Advertisement

Mangaluru ಪ್ರಯಾಣಿಸುತ್ತಿದ್ದ ಮಹಿಳೆ ಅಸ್ವಸ್ಥ; ಬಸ್‌ ಆಸ್ಪತ್ರೆಗೆ

11:06 PM Sep 03, 2024 | Team Udayavani |

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆ ಯೊಬ್ಬರು ದಿಢೀರ್‌ ಅಸ್ವಸ್ಥಗೊಂಡಿದ್ದು, ತತ್‌ಕ್ಷಣವೇ ಬಸ್‌ ಅನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಘಟನೆ ಸೋಮ ವಾರ ಮಧ್ಯಾಹ್ನ ವೇಳೆ ನಡೆದಿದೆ.

Advertisement

ವಿಟ್ಲದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮರ್ಸಿ ಎಂಬ ಹೆಸರಿನ ಬಸ್‌ನಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಬಸ್ಸಿನ ಸೀಟಿಗೆ ಬಿದ್ದಿದ್ದರು. ಇದಕ್ಕೆ ಗಮನಿಸಿದ ರಾಣಿ ಅಬ್ಬಕ್ಕ ಬಸ್‌ ನೌಕರರ ಸಂಘದ ಸದಸ್ಯ, ಬಸ್‌ ಚಾಲಕ ಸವಾದ್‌ ಮತ್ತು ನಿರ್ವಾಹಕ ಯಾಕೂಬ್‌ ಅವರು ಬಸ್‌ ಅನ್ನು ನೇರವಾಗಿ ಕಣಚೂರು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಕರು ಅಸ್ವಸ್ಥ ಗೊಂಡಾಗ ಬಸ್‌ ಅನ್ನು ನೇರ ಆಸ್ಪತ್ರೆಗೆ ಕೊಂಡೊಯ್ದು ರಕ್ಷಣೆ ಮಾಡಿದ ಘಟನೆ ಉಡುಪಿ
ಮತ್ತು ಮಂಗಳೂರಿನ ಹಲವು ಕಡೆಗಳಲ್ಲಿ ನಡೆದಿರುವು ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next