Advertisement

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

05:55 PM Nov 25, 2024 | Team Udayavani |

ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ಸರಕಾರವು ಯುವ ಜನರಲ್ಲಿ ಉದ್ಯಮ-ನಿರ್ದಿಷ್ಟ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಕೌಶಲ್ಯ ವಿಶ್ವವಿದ್ಯಾಲಯಕ್ಕಾಗಿ ಅದಾನಿ ಗ್ರೂಪ್‌ ನೀಡಿದ್ದ 100 ಕೋಟಿ ರೂ ಹಣಕಾಸು ನೆರವನ್ನು ತಿರಸ್ಕರಿಸಿದೆ.

Advertisement

ಸೌರ ವಿದ್ಯುತ್ ಗುತ್ತಿಗೆಯನ್ನು ಪಡೆದುಕೊಳ್ಳಲು ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರ ಏಳು ಮಂದಿಯ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್‌ಗಳು ದೋಷಾರೋಪಣೆ ಮಾಡಿರುವ ವಿವಾದದ ನಡುವೆ ಈ ವಿದ್ಯಮಾನ ನಡೆದಿದೆ.

ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಅದಾನಿ ಗ್ರೂಪ್ ಸೇರಿದಂತೆ ಯಾವುದೇ ಸಂಸ್ಥೆಯಿಂದ ರಾಜ್ಯ ಸರಕಾರ ಯಾವುದೇ ನಿಧಿ ಅಥವಾ ದೇಣಿಗೆ ತೆಗೆದುಕೊಳ್ಳುವುದಿಲ್ಲ. ಭರವಸೆ ನೀಡಿದ್ದ 100 ಕೋಟಿ ರೂ.ಗಳನ್ನು ಸ್ವೀಕರಿಸುವುದಿಲ್ಲ ಎಂದು ಸರಕಾರ ಅದಾನಿ ಗ್ರೂಪ್‌ಗೆ ಪತ್ರ ಬರೆದಿದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next