Advertisement
ಬೆಳಗ್ಗೆ 6.30ಕ್ಕೆ ಅಣಕು ಮತದಾನ ಆರಂಭಿಸಿದ್ದಲ್ಲಿಂದ ಎಲ್ಲ ಮತದಾನ ಪ್ರಕ್ರಿಯೆಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.ಬೂತ್‌ನಲ್ಲಿ ಪ್ರಿಸೆ„ಡಿಂಗ್ ಅಧಿಕಾರಿಯ ಸಮೀಪ ಸ್ಥಾಪಿಸಿದ ವೆಬ್ ಕೆಮರಾ, ಮತದಾರರು ಪೋಲಿಂಗ್ ಬೂತ್ ನೊಳಗೆ ಪ್ರವೇಶಿಸುವುದು ಮೊದಲಾದ ಪ್ರಕ್ರಿಯೆಗಳನ್ನು ವೀಕ್ಷಿಸಲಾಯಿತು. ಜಿಲ್ಲಾಧಿಕಾರಿ ಕಚೆೇರಿಯಲ್ಲಿ ಸಜ್ಜುಗೊಳಿಸಿದ ಟೆಲಿವಿಷನ್‌ಗೆ ಬೂತ್‌ನಿಂದ ಸಕಾಲಕ್ಕೆ ವೆಬ್ ಕಾಸ್ಟಿಂಗ್ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು.
ಮರು ಮತದಾನ ನಡೆದ ಮೇ 19ರಂದು ಕಯ್ಯೂರು- ಚೀಮೇನಿ ಗ್ರಾಮ ಪಂಚಾಯತ್‌ನ ಬೂತ್ ನಂಬ್ರ 48 ಕುಳಿಯಾಡ್ ಸರಕಾರಿ ಯುಪಿ ಶಾಲೆಯ ಮತದಾನ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕುಟುಂಬಶ್ರೀ ಕಾರ್ಯಕರ್ತೆಯರು ಭೋಜನ ನೀಡಿದರು. ಮತದಾನ ಸಾಮಗ್ರಿಗಳೊಂದಿಗೆ ಮುನ್ನಾದಿನ ಮತಗಟ್ಟೆಗೆ ತಲುಪಿದ ಬಳಿಕ ಕುಟುಂಬಶ್ರೀ ಭೋಜನ ವ್ಯವಸ್ಥೆ ಮಾಡಲಾಯಿತು. ಪೋಲಿಂಗ್ ಅಧಿಕಾರಿಗಳ ಹೊರತು ಸುರಕ್ಷಾ ಹೊಣೆಗಾರಿಕೆಯಿರುವ ಅಧಿಕಾರಿಗಳಿಗೂ ಕುಟುಂಬಶ್ರೀ ಭೋಜನ ವಿತರಿಸಿತು.