ಚಿಕ್ಕಮಗಳೂರು: ನಗರದ ಬಹುತೇಕರಸ್ತೆಗಳು ಹೊಂಡ-ಗುಂಡಿ ಬಿದ್ದುದುಸ್ಥಿತಿಯಲ್ಲಿದ್ದು, ವಾಹನ ಸವಾರರುಮತ್ತು ಪಾದಚಾರಿಗಳು ನಿತ್ಯಪರದಾಡುವಂತಾಗಿದೆ. ಮಳೆಗಾಲದಲ್ಲಿಈ ಗುಂಡಿಗಳಲ್ಲಿ ನೀರು ತುಂಬಿಸಂಚಾರಕ್ಕೆ ಅಡ್ಡಿಯಾಗುತ್ತಿದ್ದುಎಚ್ಚರ ತಪ್ಪಿದರೆ ಅನಾಹುತಕ್ಕೆ ಎಡೆಮಾಡಿಕೊಡುವಂತಾಗಿದೆ.
ಚಿಕ್ಕಮಗಳೂರು ನಗರ 35ವಾರ್ಡ್‌ಗಳನ್ನು ಹೊಂದಿದ್ದು, ನಗರದಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕರಸ್ತೆಗಳು ಮತ್ತು ಗಲ್ಲಿರಸ್ತೆಗಳು ಗುಂಡಿಗಟಾರಗಳಿಂದ ಕೂಡಿದ್ದು, ಸುಗಮಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗುಂಡಿಗಟಾರಗಳನ್ನು ಮುಚ್ಚಲು ಸಂಬಂಧಪಟ್ಟಇಲಾಖೆ ಮುಂದಾಗದಿರುವುದರಿಂದವಾಹನ ಸವಾರರು ಪ್ರತಿ ನಿತ್ಯ ಪರದಾಡುವಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ಅಮೃತ್ ಯೋಜನೆಕಾಮಗಾರಿ ನಡೆಯುತ್ತಿರುವುದರಿಂದರಸ್ತೆಗಳನ್ನು ಅಗೆದು ಪೈಪ್‌ಗ್ಳನ್ನುಅಳವಡಿಸಿದ್ದು, ರಸ್ತೆ ಅಗೆದು ಅದನ್ನುಸರಿಯಾಗಿ ದುರಸ್ತಿ ಮಾಡದಿರುವುದರಿಂದರಸ್ತೆಗಳು ಗುಂಡಿಮಯವಾಗಿವೆ. ಅಮೃತ್‌ಯೋಜನೆ ಪೂರ್ಣಗೊಂಡ ಬಳಿಕ ರಸ್ತೆದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿಸಂಬಂಧಪಟ್ಟ ಇಲಾಖೆ ಹೇಳುತ್ತಿದೆ. ಆದರೆ,ಅಮೃತ್ ಯೋಜನೆ ಅಮೆಗತಿಯಲ್ಲಿಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿಗುಂಡಿಮಯವಾದ ರಸ್ತೆಗಳಿಗೆ ಮುಕ್ತಿಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನುಕಾಡುತ್ತಿದೆ.
ನಗರದಲ್ಲಿ ಒಳಚರಡಿ ಕಾಮಗಾರಿಯೂಅನೇಕ ವರ್ಷಗಳಿಂದ ಮಂದಗತಿಯಲ್ಲಿಸಾಗುತ್ತಿದ್ದು, ಒಳಚರಂಡಿ ಕಾಮಗಾರಿದುರಸ್ತಿಗಾಗಿ ಈ ಹಿಂದೆ ಸುಸಜ್ಜಿತವಾಗಿದ್ದರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದ್ದು,ಅದನ್ನು ಸರಿಯಾಗಿ ಮುಚ್ಚದಿದ್ದರಿಂದ ಕೆಲವುರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದುದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿವೆ.ಇನ್ನು ಒಳಚರಂಡಿ ಪೈಪ್‌ಲೈನ್‌ಗಳನ್ನು ಕೆಲವು ರಸ್ತೆಗಳ ಮಧ್ಯ ಭಾಗದಲ್ಲಿಕೊಂಡೊಯ್ಯಲಾಗಿದೆ ಹಾಗೂ ರಸ್ತೆಮಧ್ಯೆ ಭಾಗದಲ್ಲಿ ರಸ್ತೆ ಮಟ್ಟಕ್ಕಿಂತಎತ್ತರವಾಗಿ ಚೇಂಬರ್‌ಗಳ ನಿರ್ಮಾಣಮಾಡಿರುವುದರಿಂದ ಭಾರೀ ಮಳೆಯಾದಸಂದರ್ಭದಲ್ಲಿ ನೀರು ಈ ಚೇಂಬರ್‌ಗಳ ಮೂಲಕ ಉಕ್ಕಿ ಹರಿದು ರಸ್ತೆಗಳಿಗೆಹಾನಿಯಾಗುತ್ತಿದೆ.
