Advertisement

ವಿದೇಶಕ್ಕೆ ಡ್ರಗ್ಸ್‌ ಸಾಗಿಸುತ್ತಿದ್ದ ಮೂವರ ಸೆರೆ

10:14 AM Oct 05, 2021 | Team Udayavani |

ಬೆಂಗಳೂರು: ಆಯುರ್ವೇದ ಔಷಧಿಗಳ ಹೆಸರಿನಲ್ಲಿ ವಿದೇಶಗಳಿಗೆ ಕೊರಿಯರ್‌ ಮೂಲಕ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಮಾಜಿ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರನ್ನು ಬೆಂಗಳೂರು ಮತ್ತು ಕೊಚ್ಚಿ ವಲಯದ ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಅವರಿಂದ 1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಹ್ಯಾಶಿಷ್‌ ಆಯಿಲ್‌ ಜಪ್ತಿ ಮಾಡಲಾಗಿದೆ. ಕೇರಳ ಮೂಲದ 52 ವರ್ಷದ ವ್ಯಕ್ತಿಯೊಬ್ಬ ಸುಮಾರು 20 ವರ್ಷಗಳ ಹಿಬ್‌ ಬಹ್ರೇನ್‌ ದೇಶಕ್ಕೆ ಹೋಗಿದ್ದು, ಅಲ್ಲಿ ಪೊಲೀಸ್‌ ಅಧಿಕಾರಿ ಕೆಲಸ ಮಾಡುತ್ತಿದ್ದ. ವರ್ಷದ ಹಿಂದೆ ನಿವೃತ್ತಿ ಪಡೆದು ಕೇರಳದಲ್ಲಿ ವಾಸವಾಗಿದ್ದಾನೆ.

ಇದನ್ನೂ ಓದಿ;-  ಹುಟ್ಟುಹಬ್ಬ ಆಚರಿಸುತ್ತಿಲ್ಲ: ಅಭಿಮಾನಿಗಳಲ್ಲಿ ಮನವಿ ಮಾಡಿದ ಧ್ರುವ ಸರ್ಜಾ

ಬಹ್ರೇನ್‌ ದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಅಲ್ಲಿನ ಡ್ರಗ್ಸ್‌ ಪೆಡ್ಲರ್‌ಗಳು ಮತ್ತು ಕೇರಳ ಮೂಲದ ಪೊಲೀಸ್‌ ಅಧಿಕಾರಿಗಳ ಜತೆ ಸಂಪರ್ಕ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಕೇರಳದ ಎರ್ನಾಕುಲಂನಿಂದ ಬಹ್ರೇನ್‌ ದೇಶಕ್ಕೆ ಕೊರಿಯರ್‌ ಮೂಲಕ ಮಾದಕ ವಸ್ತು ಹ್ಯಾಶಿಷ್‌ ಆಯಿಲ್‌ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.

ಆಯುರ್ವೇದ ಔಷದಿಯಲ್ಲಿ ಡ್ರಗ್ಸ್‌: ಡ್ರಗ್ಸ್‌ ಸರಬರಾಜು ಮಾರ್ಗದ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದ ಆರೋಪಿ, ತನಿಖಾ ಸಂಸ್ಥೆಗಳ ಹಾದಿ ತಪ್ಪಿಸಲು ಬ್ರಹ್ಮರಸಾಯಣ, ನರಸಿಂಹ ರಸಾಯಣ, ಅಶ್ವಗಂಧಿ ಲೇಹಂ, ಛಾಯಾ ವಧನ ಲೇಹ, ಚವನ ಪ್ರಾಶ್‌ ಎಂಬಆಯುರ್ವೇದಿಕ್‌ ಚೂರ್ಣದ ಡಬ್ಬಿಗಳಿಗೆ ಡ್ರಗ್ಸ್  ತುಂಬಿಸಿ ಕಳುಹಿಸಿದ್ದ.

