ಬಳ್ಳಾರಿ: ವೈದ್ಯಕೀಯ ಮಹಾವಿದ್ಯಾಲಯವೆಂದರೆಬರೀ ಓದು, ರೋಗಿಗಳು ಹಾಗೂ ವೈದ್ಯರಜಂಜಾಟವಷ್ಟೇ ನೆನಪು ಬರುವುದು ಸಹಜ. ಆದರೆಇಲ್ಲಿನ ವಿಮ್ಸ್ ಆವರಣದಲ್ಲಿ ಇತ್ತೀಚೆಗೆ ನಡೆದಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ್ರವಿಮ್ಸ್‌ನ ವೈದ್ಯರು ಹಾಗೂ ವಿದ್ಯಾರ್ಥಿಗಳು ಕನ್ನಡದಕಟ್ಟಾಳುಗಳಾಗಿ ಭಾಷೆಯ ಸೌಂದರ್ಯವನ್ನುಹಾಗೂ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದು,ವೈದ್ಯರು ರೋಗಿಗಳ ಚಿಕಿತ್ಸೆಗೂ ಸೈ, ಕನ್ನಡಕ್ಕೆ ಟೊಂಕಕಟ್ಟಿ ನಿಲ್ಲಲೂ ಜೈ ಎನ್ನುವಂತಿತ್ತು.
ವಿಮ್ಸ್‌ನ ನಿರ್ದೇಶಕ ಡಾ| ಟಿ.ಗಂಗಾಧರಗೌಡ ಅವರು ವಿಮ್ಸ್ ಆಸ್ಪತ್ರೆಯಲ್ಲಿ ಕನ್ನಡತಾಯಿ ಭುವನೇಶ್ವರಿ ದೇವಿಯ ಪೂಜೆಯನ್ನುನೆರವೇರಿಸುವುದರ ಮೂಲಕ ಕರ್ನಾಟಕರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿ ಗೋಕಾಕ್ ಚಳುವಳಿಯಿಂದಹಿಡಿದು ಇಲ್ಲಿಯವರೆಗಿನ ಕನ್ನಡಕ್ಕಾಗಿ ಶ್ರಮಿಸಿದಹಿರಿಯರನ್ನು ನೆನಪಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖಕವಸುಧೇಂದ್ರ ಮಾತನಾಡಿ, ಬಳ್ಳಾರಿಯೊಂದಿಗೆ ತಮ್ಮಬಾಂಧವ್ಯವನ್ನು ಹಾಗೂ ಕನ್ನಡದ ಉಳಿವಿಗಾಗಿನಾವು ಮಾಡಬೇಕಾಗಿರುವ ಕರ್ತವ್ಯಗಳ ಬಗ್ಗೆಹೇಳಿದರು.ವಿಮ್ಸ್‌ನ ದ್ವಿತೀಯ ವರ್ಷದ ವೈದ್ಯಕೀಯವಿದ್ಯಾರ್ಥಿಗಳ “ಅಗಸ್ತ್ಯ’ ತಂಡದಿಂದನಡೆದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತಆಕರ್ಷಕವಾಗಿತ್ತು.ನಂತರ ನಡೆದ ವೈದ್ಯಕೀಯ, ಶುಶ್ರೂಷಕ,ದಂತ ವೈದ್ಯಕೀಯ ಹಾಗೂ ಅರೆ ವೈದ್ಯಕೀಯವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಸ್ತ್ರೀಯ ನೃತ್ಯ, ಭಾವಗೀತೆಗಳಗಾಯನ, ಚಲನಚಿತ್ರಗಳ ನೃತ್ಯ, ಜನಪದನೃತ್ಯ, ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವಪೋಷಾಕು ತೊಟ್ಟು ಮಾಡಿದ ನೃತ್ಯ ಎಲ್ಲವೂಮನಸೂರೆಗೊಂಡಿತು. ವಿನೂತನ ಪ್ರಯೋಗವಾದಕುಬjರ ನೃತ್ಯವಂತೂ ವಿದ್ಯಾರ್ಥಿಗಳ ಸೃಜನಶೀಲತೆಪ್ರತಿಬಿಂಬಿಸಿತು. ಜನಪದ ಕಲೆಗಳಾದ ಡೊಳ್ಳುಕುಣಿತ ಹಾಗೂ ಕಂಸಾಳೆ ನೃತ್ಯಗಳಂತೂವೃತ್ತಿಪರರನ್ನೇ ನಾಚಿಸುವಂತಿತ್ತು. ಬಣ್ಣ ಬಣ್ಣಗಳಪೋಷಾಕು ತೊಟ್ಟು ಕನ್ನಡ ಹಬ್ಬಕ್ಕೆ ವಿದ್ಯಾರ್ಥಿಗಳುಹಾಗೂ ವಿಮ್ಸ್ ಸಿಬ್ಬಂದಿ ಹಾಜರಾಗಿದ್ದು, ಗಮನಸೆಳೆಯಿತು.
ಈ ಸಂದರ್ಭದಲ್ಲಿ ವಿಮ್ಸ್‌ನ ಮುಖ್ಯಆಡಳಿತಾಧಿ ಕಾರಿ ಡಾ|ಚೆನ್ನಪ್ಪ, ಪ್ರಾಂಶುಪಾಲ ಡಾ|ಕೃಷ್ಣಸ್ವಾಮಿ, ಶುಶ್ರೂಷಕ ಕಾಲೇಜಿನ ಪ್ರಾಚಾರ್ಯೆಜ್ಯೋತಿ, ಪ್ರಭಾರಿ ವೈದ್ಯಕೀಯ ಅ ಧೀಕ್ಷಕಡಾ|ಅರುಣ್ ಕುಮಾರ್, ಟಿ.ಬಿ.ವೆಲ್ಲೆಸ್ಲಿ ಆಸ್ಪತ್ರೆಯಅ ಧೀಕ್ಷಕ ಡಾ| ವೈ.ವಿಶ್ವನಾಥ್, ಶುಶ್ರೂಷಕಅ ಧೀಕ್ಷಕ ಸಂಪತ್‌ಕುಮಾರ್, ವಿಮ್ಸ್ ಕನ್ನಡಸಂಘದ ಪದಾ ಧಿಕಾರಿಗಳಾದ ಡಾ|ದಿವ್ಯ ಕೆ.ಎನ್,ಡಾ|ಸುಮಾ ಗುಡಿ, ಡಾ|ಪೂರ್ಣಿಮಾ, ಮಹ್ಮದ್‌ರμàಕ್, ವಿಮ್ಸ್ ಕನ್ನಡ ಸಂಘದ ವಿದ್ಯಾರ್ಥಿಕಾರ್ಯದರ್ಶಿಗಳಾದ ಪ್ರಸಾದ್ ಕನ್ನಯ್ಯ,ರಂಜಿತಾ ಸಾಹು ಹಾಗೂ ಹಲವು ವೈದ್ಯರು,ವಿದ್ಯಾರ್ಥಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿಇದ್ದರು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿಸಲ್ಲಿಸಲಾಯಿತು.