ನಿರಾಣಿಶುಗಸ್೯ನ ವ್ಯವಸ್ಥಾಪಕ ನಿದೇರ್ಶಕ ವಿಜಯ ನಿರಾಣಿ ಅವರುತಮ್ಮ ಸಂಸ್ಥೆ ಮೇಲೆ ಕೇಳಿ ಬಂದಿರುವ ಆರೋಪವನ್ನುಸರಾಸಾಗಾಟಾಗೆ ನಿರಾಕಾರಿಸಿದ್ದಾರೆ.

Advertisement

ಸಾಮಾಜಿಕ ಕಾರ್ಯಕರ್ತ ಡಾ.ಹೆಚ್.ಎನ್. ರವೀಂದ್ರ ಅವರು, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವಂಚನೆಮಾಡಲಾಗಿದೆ ಎಂದು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಕ್ಕೆ ದೂರು ನೀಡಿರುವ ಸಂಬಂಧ ಸುಧೀರ್ಘ ಸೃಷ್ಟನೆನೀಡಿರುವ ವಿಜಯ ನಿರಾಣಿ ಅವರು, ಕಾನೂನು ಬದ್ಧವಾಗಿಯೇವ್ಯವಹಾರ ನಡೆಸುತ್ತಿದ್ದು ಎಲ್ಲಿಯೂ ಕಾನೂನು ಉಲ್ಲಂಘನೆಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ನಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಯನ್ನು ಕೊವಿಡ್ ಸಂಕಷ್ಟದನಡುವೆಯೂ ಅತಿ ಕಡಿಮೆ ಅವಧಿಯಲ್ಲಿ ಮರುಪ್ರಾರಂಭಿಸಿದ್ದೇವೆ. ಸುಖಾಸುಮ್ಮನೆ ತಮ್ಮ ಹಾಗೂ ‌ನಿರಾಣಿಶುಗಸ್೯ ಮೇಲೆ ಸುಳ್ಳು ಆರೋಪ ಮಾಡಿರುವ ಡಾ.ರವೀಂದ್ರಕೂಡಲೇ ಕ್ಷೆಮೆಯಾಚಿಸಬೇಕು ಇಲ್ಲದಿದ್ದರೆ, ಕಾನೂನು ಕ್ರಮಜರುಗುಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಂಸ್ಥೆ ಇಲ್ಲವೇ ವ್ಯಕ್ತಿಯೊಬ್ಬರಬಗ್ಗೆ ಸತ್ಯಾಸತ್ಯತೆಯನ್ನು ಅರಿತು ಡಾ.ರವೀಂದ್ರ ಅವರು ಮಾತನಾಡಬೇಕು. ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದುಆಧಾರರಹಿತವಾಗಿ‌ ಆರೋಪ ಮಾಡುವುದು ತಪ್ಪು. ಈ ಕೂಡಲೇತಮ್ಮ ಸಂಸ್ಥೆ ವಿರುದ್ಧ ನೀಡಿರುವಹೇಳಿಕೆಯನ್ನುಸಾರ್ವಜನಿಕವಾಗಿ ಹಿಂಪಡೆದು ಕ್ಷಮಾಪಣೆಕೇಳಬೇಕು.ಇಲ್ಲವಾದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ವಂಚನೆ ಮಾಡುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ ನಾವು ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳನ್ನುನಡೆಸುತ್ತಿದ್ದೇವೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಡಾ.ರವೀಂದ್ರಆರೋಪ ಮಾಡಿ ಎಸಿಬಿಗೆ ದೂರು ಸಲ್ಲಿಸಿದ್ದು, ಅವೆಲ್ಲವೂನಿರಾಧಾರವಾಗಿವೆ. ನಮ್ಮ ಏಳ್ಗೆಯನ್ನು ಸಹಿಸದೆ ನಿರಾಣಿ ಸಮೂಹದ ಮೇಲೆ ಕೇವಲ ಬಿಟ್ಟಿ ಪ್ರಚಾರ ಪಡೆಯುವದುರುದ್ದೇಶದಿಂದ ಅವರು ಆಧಾರರಹಿತ ಆರೋಪಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಕೊವಿಡ್ಲೆಕ್ಕಿಸದೇ ಅತ್ಯಂತ ಕಡಿಮೆ ಅವಧಿಯಲ್ಲಿ ಪುನರುಜ್ಜೀವನಗೊಳಿಸಿಕಾರ್ಖಾನೆ ಪ್ರಾರಂಭಿಸಿ, ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿಉದ್ಯೋಗಗಳನ್ನು ನೀಡಲಾಗಿದೆ‌
ಕಾರ್ಮಿಕರ ವೇತನ, ರೈತರ ಬಿಲ್ ಪಾವತಿ, ಗುತ್ತಿಗೆದಾರರು, ಕಬ್ಬುಕಟಾವುದಾರರು, ವಾಹನ ಬಾಡಿಗೆದಾರರ ಹಣ ಎಲ್ಲವನ್ನುಸಕಾಲಕ್ಕೆ ನಿಯಮಿತವಾಗಿ ನೀಡುತ್ತಾ ಬಂದಿದ್ದೇವೆ ಎಂದುಹೇಳಿದ್ದಾರೆ.