Advertisement

ಈ ಮಾಹಿತಿ ಪಡೆದ ಚೆನ್ನೈ ಎನ್‌ಸಿಬಿ ಅಧಿಕಾರಿಗಳು ಸೆ.12 ರಂದು ಎರ್ನಾಕುಲಂನಲ್ಲಿ 3.5 ಕೆ.ಜಿ. ಹ್ಯಾಶಿಷ್‌ ಆಯಿಲ್‌ ಜಪ್ತಿ ಮಾಡಿದ್ದರು. ಬಳಿಕ ಆರೋಪಿ ಮನಾಲಿಯಿಂದ ರೈಲಿನಲ್ಲಿ ಬರುತ್ತಿದ್ದ ಮಾಹಿತಿ ಪಡೆದ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸೆ.29ರಂದು ಬಂಧಿಸಿದ್ದಾರೆ. ಈತನ ಮಾಹಿತಿ ಮೇರೆಗೆ ಕೇರಳದ ಕಾಸರಗೊಡಿನಲ್ಲಿ ಅ.4ರಂದು ಆತನ ಸಹಚರರನ್ನು ಬಂಧಿಸಲಾಗಿದೆ.

ಇದೇ ವೇಳೆ ಆರೋಪಿ ಮಾಜಿ ಪೊಲೀಸ್‌ ಅಧಿಕಾರಿ ಮಾಹಿತಿ ಮೇರೆಗೆ ಎರ್ನಾಕುಲಂನಿಂದ ಆಸ್ಪ್ರೆàಲಿಯಾಗೆ ಕೊರಿಯರ್‌ ಮೂಲಕ ಹೋಗುತ್ತಿದ್ದ 11.6 ಕೆ.ಜಿ. ಸ್ಯೂಡೋಫೆಡ್ರೈನ್‌ ಎಂಬ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ. ಮತ್ತೂಂದು ಪ್ರಕರಣದಲ್ಲಿ ಸೆ.25 ಮತ್ತು ಸೆ.26ರಂದು ಚೆನ್ನೈ ವಿಮಾನ ನಿಲ್ದಾಣದ ಕಾರ್ಗೊ ವಿಮಾನದಲ್ಲಿ ಕಾರಿಕಲ್‌ನಿಂದ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದ 8 ಕೆ.ಜಿ.ಸ್ಯೂಡೋಫೆಡ್ರೈನ್‌ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.

ಅಲ್ಲದೆ, ಆಸ್ಟ್ರೇಲಿಯಾ ಸ್ಥಳೀಯ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿ, 4 ಕೆ.ಜಿ. ಸ್ಯೂಡೋಫೆಡ್ರೈನ್‌ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಕಳೆದ 3 ವಾರಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.‌

 

ಬೆಂಗಳೂರು: ಮೊಬೈಲ್‌ ಟವರ್‌ಗಳಲ್ಲಿ ಅಳವಡಿಸಿರುವ ಯುಬಿಬಿಪಿ(ಯುನಿವರ್ಸಲ್‌ ಬೇಸ್‌ಬ್ಯಾಂಡ್‌ ಪ್ರೊಸಸಿಂಗ್‌ ಯೂನಿಟ್‌) ಕಾರ್ಡ್‌ಗಳನ್ನು ಕಳವು ಮಾಡಿ ಗುಜರಿ ಅಂಗಡಿಗೆ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ನಿವಾಸಿ ಗಂಗಾಧರ್‌ (28) ಬಂಧಿತ. ಆತನಿಂದ 30 ಲಕ್ಷ ರೂ. ಮೌಲ್ಯದ 19 ಯುಬಿಬಿಪಿ ಕಾರ್ಡ್‌ಗಳು ಮತ್ತು ಒಂದು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಕಲಬುರಗಿ ಮೂಲದ ಗಂಗಾಧರ್‌ ಐಟಿಐ ವ್ಯಾಸಂಗ ಮಾಡಿದ್ದು, 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ. ಕೋರಮಂಗಲ ದಲ್ಲಿರುವ ನಿಶಾ ಇಂಡಸ್ಟ್ರಿಯಲ್‌ ಸರ್ವೀಸ್‌ ಲಿ. ಕಂಪನಿಯಲ್ಲಿ ಸೈಟ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ 6 ತಿಂಗಳ ಹಿಂದೆ ಕೊರೊನಾ ಸಂಕಷ್ಟದಿಂದಾಗಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ನಂತರ ಬೇರೆ ಕಡೆ ಕೆಲಸಕ್ಕಾಗಿ ಹುಡುಕಾಟ ನಡೆಸಿದರೂ ಯಾವುದು ಸಿಕ್ಕಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಟವರ್‌ಗಳಲ್ಲಿ ತಾನೇ ಅಳವಡಿಸಿದ್ದ ಯುಬಿಬಿಪಿ ಕಾರ್ಡ್‌ಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಟವರ್‌ಗಳಲ್ಲಿ ಯುಬಿಬಿಪಿ ಕಾರ್ಡ್‌ಗಳ ಅಳವಡಿಕೆಗೆ ಯುನಿವರ್ ಕೀ ಅಳವಡಿಸಲಾಗಿದ್ದು, ಆ ಕೀ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ. ಅಲ್ಲದೆ, ಮಾರುಕಟ್ಟೆಯಲ್ಲಿ ಪ್ರತಿ ಕಾರ್ಡ್‌ಗಳಿಗೆ ಒಂದೂವರೆ ಲಕ್ಷ ರೂ. ಇರುವ ಬಗ್ಗೆ ಅರಿತಿದ್ದ ಆರೋಪಿ, ಮುಂಜಾನೆ 4 ಗಂಟೆಯಿಂದ 5 ಗಂಟೆ ಅವಧಿಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಟವರ್‌ಗಳ ಬಳಿ ಹೋಗಿ 19 ಕಾರ್ಡ್‌ಗಳನ್ನು ಕಳವು ಮಾಡುತ್ತಿದ್ದ.

