Advertisement

ಮಹಾರಾಷ್ಟ್ರಕ್ಕೆ ನಕಲಿ ನೋಟು ಸಾಗಾಟ ಯತ್ನ; 6 ಜನರ ಸೆರೆ

07:04 PM Jun 03, 2021 | Team Udayavani |

ದಾಂಡೇಲಿ: ನಗರದಿಂದ ಮಹಾರಾಷ್ಟ್ರಕ್ಕೆ ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದಾಗ, 74 ಲಕ್ಷ ರೂ. ನಕಲಿ ನೋಟುಗಳು
ಸಹಿತ 2 ವಾಹನ ಹಾಗೂ 6 ಜನರನ್ನು ಬಂಧಿಸಿದ ಘಟನೆ ಮಂಗಳವಾರ ಸಂಜೆ ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಬರ್ಚಿ ಚೆಕ್‌ ಪೋಸ್ಟ್‌ ಬಳಿ ನಡೆದಿದೆ.

Advertisement

ಸ್ಥಳೀಯ ವನಶ್ರೀನಗರದ ನಿವಾಸಿ ಶಿವಾಜಿ ಶ್ರವಣ ಕಾಂಬಳೆ (52) ಎಂಬಾತನಿಂದ ಮುದ್ರಿಸಿದ ನಕಲಿ ನೋಟುಗಳನ್ನು
ಮಹಾರಾಷ್ಟ್ರದಲ್ಲಿ ಚಲಾವಣೆ ಮಾಡಿ ಲಾಭಗಳಿಸುವ ಉದ್ದೇಶದಿಂದ ಬಿಳಿ ಬಣ್ಣದ ಸ್ವಿಪ್ಟ್ ಡಿಸೈರ್‌ ಕಾರು ಮತ್ತು ಸ್ವಿಪ್ಟ್ ಪಿಗೋ
ಕಾರಿನಲ್ಲಿ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ಮಾಡಿ ಆರೋಪಿಗಳಾದ ಮಹಾರಾಷ್ಟ್ರದ ರತ್ನಗಿರಿ ನಿವಾಸಿಗಳಾದ ಕಿರಣ್‌ ಮಧುಕರ ದೇಸಾಯಿ (40) ಮತ್ತು ಗಿರೀಶ ಲಿಂಗಪ್ಪ ಪೂಜಾರಿ (42) ಹಾಗೂ ಬೆಳಗಾವಿಯ ಕಿಣಿಯೇ ನಿವಾಸಿ ಅಮರ್‌ ಮೋಹನ ನಾಯ್ಕ (30), ಬೆಳಗಾವಿಯ ಚವಾಟಗಲ್ಲಿ ನಿವಾಸಿ ಸಾಗರ್‌ ಪುಂಡ್ಲಿಕ್‌ ಕುಣ್ಣೂರಕರ (28), ದಾಂಡೇಲಿಯ ಟೌನ್‌ಶಿಪ್‌ ನಿವಾಸಿ ಶಬ್ಬೀರ ಯಾನೆ ಅಂತೋನಿ ಇಸ್ಮಾಯಿಲ್‌ ಕುಟ್ಟಿ (45) ಮತ್ತು ವನಶ್ರೀನಗರದ ನಿವಾಸಿ ಶಿವಾಜಿ ಶ್ರವಣ ಕಾಂಬಳೆ (52) ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :ಲಾಕ್‌ಡೌನ್‌ಗೆ ತರಕಾರಿ ಬೆಳೆದ ರೈತ ಹೈರಾಣ : ಹೊಲದಲ್ಲೇ ಕೊಳೆಯುತ್ತಿವೆ ಬೆಳೆ

