ಬಳ್ಳಾರಿ: ಉದ್ಯೋಗ ಪಡೆಯಲು ಸಂಸ್ಕೃತಿಮತ್ತು ಕೌಶಲ್ಯಗಳು ಶಿಕ್ಷಣದಷ್ಟೆ ಅಗತ್ಯಎಂದು ರಂಗನಿರ್ದೇಶಕ, ಅಭಿನಯ ಕಲಾಕೇಂದ್ರದ ಅಧ್ಯಕ್ಷ ಕೆ.ಜಗದೀಶ ಹೇಳಿದರು.ನಗರದ ಎಸ್.ಜಿ.ಟಿ ಕಾಲೇಜಿನಲ್ಲಿಬುಧವಾರ ಆಯೋಜಿಸಿದ್ದ ನಿಯೋ ಫೆಸ್ಟ್‌ಕಾರ್ಯಕ್ರಮ ಉದ್ಘಾಟಿಸಿ (ನೂತನ ಪಿ.ಯುವಿದ್ಯಾರ್ಥಿಗಳ ಸ್ವಾಗತ) ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಬಹಳ ಪ್ರಭಾವಶಾಲಿಯಾಗಿವೆ. ವಿದ್ಯಾರ್ಥಿಗಳನ್ನುಯಾವುದೇ ಮಾರ್ಗಕ್ಕೆ ತಳ್ಳಿ ಬಿಡುವಂತಹವಾಗಿವೆ. ಸೌಲಭ್ಯಗಳು ಕೂಡ ಹೆಚ್ಚಾಗಿವೆ.ಅದುದರಿಂದ ವಿದ್ಯಾರ್ಥಿಗಳು ವಿವೇಚನಾಶಕ್ತಿ ಬೆಳೆಸಿಕೊಂಡು ತಮ್ಮದೇ ಜೀವನನಿರೂಪಿಸಿಕೊಳ್ಳಬೇಕಾಗಿದೆ. ಕೆಲಸ ಗಿಟ್ಟಿಸಿಕೊಳ್ಳುವಾಗ ಮತ್ತು ಕೆಲಸಕ್ಕೆ ಸೇರಿದಾಗದೇಹದ ಭಾಷೆ ಮತ್ತು ಮಾತಿನ ಸ್ಪಷ್ಟತೆಅಗತ್ಯವಾಗಿರುತ್ತದೆ ಎಂದರು.
ಪಿ.ಯು ಕಾಲೇಜಿನ ಪ್ರಾಚಾರ್ಯಜಿ.ತಿಪ್ಪೇರುದ್ರ ಮಾತನಾಡಿ, ಈ ಕಾಲೇಜಿನಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯರ್‍ಯಾಂಕುಗಳನ್ನು ಮತ್ತು ಮೆಡಿಕಲ್ ಸೀಟ್‌ಪಡೆಯುವಲ್ಲಿ ದಾಖಲೆ ಮಾಡಿ ಕಾಲೇಜಿಗೆಹೆಸರು ತಂದಿದ್ದಾರೆ ಎಂದು ತಿಳಿಸಿದರು.
ಪದವಿ ಕಾಲೇಜಿನ ಪ್ರಾಚಾರ್ಯ, ಎಸ್‌ಜಿಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಜಿ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಜೀವನದಲ್ಲಿ ಪಿ.ಯು.ಸಿ ಅತ್ಯಂತ ಮುಖ್ಯಘಟ್ಟವಾಗಿದೆ.
ಈ ಸಂದರ್ಭದಲ್ಲಿಯೇಮುಖ್ಯವಾದ ಗುರಿಗಳನ್ನು ಇಟ್ಟುಕೊಂಡುಅದರ ಸಾಧನೆಯಲ್ಲಿ ತೊಡಗಬೇಕು.ಟಿ.ವಿ ಮೊಬೈಲ್‌ಗಳು ಹಾಗೂ ಮುಂತಾದಸಾಮಾಜಿಕ ಜಾಲತಾಣಗಳು ಕೆಟ್ಟದಾರಿಗಳಿಗೆ ಸೆಳೆದು ಕೊಳ್ಳುವ ಅಪಾಯಗಳುಬಹಳ ಇರುವುದರಿಂದ ನೂರಕ್ಕೆ ನೂರುಜಾರದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥಎಸ್.ಎನ್.ರುದ್ರಪ್ಪ ಮಾತನಾಡಿ, ಪುನೀತ್‌ರಾಜ್‌ಕುಮಾರ್ ಹೇಗೆ ತಮ್ಮ ಪ್ರತಿಭೆಯನ್ನುಪ್ರಪಂಚ ಆದರಿಸುವಂತೆ ಬೆಳೆಸಿಕೊಂಡರುಹಾಗೆಯೇ ತಮ್ಮಲ್ಲಿನ ಸುಪ್ತ ಪ್ರತಿಭೆಗಳನ್ನುಗುರುತಿಸಿ ಹೊರ ತಂದುಕೊಳ್ಳಬೇಕುಎಂದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳುಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.