Advertisement

ಬಿರು ಬಿಸಿಲಿಗೆ ಜನ ತತ್ತರ

01:35 PM Apr 04, 2019 | Naveen |

ಕೊಂಡ್ಲಹಳ್ಳಿ: ತಾಲೂಕಿನ ಕಸಬಾ ಹೋಬಳಿಯ ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಝಳಕ್ಕೆ ಹೆದರಿ ಮನೆಯಿಂದ ಹೊರಗೆ ಕಾಲಿಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಳಿಗ್ಗೆ 9 ಗಂಟೆಯಿಂದಲೇ ಬಿಸಿಲು ಬೀಳಲು ಆರಂಭವಾಗುತ್ತದೆ. ಝಳದಿಂದಾಗಿ ಬೆವರು ಒಸರಲು ಶುರು ಆಗುತ್ತದೆ. ಬಿಸಿಲಿನ ಝಳದಿಂದ ಹಿರಿಯರು, ವಯೋವೃದ್ಧರು ಪ್ರಯಾಸ ಪಡುವಂತಾಗಿದೆ. ಕೆಲವರು ಗಿಡ-ಮರಗಳ ಅಡಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಮನೆಯಿಂದ ಹೊರಗೆ ಬರಬೇಕಾದರೆ ಛತ್ರಿ, ಟವೆಲ್‌ ಏನಾದರೂ ಇರಲೇಬೇಕು ಎಂಬಂತಾಗಿದೆ.

ಬಾಯಾರಿಕೆ ನೀಗಿಸಲು ಎಳನೀರು, ಮಜ್ಜಿಗೆ, ಹಣ್ಣು, ತಂಪು ಪಾನೀಯ ಮಾರಾಟ ಅಂಗಡಿಗಳಿಗೆ ಜನರು ಧಾವಿಸುತ್ತಿದ್ದಾರೆ. ಕಲ್ಲಂಗಡಿ, ಎಳನೀರು, ಜ್ಯೂಸ್‌ ವ್ಯಾಪಾರ ಜೋರಾಗಿ ನಡೆದಿದೆ. ಯುವಕರು ಹಾಗೂ ಬಾಲಕರು ಉರಿಬಿಸಿಲಿನ ತಾಪ ತಣಿಸಿಕೊಳ್ಳಲು ತೋಟ, ಕಪ್ಪಲೆಗಳ ನೀರಿನ ತೊಟ್ಟಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿ ಬೇಸಿಗೆ ತಾಪ ತುಸು ಜಾಸ್ತಿಯೇ ಇದ್ದು, ಯಾವಾಗ ಬೇಸಿಗೆ ಕಳೆಯುತ್ತದೆಯೋ ಶಿವ ಶಿವ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next