ಬಂಧಿತರಿಂದ 500 ರೂ. ಮುಖಬೆಲೆಯ 100 ನೋಟುಗಳ 9 ಕಟ್ಟು, ಅಸಲಿ ನೋಟುಗಳು 4,50,000 ರೂ. ಹಾಗೂ 500 ರೂ. ಮುಖಬೆಲೆಯ ನೂರು ನೋಟುಗಳ 18 ಕಟ್ಟುಗಳ ನಕಲಿ ನೋಟುಗಳು, 200 ರೂ ಮುಖಬಲೆಯ ನಕಲಿ ನೋಟುಗಳು ಹೀಗೆ 74 ಲಕ್ಷ ರೂ. ನಕಲಿ ನೋಟುಗಳು, ನೋಟು ಕಟ್ಟಿಂಗ್‌ ಯಂತ್ರ ಹಾಗೂ ನಕಲಿ ನೋಟು ಸಾಗಾಟಕ್ಕೆ ಬಳಸಿದ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ಮೇಲೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಕಲಂ:489(ಬಿ), 489(ಸಿ) ಸಹಿತ 34 ರೀತಿಯ ಪ್ರಕರಣ ದಾಖಲಿಸಲಾಗಿದೆ.

Advertisement

ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ: ನಕಲಿ ನೋಟು ಸಾಗಾಟ ಪ್ರಕರಣದ ಬಗ್ಗೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಬುಧವಾರ ಎಸ್ಪಿ ಶಿವಪ್ರಕಾಶ ದೇವರಾಜು ಸುದ್ದಿಗೋಷ್ಠಿ ನಡೆಸಿ, ಈಗಾಗಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಸಮಗ್ರ ತನಿಖೆ ನಡೆಸಿ, ಈ ಕೃತ್ಯದ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುವುದಾಗಿ
ತಿಳಿಸಿದರು.

ದಾಂಡೇಲಿ ಡಿವೈಎಸ್ಪಿ ಗಣೇಶ ಕೆ.ಎಲ್‌ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸ್‌ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಶಿವಪ್ರಕಾಶ ದೇವರಾಜು ಅವರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ಎಸ್ಪಿ ಶಿವಪ್ರಕಾಶ ದೇವರಾಜು, ಎಎಸ್ಪಿ ಎಸ್‌.ಬದ್ರಿನಾಥ್‌, ಡಿವೈಎಸ್ಪಿ ಗಣೇಶ ಕೆ.ಎಲ್‌, ಸಿಪಿಐ ಪ್ರಭು ಗಂಗನಹಳ್ಳಿ ಮಾರ್ಗದರ್ಶನದಲ್ಲಿ ದಾಂಡೇಲಿ ಗ್ರಾಮೀಣ ಠಾಣೆ ಪಿಎಸೈ ಐ.ಆರ್‌. ಗಡ್ಡೇಕರ, ಅಪರಾಧ ವಿಭಾಗದ ಪಿಎಸೈ ಯಲ್ಲಾಲಿಂಗ ಕುನ್ನೂರು, ನಗರ ಠಾಣೆಯ ಪಿಎಸೈ ಯಲ್ಲಪ್ಪ.ಎಸ್‌ ನೇತೃತ್ವದಲ್ಲಿ ಎಎಸೈ ಮಹಾವೀರ ಕಾಂಬಳೆ, ಸಿಬ್ಬಂದಿಗಳಾದ ಉಮೇಶ ತುಂಬರಗಿ, ರವಿ ಚೌವ್ಹಾಣ, ಮಂಜುನಾಥ ಶೆಟ್ಟಿ, ರೇವಪ್ಪ ಬಂಕಾಪುರ, ರೋಹಿತ್‌, ದಯಾನಂದ ಲೋಂಡಿ ಮತ್ತು ನಗರ ಠಾಣೆಯ ಸಿಬ್ಬಂದಿಗಳಾದ ಭೀಮಪ್ಪ.ಕೆ., ಆದಪ್ಪ
ಧಾರವಾಡಕರ, ಚಿನ್ಮಯ ಪತ್ತಾರ, ನಿಂಗಪ್ಪ ನರೇಗಲ್‌, ದಶರಥ ಲಕ್ಮಾಪುರ ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next