ಕಳೆದ ವರ್ಷ ಟ್ರಯಲ್ ಅವಧಿಯಲ್ಲಿ ₹8 ಕೋಟಿ ನಷ್ಟಅನುಭವಿಸಿದರೂ ಸಕಾಲಕ್ಕೆ ರೈತರ ಬಿಲ್ ಪಾವತಿ ಮಾಡಲಾಗಿದೆ. ಎಲ್ಲಾ ಶಾಸನಬದ್ದ ಶುಲ್ಕಗಳನ್ನು ನಿಯಮಿತವಾಗಿಪಾವತಿಸಿದ್ದೇವೆ. ಕಾರ್ಖಾನೆ ವಿಸ್ತರಣೆಗೆ 5 ವರ್ಷಗಳ ಕಾಲಮಿತಿ ಇದ್ದರೂ, ಶಾಸನಬದ್ದವಾಗಿ ಹಸ್ತಾಂತರವಾಗದಿದ್ದರೂ ಕಾರ್ಖಾನೆ ಸುಸ್ಥಿರವಾಗಿನಡೆಯಬೇಕು ಎಂಬ ಸದುದ್ದೇಶದಿಂದ ₹50 ಕೋಟಿ ಹಣಹೂಡಿಕೆ ಮಾಡಿ ಕೇವಲ ಒಂದೇ ವರ್ಷದಲ್ಲಿ ಆಧುನಿಕತಂತ್ರಜ್ಞಾನದೊಂದಿಗೆ 3,500 ಟಿಸಿಡಿಯಿಂದ 5,000 ಟಿಸಿಡಿಮೇಲ್ದರ್ಜೆಗೆ ಏರಿಸಿದ್ದೇವೆ ವಿಜಯ ನಿರಾಣಿ ಅವರು ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿದ್ದ ಎಲ್ಲ ನಿರಪಯುಕ್ತ (ಸ್ಕ್ರ್ಯಾಪ್) ವಸ್ತುಮಾರಿದ್ದಕ್ಕೂ ಪ್ರತ್ಯೇಕವಾಗಿ ಲೆಕ್ಕ ಇಡಲಾಗಿದೆ. ಡಿಸ್ಟಿಲರಿ ಘಟಕಸ್ಥಾಪನೆಗೆ ಎಲ್ಲ ಯೋಜನೆ ಹಾಕಿಕೊಂಡಿದ್ದೂ ಸರ್ಕಾರ ಸ್ಥಳಗುರ್ತಿಸಿಕೊಟ್ಟರೇ ಶೀಘ್ರವೇ ಕೆಲಸ ಪ್ರಾರಂಭವಾಗುತ್ತದೆ. ಕಾರ್ಮಿಕ ಹಾಗೂ ರೈತ ಸ್ನೇಹಿಯಾಗಿ ಕಾರ್ಖಾನೆಯನ್ನುನಡೆಸಬೇಕು ಎಂಬ ಒಂದೇ ಉದ್ದೇಶದಿಂದ ಇದನ್ನುಮಾಡಲಾಗಿದೆ. ರೈತರು ಹಾಗೂ ಕಾರ್ಮಿಕರ ಬಗ್ಗೆ ತಮಗಿರುವಬದ್ಧತೆಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ದೀರ್ಘ ಕಾಲದ ಗುತ್ತಿಗೆಯ ಅವಧಿಯನ್ನು ಪ್ರಶ್ನೆ ಮಾಡುತ್ತಿರುವಅವರಿಗೆ ಅದೊಂದು ಸರ್ಕಾರದ ನಿರ್ಧಾರ ಎಂಬ ಕನಿಷ್ಠಜ್ಞಾನವೂ ರವೀಂದ್ರ ಅವರಿಗೆ ಇಲ್ಲ ತಿರುಗೇಟು ನೀಡಿದ್ದಾರೆ. ಗುತ್ತಿಗೆಯನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲೆಅತಿಹೆಚ್ಚು ಬೆಲೆಗೆ ಬಿಡ್ ಮಾಡಿ ಸರ್ಕಾರದ ಕರಾರಿನಂತೆ ಲೀಜ್ಪಡೆಯಲಾಗಿದೆ. ₹1 ಕೋಟಿ ಇ.ಎಂ.ಡಿ ಹಾಗೂ ಭದ್ರತಾ ಠೇವಣಿ₹5 ಕೋಟಿಯನ್ನು ಈಗಾಗಲೇ ಸಂದಾಯ ಮಾಡಲಾಗಿದೆ ಎಂದುಸ್ಪಷ್ಟಪಡಿಸಿದ್ದಾರೆ ‌

