Advertisement
ರಾಂಚಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 1 ಗಂಟೆ, 29 ನಿಮಿಷ, 54 ಸೆಕೆಂಡ್ಸ್‌ನಲ್ಲಿ ಗುರಿ ತಲುಪುವ ಮೂಲಕ ಒಲಿಂಪಿಕ್ಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭಾವನಾ ಮೂಲತಃ ರಾಜಸ್ಥಾನದ ಕಾಬ್ರಾ ಗ್ರಾಮದವರು. ಹುಟ್ಟು ಬಡತನದ ಕುಟುಂಬ. ತುಂಡು ಜಮೀನಿನ ಅಲ್ಪಸ್ವಲ್ಪ ಕೃಷಿಯೇ ಜೀವನಕ್ಕೆ ಆಧಾರ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಓಪನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 1 ಗಂಟೆ, 38 ನಿಮಿಷ, 30 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ್ದ ಭಾವನಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪುಣೆಯಲ್ಲಿ ನಡೆದಿದ್ದ ಅಖಲ ಭಾರತ ಅಂತರ್ ರೈಲ್ವೇ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯನ್ನು 1 ಗಂಟೆ, 36 ನಿಮಿಷ, 17 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ್ದರು.
Related Articles
ಭಾವನಾ ಯಾವುದೇ ಕಿರಿಯರ ಹಾಗೂ ಹಿರಿಯರ ಆ್ಯತ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಂಡಿಲ್ಲ. ಮಾತ್ರವಲ್ಲ ಎಎಫ್ಐ (ರಾಷ್ಟ್ರೀಯ ಆ್ಯತ್ಲೆಟಿಕ್ಸ್ ಒಕ್ಕೂಟ) ನಡೆಸುವ ತರಬೇತಿ ಶಿಬಿರದಲ್ಲೂ ಭಾಗವಹಿಸಿಲ್ಲ. ಅವರಿಗೆ ಜೈಪುರದ ಕೋಚ್ ಗುರುಮುಖ್ ಸಿಹಾಗ್ ತರಬೇತಿ ನೀಡುತ್ತಿದ್ದಾರೆ.
Advertisement
“ಕಳೆದ ಕೆಲವು ತಿಂಗಳಿನಿಂದ ಕೋಚ್ ಮಾರ್ಗದರ್ಶನದಲ್ಲಿ ಕಠಿನ ತರಬೇತಿ ನಡೆಸಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲವಿದು. ನನ್ನ ಕನಸು ನನಸಾದ ದಿನ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು’– ಭಾವನಾ ಜಾಟ್