Advertisement

ಬೆಳಕಿನ ಹಬ್ಬದ ಸಂಭ್ರಮ; ವ್ಯಾಪಾರ ಜೋರು

01:41 PM Nov 05, 2021 | Team Udayavani |

ಹೊಸಪೇಟೆ: ಬೆಳಕಿನ ಹಬ್ಬ ದೀಪಾವಳಿಹಬ್ಬವನ್ನು ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್‌ನಲ್ಲಿ ಪಟಾಕಿ, ಬಟ್ಟೆ, ಹೂ, ಹಣ್ಣು ಹಂಪಲುಗಳಖರೀದಿಯೂ ಜೋರಾಗಿಯೇ ನಡೆದಿದೆ.ನಗರದ ಮುನ್ಸಿಪಲ್‌ ಮೈದಾನದಲ್ಲಿ ಪಟಾಕಿಗಳ ಮಳಿಗೆಗಳನ್ನು ತೆರೆಯಲಾಗಿದ್ದು,ಜನರು ಪಟಾಕಿಗಳ ಖರೀದಿಗೂ ಮುಗಿಬಿದ್ದು ಖರೀದಿಸಿದರು.

Advertisement

ಪಟಾಕಿ ಖರೀದಿಯೂ ಈ ಸಲಜೋರಾಗಿಯೇ ನಡೆದಿದೆ. ಹೊಸಪೇಟೆಯಲ್ಲಿಈ ಸಲ ಬೆಳಕಿನ ಹಬ್ಬದ ವೈಭವ ಜೋರಾಗಿಸಾಗಿದೆ.ನಗರದ ಮೇನ್‌ ಬಜಾರ್‌, ಗಾಂಧಿ ವೃತ್ತ,ಉದ್ಯೋಗ ಪೆಟ್ರೋಲ್‌ ಬಂಕ್‌, ಮೂರಂಗಡಿವೃತ್ತದಲ್ಲಿ ಹಣ್ಣು ಹಂಪಲು, ಹೂ, ಬಾಳೆಕಂಬ, ಮಾವಿನ ಎಲೆಗಳ ಖರೀದಿಗೆಜನ ಮುಗಿಬಿದ್ದಿದ್ದರು. ರೈತರು ತಮ್ಮಉತ್ಪನ್ನಗಳನ್ನು ನೇರವಾಗಿ ಮಾರಾಟಕ್ಕೆತಂದಿದ್ದರಿಂದ ನಗರದ ಜನತೆ ಖುಷಿಯಿಂದಲೇ ಖರೀದಿಸಿದರು.

ನಗರದಲ್ಲಿ ಬಟ್ಟೆ ಅಂಗಡಿಗಳಲ್ಲೂಜನರು ಮುಗಿಬಿದ್ದು, ಹೊಸ ಬಟ್ಟೆಗಳನ್ನುಖರೀದಿಸಿದರು. ಈ ಸಲ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದಿದ್ದರಿಂದವ್ಯಾಪಾರಿಗಳ ಮುಖದಲ್ಲೂ ಸಂತಸ ಮನೆಮಾಡಿತ್ತು. ಮಳಿಗೆಗಳಲ್ಲಿ ತರೇವಾರಿಪಟಾಕಿಗಳನ್ನೂ ಖರೀದಿಸಿದ ಗ್ರಾಹಕರು ಈಸಲದ ಹಬ್ಬ ಜೋರಾಗಿಯೇ ನಡೆಸಿ ಸಂಭ್ರಮಪಟ್ಟರಲ್ಲದೇ ಕಳೆದ ಎರಡು ವರ್ಷದಿಂದಸಂತಸದಿಂದ ಹಬ್ಬ ಆಚರಿಸಲಾಗದ ನೋವನ್ನುಮರೆತರು.

ಈ ಸಲ ಹಣ್ಣು, ಹೂ, ಪಟಾಕಿ ಹಾಗೂಬಟ್ಟೆಗಳ ಬೆಲೆ ದುಬಾರಿಯಾಗಿದ್ದರೂಜನತೆ ಮಾತ್ರ ಹಬ್ಬವನ್ನು ಸಂಭ್ರಮದಿಂದಆಚರಿಸುವುದಕ್ಕಾಗಿ ಬೆಲೆಯ ಕಡೆಗೆಹೆಚ್ಚಿನ ಗಮನ ಕೊಡದೇ ಖರೀದಿಯಲ್ಲಿತೊಡಗಿದ್ದರು.ಜಿಲ್ಲೆಯ ಆರೂ ತಾಲೂಕುಗಳಲ್ಲೂದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲೆಯ ತಾಂಡಾಗಳಲ್ಲಿದೀಪಾವಳಿ ಹಬ್ಬವನ್ನು ಸಂಭ್ರಮದಿಂದಆಚರಿಸುವುದಕ್ಕಾಗಿ ದುಡಿಯಲು ಬೇರೆ ಕಡೆತೆರಳಿದ್ದವರು ವಾಪಾಸ್‌ ಆಗಿದ್ದರು. ಹೀಗಾಗಿಇಡೀ ಜಿಲ್ಲೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮಮನೆ ಮಾಡಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next