ಅನಂತರ ಕೆಲ ಸಾರ್ವಜನಿಕರಿಗೆ ಮಾರಾಟಕ್ಕೆ ಮುಂದಾಗಿದ್ದಾನೆ. ಆದರೆ, ಸಾರ್ವಜನಿಕರು ಖರೀದಿ ಮಾಡಿಲ್ಲ. ಹೀಗಾಗಿ ತನ್ನ ಬಳಿಯೇ 12 ಕಾರ್ಡ್‌ಗಳನ್ನು ಇಟ್ಟುಕೊಂಡಿದ್ದು, ಬಾಕಿ 7 ಕಾರ್ಡ್‌ಗಳನ್ನು ಗುಜರಿ ಅಂಗಡಿಯಲ್ಲಿ 500 ರೂ.ಗೆ ಮಾರಾಟ ಮಾಡಿದ್ದ. ಇದೀಗ ಎಲ್ಲವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಬಂಧನದಿಂದ ಕೋಣನಕುಂಟೆ, ಪುಲಕೇಶಿನಗರ, ಕಾಡುಗೊಂಡನಹಳ್ಳಿ, ಬನಶಂಕರಿ, ಸುಬ್ರಹ್ಮಣ್ಯಪುರ, ಬಾಗಲೂರು, ರಾಮನಗರ, ಕನಕಪುರ ಗ್ರಾಮಾಂತರ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಬೆಳಕಿಗೆ ಬಂದಿದ್ದು ಹೇಗೆ?: ನಿಶಾ ಸಂಸ್ಥೆಯಲ್ಲಿ ಮೇಲ್ವಿಚಾರಕರಾಗಿರುವ ಯೋಗೇಶ್‌ ಎಂಬವರು ನೆಲಗೆದರನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಟವರ್‌ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಹೋಗಿದ್ದರು. ಆಗ ಅದರಲ್ಲಿದ್ದ 3 ಲಕ್ಷ ರೂ. ಮೌಲ್ಯದ 2 ಯುಬಿಬಿಪಿ ಕಾರ್ಡ್‌ಗಳು ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪೀಣ್ಯ ಠಾಣೆಗೆ ದೂರು ನೀಡಿದ್ದರು.

ಬಳಿಕ ಕಾರ್ಯಾಚರಣೆಗೆ ಇಳಿದ ಪೀಣ್ಯ ಠಾಣೆ ಇನ್‌ಸ್ಪೆಕ್ಟರ್‌ ಎಂ.ಬಾಲಾಜಿ ಮತ್ತು ಪಿಎಸ್‌ಐ ಭಾನುಪ್ರಕಾಶ್‌ ಹಾಗೂ ಅಪರಾಧ ವಿಭಾಗ ಸಿಬ್ಬಂದಿ ತಂಡ ಘಟನಾ ಸ್ಥಳದ ಸಮೀಪದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ದ್ವಿಚಕ್ರ ವಾಹನ ಸಂಖ್ಯೆ ಪತ್ತೆಯಾಗಿತ್ತು. ಈ ಮಧ್ಯೆ ಆರೋಪಿ ಚೊಕ್ಕಸಂದ್ರದಲ್ಲಿ ಆರೋಪಿ ಓಡಾಡುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next