ಕೇಬಲ್ ಅಳವಡಿಕೆಗೆ ಕೆಲವುಕಡೆಗಳಲ್ಲಿ ರಸ್ತೆಗಳನ್ನು ಅಗೆದಿದ್ದು,ಅದನ್ನು ಸರಿಯಾಗಿ ಮುಚ್ಚದಿದ್ದರಿಂದಗುಂಡಿ ಗಟಾರಗಳಾಗಿ ಮಾರ್ಪಟ್ಟಿದೆ.ಅಲ್ಲಲ್ಲಿ ಕಟ್ಟಡ ಕಾಮಗಾರಿಗಳುನಡೆಯುತ್ತಿದ್ದು ಭಾರೀ ಗಾತ್ರದ ಲಾರಿಗಳುಸಂಚರಿಸುತ್ತಿರುವುದರಿಂದ ರಸ್ತೆಗಳು ಗುಂಡಿಬೀಳಲು ಕಾರಣವಾಗುತ್ತಿದೆ ಎಂಬುದುಸಾರ್ವಜನಿಕರ ಆರೋಪವಾಗಿದೆ.ಕಡೂರು- ಚಿಕ್ಕಮಗಳೂರುರಾಷ್ಟ್ರೀಯ ಹೆದ್ದಾರಿ ನಿರ್ಮಾಣಕಾರ್ಯ ನಡೆಯುತ್ತಿದೆ.
ಬೈಪಾಸ್ ರಸ್ತೆದುರಸ್ತಿ ಕಾರ್ಯ ನಡೆಯುತ್ತಿದ್ದು, ರಸ್ತೆಕಾಮಗಾರಿಯಿಂದ ಸುಗಮ ಸಂಚಾರಕ್ಕೆಅಡ್ಡಿಯಾಗುತ್ತಿದೆ. ಇದನ್ನು ತಪ್ಪಿಸಲುಸವಾರರು ಅಡ್ಡರಸ್ತೆಗಳಲ್ಲಿ ಮತ್ತು ಗಲ್ಲಿರಸ್ತೆಗಳಲ್ಲಿ ಸಂಚರಿಸಲು ಮುಂದಾದರೆರಸ್ತೆಗಳಲ್ಲಿ ಗುಂಡಿ ಗಟಾರಗಳು ಸವಾರರಿಗೆಕಿರಿಕಿರಿಯನ್ನುಂಟು ಮಾಡುತ್ತಿವೆ.ರಸ್ತೆಗಳಲ್ಲಿ ಗುಂಡಿಗಟಾರಗಳಿಂದಕೂಡಿರುವುದರಿಂದ ಮಳೆಗಾಲದಸಂದರ್ಭದಲ್ಲಿ ಈ ಗುಂಡಿಗಳಲ್ಲಿ ನೀರುತುಂಬಿಕೊಂಡು ವಾಹನ ಸವಾರರುಮತ್ತು ಪಾದಚಾರಿಗಳು ಭಾರೀ ತೊಂದರೆ ಅನುಭವಿಸುವಂತಾಗಿದೆ.
ಹಾಗೂ ಎಚ್ಚರತಪ್ಪಿದರೆ ಅನಾಹುತ ಸಂಭವಿಸುವಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ರಸ್ತೆಗಳಲ್ಲಿನಗುಂಡಿಗಟಾರಗಳನ್ನು ಮುಚ್ಚಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದುಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂದೀಪ ಜಿ.ಎನ್. ಶೇಡ್ಗಾರ್