ದಾವಣಗೆರೆ: ರಾಜ್ಯ ಸರ್ಕಾರ ಅತಿಹಿಂದುಳಿದ ಮಾದಿಗ ಸಮಾಜದಗುರುಪೀಠಗಳನ್ನು ಗುರುತಿಸುವಜೊತೆಗೆ ಆರ್ಥಿಕ ನೆರವು ನೀಡುವಮೂಲಕ ಸಮಾಜದ ಅಭ್ಯುದಯಕ್ಕೆಸಹಕರಿಸಬೇಕು ಎಂದು ಮಾದಿಗದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಗುಡ್ಡಪ್ಪ ಒತ್ತಾಯಿಸಿದರು.
ನಗರದ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಭಾನುವಾರ ನಡೆದಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಆವರು, ರಾಜ್ಯ ಸರ್ಕಾರಅತಿ ಹಿಂದುಳಿದ ಮಾದಿಗ ಸಮಾಜದಗುರುಪೀಠಗಳನ್ನು ಗುರುತಿಸುವಕೆಲಸ ಮಾಡಬೇಕು ಎಂದರು.ಈಚೆಗೆ ಲಿಂಗೈಕ್ಯರಾದ ಹಿರಿಯೂರಿನಆದಿಜಾಂಬವ ಗುರುಪೀಠದ ಶ್ರೀಮಾರ್ಕಾಂಡಮುನಿ ಸ್ವಾಮೀಜಿಯವರು ಅನೇಕ ದಶಕಗಳಿಂದ ಸಮಾಜದ ಏಳಿಗಾಗಿ ಶ್ರಮಿಸಿದರು.
ಮಾದಿಗಸಮಾಜದ ಮಕ್ಕಳು ವಿದ್ಯಾವಂತರಾಗಬೇಕು, ಸಮಾಜಕ್ಕೆ ರಾಜಕೀಯ ಶಕ್ತಿದೊರೆಯಬೇಕು. ಯುವ ಸಮೂಹಸಮಾಜದ ಬಗ್ಗೆ ಕಾಳಜಿ ವಹಿಸಬೇಕುಎಂದು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದರುಎಂದು ಸ್ಮರಿಸಿದರು. ಅತ್ಯಂತಹಿಂದುಳಿದ ಮಾದಿಗ ಸಮಾಜದಭವ್ಯ ಪರಂಪರೆಯ ಹೊಂದಿರುವಆದಿಜಾಂಬವ ಗುರುಪೀಠಕ್ಕೆ ಸರ್ಕಾರಯಾವುದೇ ಸೌಲಭ್ಯಗಳನ್ನು ಕೊಡಲಿಲ್ಲಮತ್ತು ಈಗಲೂ ಕೊಡುತ್ತಿಲ್ಲ.
ಹಾಗಾಗಿಯೇ ಮಠದ ಕಾರ್ಯಗಳು,ಸಮಾಜದ ಕಲ್ಯಾಣ ಕಾರ್ಯಗಳುಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗಲೇಇಲ್ಲ. ಸರ್ಕಾರದಿಂದ ಸೌಲಭ್ಯಗಳದೊರೆಯದ ಬಗ್ಗೆ ಸ್ವಾಮೀಜಿಯವರುಸದಾ ಚಿಂತಿಸುತ್ತಿದ್ದರು. ಸರ್ಕಾರಈಗಲಾದರೂ ಆದಿಜಾಂಬವಗುರುಪೀಠಕ್ಕೆ ಸೂಕ್ತ ಆರ್ಥಿಕ ನೆರವುನೀಡಬೇಕು ಎಂದರು.
ದಾವಣಗೆರೆ ಜಿಲ್ಲೆಯ ತಾಲೂಕು,ಹೋಬಳಿ ಕೇಂದ್ರಗಳಲ್ಲಿ ಮುಂದಿನದಿನಗಳಲ್ಲಿ ಮಾದಿಗ ದಂಡೋರಸಮಿತಿ ರಚಿಸಲಾಗುವುದು. ಈಮೂಲಕ ಸಂಘಟನೆಯನ್ನು ಬಲಪಡಿಸಲಾಗುವುದು. ದಾವಣಗೆರೆಯಲ್ಲಿಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಾದಿಗಕೃಷ್ಣರವರ ನೇತೃತ್ವದಲ್ಲಿ ನ್ಯಾ| ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆಒತ್ತಾಯಿಸಿ ಬೃಹತ್ ಪ್ರತಿಭಟನೆಹಮ್ಮಿಕೊಳ್ಳಲಾಗುವುದು ಎಂದುತಿಳಿಸಿದರು.
ಸಮಿತಿಯ ಟಿ. ಮರಿಯಪ್ಪ,ಪಾಮೇನ ಹಳ್ಳಿ ಮುರುಗೇಶ, ಅಂಜಿನಪ್ಪಕಡತಿ, ಆನಗೋಡು ಜಿ. ಗೋವಿಂದಪ್ಪ,ಈಚಘಟ್ಟ ಕೆಂಚಪ್ಪ, ಎಂ. ಆಂಜನೇಯ,ಬಿ.ಎಸ್. ಕೃಷ್ಣಮೂರ್ತಿ ಇದ್ದರು.