ಮೊದಲ ಕಂತಿನ ₹20 ಕೋಟಿ ಹಣ ಕಟ್ಟಲು ಪ್ರಾರಂಭದದಿನದಿಂದಲೂ ಇಂದಿನವರೆಗೂ ನಾವು ಸಿದ್ದರಿದ್ದೇವೆ. ಆದರೆ ₹20 ಕೋಟಿ ಹಣವನ್ನು ಸರ್ಕಾರಕ್ಕೆ ಕಟ್ಟುವ ಕುರಿತು ಮಾತನಾಡುವಮುನ್ನ ಗುತ್ತಿಗೆ ಕರಾರು ಪತ್ರವನ್ನು ಒಮ್ಮೆ ಸರಿಯಾಗಿಓದಿಕೊಂಡು ನಮ್ಮ ಮೇಲೆ ಆರೋಪ ಮಾಡಿ ಎಂದು ತರಾಟೆಗೆತೆಗೆದುಕೊಂಡಿದ್ದಾರೆ.

ಗುತ್ತಿಗೆ ಪಡೆಯುವ ಮೊದಲು ಕಾರ್ಖಾನೆಯ ಮೇಲೆ ವಿವಿಧಹಣಕಾಸು ಸಂಸ್ಥೆಗಳ ಋಣಭಾರವಿತ್ತು. ಈ ಋಣಭಾರವನ್ನುಸರ್ಕಾರ ತೆರೆವುಗೊಳಿಸಿದ ಕೊಟ್ಟ ನಂತರ ಮೊದಲ ಕಂತಿನಹಣವನ್ನು ಪಾವತಿಸಬೇಕು ಎಂದು ನಿಬಂಧನೆಯಿದೆ. ಈ ಕುರಿತುಸದರಿ ಋಣಭಾರಗಳನ್ನು ತೆರವುಗೊಳಿಸಿ ಕೊಡಲು ಸರ್ಕಾರಕ್ಕೆಪ್ರಾರಂಭದ ದಿನದಿಂದಲೂ ಅನೇಕ ಬಾರಿ ವಿನಂತಿಮಾಡಿಕೊಂಡಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ‌

ಸರ್ಕಾರ ಋಣಭಾರ ತೆರವುಗೊಳಿಸದಿದ್ದರಿಂದ ಹಣ ಕಟ್ಟಿಲ್ಲ. ಸರ್ಕಾರದ ಈ ವಿಳಂಬದಿಂದ ನಮಗೂ ತೊಂದರೆಯಾಗಿದೆ. ಬೇರೆಹಣಕಾಸು ಸಂಸ್ಥೆಗಳ ಋಣಭಾರ ಇರುವುದರಿಂದ ನಮಗೂಹಣಕಾಸಿನ ಸೌಲಭ್ಯ ದೊರೆಯುತ್ತಿಲ್ಲ ಹಾಗೂ ಶಾಸನಬದ್ದವಾಗಿಹಸ್ತಾಂತರ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಈಗಿರುವಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಹೊಸ ಕಾರ್ಖಾನೆ ಸ್ಥಾಪಿಸುವವರಿಗೆ ನೊಂದಣಿ ಸಮಯದಲ್ಲಿಮುದ್ರಾಂಕ ಶುಲ್ಕ ವಿನಾಯತಿ ಸೌಲಭ್ಯವಿದೆ. ಆದರೆಸ್ಥಗಿತಗೊಂಡ ಕಾರ್ಖಾನೆ ಮರುಪ್ರಾರಂಭಿಸುವವರಿಗೆ ಈ ಸೌಲಭ್ಯದೊರೆಯುತ್ತಿಲ್ಲ. ಈ ಕುರಿತು ಆರ್ಥಿಕ ಇಲಾಖೆಗೆ ಮನವಿಮಾಡಿಕೊಳ್ಳಲಾಗಿದೆ. ಇಲಾಖೆಯ ನಿರ್ಧಾರಕ್ಕಾಗಿಕಾಯುತ್ತಿದ್ದೇವೆ. ಮುದ್ರಾಂಕ ಶುಲ್ಕ ವಿನಾಯಿತಿ ಸಿಕ್ಕರೆ 405 ಕೋಟಿ ಒಟ್ಟು ಮೊತ್ತಕ್ಕೆ ಕಟ್ಟಬೇಕಾದ 26 ಕೋಟಿ ಮುದ್ರಾಂಕಶುಲ್ಕದ ಹೊರೆ ಕಡಿಮೆಯಾಗುತ್ತದೆ.

