ಹೊಸಪೇಟೆ: ಭಾರತ ದೇಶದ ಧಾರ್ಮಿಕ,ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರುಮಾಡುತ್ತಿದ್ದಾರೆ. ದೇಶದ ಜನರಿಗಾಗಿ ತೈಲ ಬೆಲೆಇಳಿಕೆ ಮಾಡಿದ್ದಾರೆ ಎಂದು ಪ್ರವಾಸೋದ್ಯಮಹಾಗೂ ಪರಿಸರ ಸಚಿವ ಆನಂದ್ ಸಿಂಗ್ ಹೇಳಿದರು.
ಕೇದಾರನಾಥದಲ್ಲಿ ನಡೆದ ಆದಿ ಶಂಕರಾಚಾರ್ಯರ ಸಮಾಧಿ ಹಾಗೂ ಮೂರ್ತಿಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆಚಾಲನೆ ನೀಡಿ ಅವರು ಮಾತನಾಡಿದರು.ಮೇಘಸ್ಫೋಟದಿಂದ ಕೇದಾರನಾಥದೇಗುಲಕ್ಕೆ ಹಾನಿಯಾಗಿತ್ತು. ಪ್ರಧಾನಿಮೋದಿ ಅವರು ಜಿರ್ಣೋದ್ಧಾರದ ಕಾರ್ಯಮಾಡಿದ್ದಾರೆ. ಪ್ರವಾಸೋದ್ಯಮದ ಬೆಳವಣಿಗೆಗೆಸಹಕಾರಿಯಾಗುವ ಹಾಗೂ ಹಿಂದೂ ಸಂಸ್ಕೃತಿ,ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವಕಾರ್ಯ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರುಬಡಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ರಾಜ್ಯ ಹಾಗೂಕೇಂದ್ರ ಸರ್ಕಾರಗಳು ಪೆಟ್ರೋಲ್, ಡಿಸೇಲ್ ಬೆಲೆಇಳಿಕೆ ಮಾಡಿವೆ ಆದರೂ ವಿರೋಧ ಪಕ್ಷದವರುಸುಮ್ಮನೆ ಟೀಕೆ ಮಾಡುತ್ತಾರೆ ಎಂದರು.ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯಭಾರತಿ ಶ್ರೀಗಳು ಹಾಗೂ ಹಂಪಸಾಗರದರುದ್ರಮೂರ್ತಿ ಶಿವಲಿಂಗ ಆಚಾರ್ಯರುಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಜ್ಜನರಸಹವಾಸ ಮಾಡಬೇಕು.
ಪ್ರತಿದಿನವನ್ನು ಒಳ್ಳೆಯಕಾರ್ಯಗಳನ್ನು ಮಾಡುವ ಮೂಲಕ ಜೀವನಸಾರ್ಥಕಪಡಿಸಿಕೊಳ್ಳಬೇಕು ಎಂದರು.ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ, ರಾಜ್ಯಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಅಧ್ಯಕ್ಷ ಎಚ್. ಹನುಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷಚನ್ನಬಸವನಗೌಡ ಪಾಟೀಲ್, ವಿಭಾಗ ಪ್ರಭಾರಿಸಿದ್ದೇಶ್ ಯಾದವ್, ವಿಭಾಗ ಸಹಪ್ರಭಾರಿಚಂದ್ರಶೇಖರ ಪಾಟೀಲ್ ಹಲಗೇರಿ ಮತ್ತುವಿಭಾಗ ಸಂಘಟನಾ ಕಾರ್ಯದರ್ಶಿ ಪೂಜಪ್ಪ,ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ನಾಳಿತಿಮ್ಮಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆಕವಿತಾ ಈಶ್ವರ್ ಸಿಂಗ್, ಮುಖಂಡರಾದಅನಿಲ್ ನಾಯ್ಡು, ಸಿದ್ದೇಶ್ ಯಾದವ್,ಚಂದ್ರಶೇಖರ ಪಾಟೀಲ್, ರಮೇಶ್ ನಾಯ್ಕ,ಅನಂತ ಪದ್ಮನಾಭ, ಸಾಲಿಸಿದ್ದಯ್ಯಸ್ವಾಮಿ,ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ,ಪ್ರ. ಕಾರ್ಯದರ್ಶಿಗಳಾದ ಶಂಕರ ಮೇಟಿ,ಜೀವರತ್ನಂ ಮತ್ತಿತರರಿದ್ದರು.
ಅಂಜಲಿ ಭರತನಾಟ್ಯ ಕಲಾಸಂಘದಿಂದಭರತ ನಾಟ್ಯ, ವಿಜಯಪುರದ ಯಂಕಪ್ಪಮತ್ತು ತಂಡದಿಂದ ಗೋಂದಲಿಗರ ಭಜನೆ,ಕಂಪ್ಲಿಯ ತಂಡದಿಂದ ಭರತ ನಾಟ್ಯ,ಅಂಗಡಿ ವಾಮದೇವ ತಂಡದಿಂದ ಭಕ್ತಿಗೀತೆಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀವಿರೂಪಾಕ್ಷೇಶ್ವರ ದೇಗುಲದಲ್ಲಿ ಹೋಮ-ಹವನನಡೆಸಲಾಯಿತು. ಸಚಿವರು ಹಾಗೂ ಸಭಿಕರು ಮತ್ತು ಬಿಜೆಪಿ ಕಾರ್ಯಕರ್ತರುಮತ್ತು ದೇಶ-ವಿದೇಶಿ ಪ್ರವಾಸಿಗರು ಎಲ್‌ಇಡಿ ಪರದೆಯಲ್ಲಿ ಪ್ರಧಾನಿ ಮೋದಿ ಅವರಕಾರ್ಯಕ್ರಮ ವೀಕ್ಷಿಸಿದರು.