21 ಜನ ಉದ್ಯೋಗಿಗಳನ್ನು ಕೆಲಸದಿಂದ ನಾವುಬಿಡುಗಡೆಗೊಳಿಸಿಲ್ಲ. ಅದು ಪಿ.ಎಸ್.ಎಸ್.ಕೆ ಆಡಳಿತ ಮಂಡಳಿನಿರ್ಧಾರ. ಅದಕ್ಕೂ ನಮಗೂ ಸಂಬಂಧವಿಲ್ಲ. ಕಾರ್ಖಾನೆಯಎಲ್ಲ ಹಳೆಯ ಉದ್ಯೋಗಿಗಳನ್ನು ಅತ್ಯಂತ ಗೌರವಯುತವಾಗಿನಡೆಸಿಕೊಂಡಿದ್ದೇವೆ ಎಂದು ದೂರಿನಲ್ಲಿರುವ ಆರೋಪವನ್ನುನಿರಾಕರಿಸಿದ್ದಾರೆ‌

ಕಾರ್ಖಾನೆ ಪ್ರಾರಂಭಿಸುವ ಮೊದಲೇ ಅವರಿಗೆ ಶೇ. 25 ವೇತನಬಡ್ತಿ ನೀಡಿದ್ದೇವೆ. ಮಂಡ್ಯ ಭಾಗದ 350 ನಿರುದ್ಯೋಗಿಯುವಕರಿಗೆ ಹೊಸ ಉದ್ಯೋಗ ನೀಡಿದ್ದೇವೆ. ತಿಂಗಳ ಮೊದಲವಾರದಲ್ಲಿಯೇ ನಿಯಮಿತವಾಗಿ ವೇತನ ನೀಡಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ ಹೊಂದಿದ ಒಂದು ಕಾರ್ಖಾನೆರೋಗಗ್ರಸ್ತವಾಗಿ ಸ್ಥಗಿತಗೊಂಡಾಗ ಸಾಮಾಜಿಕ ಕಳಕಳಿಯಿಂದನಿರಾಣಿ ಸಮೂಹ ಕಾರ್ಖಾನೆಯನ್ನು ಲೀಜ್ ಪಡೆದಿದೆ ಎಂದುತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ‌

ನಾವು ತೆಗೆದುಕೊಂಡ ತೀರ್ಮಾನದ ಫಲವಾಗಿ ಪಿಎಸ್‍ಎಸ್‍ಕೆಇಂದು ಸುಸ್ಥಿರವಾಗಿದ್ದು, ಮಂಡ್ಯ ಹಾಗೂ ಮೈಸೂರು ಭಾಗದರೈತರ ಬೆಳೆಗೆ ನಿಶ್ಚಿತ ಮಾರುಕಟ್ಟೆ ಹಾಗೂ ನಿಶ್ಚಿತ ಬೆಲೆ ದೊರಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದೆ ಎಂದು
ಹೇಳಿದ್ದಾರೆ.

ಕೊವಿಡ್‍ನಂತಹ ಸಂಕಷ್ಟದ ದಿನಗಳಲ್ಲಿಯೂ ಸ್ಥಗಿತಗೊಂಡಕಾರ್ಖಾನೆ ಸುಸ್ಥಿರವಾಗಿ ನಡೆಯುತ್ತಿರುವುದನ್ನು ನೋಡಿಸ್ವಾಭಿಮಾನಿ ಮಂಡ್ಯ ರೈತರು ಸಂತಸ ಪಡುತ್ತಿದ್ದಾರೆ. ಇದನ್ನುಸಹಿಸದೇ ಅಪಪ್ರಚಾರ ಮಾಡುವುದು ಮೂರ್ಖತನದಪರಮಾವಧಿ ಎಂದು ಟೀಕಿಸಿದ್ದಾರೆ.

ಮತ್ತೊಬ್ಬರ ಮೇಲೆ ಆರೋಪ ಹೊರಿಸುವ ಬದಲುಸಾಮಥ್ರ್ಯವಿದ್ದರೆ ತಾವೇ ಮುಂದೆ ಬಂದು ಕಾರ್ಖಾನೆನಡೆಸಬಹುದು. ಎಂದು ವಿಜಯ ನಿರಾಣಿ ಅವರು ಡಾ.‌ರವೀಂದ್ರಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next