Advertisement
ಟಿಕೆಟ್ ನಿರಾಕರಿಸಲಾಗಿದೆ. ಆಡಳಿತ ವಿರೋಧಿ ಅಲೆ, ಕೆಲವು ಕ್ಷೇತ್ರಗಳಲ್ಲಿ ಸಂಸದರಿಗೆ ಇರುವ ವೈಯಕ್ತಿಕ ವರ್ಚಸ್ಸು ಸೇರಿ ಹಲವು ಕಾರಣಗಳಿಂದ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಈ ಬದಲಾವಣೆ 2014ರಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಿಂದಲೇ ಶುರುವಾಗಿತ್ತು. ಕೇಂದ್ರ ಸಂಪುಟದಲ್ಲಿ 75 ವರ್ಷ ಮೀರಿದ ನಾಯಕರಿಗೆ ಸಚಿವ ಸ್ಥಾನ ನೀಡಲಾಗುವುದಿಲ್ಲ ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. 2014ರ ಬಳಿಕ ಬಿಜೆಪಿಯ ಹಿರಿಯ ನಾಯಕರು ಯಾರೂ ಕೂಡ ಪ್ರಮುಖ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಅವರೆಲ್ಲರನ್ನೂ ಹೊರಗಿಡಲಾಗಿದೆ ಎನ್ನುವುದು ಗಮನಾರ್ಹ. ಉತ್ತರ ಪ್ರದೇಶದ ಬಿಜೆಪಿ ನಾಯಕ ಕಲ್‌ರಾಜ್ ಮಿಶ್ರಾ ಮತ್ತು ಜಾರ್ಖಂಡ್ ಬಿಜೆಪಿಯ ಹಿರಿಯ ನಾಯಕ ಖರಿಯಾ ಮುಂಡಾ ಪಕ್ಷದ ಹಾಲಿ ವರಿಷ್ಠರ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿಯೇ ಹೇಳಿಕೊಂಡಿದ್ದಾರೆ. ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಸಂಸದರಾಗಿರುವ ಎಲ್.ಕೆ.ಅಡ್ವಾಣಿ ಪ್ರಸಕ್ತ ಚುನಾವಣೆಯಲ್ಲಿ ಅವಕಾಶ ನಿರಾಕರಿಸಲಾಗಿರುವ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ. ಈ ಬಗ್ಗೆ ಪರ-ವಿರೋಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ನಾಯಕರ ಪ್ರಕಾರ ಹಿರಿಯ ನಾಯಕರ ಬಗ್ಗೆ ಪಕ್ಷ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತದೆ.
Related Articles
Advertisement
ಬಿಹಾರಕ್ಕೆ ಸಂಬಂಧಿಸಿದಂತೆ 17 ಕ್ಷೇತ್ರಗಳಲ್ಲಿ ಮೂರರಲ್ಲಿ ಹೊಸಬರನ್ನು ಆಯ್ಕೆ ಮಾಡಲಾಗಿದೆ. ಐದು ಕ್ಷೇತ್ರಗಳನ್ನು ಜೆಡಿಯುಗೆ ಬಿಟ್ಟುಕೊಟ್ಟಿದೆ. ಬಿಜೆಪಿಯ ಈ ಕ್ರಮ ಮುಕ್ತವಾಗಿರುವುದನ್ನು ತೋರಿಸುತ್ತದೆ ಮತ್ತು ಹೊಸಬರಿಗೆ ಅವಕಾಶ ಕೊಟ್ಟಿರುವುದನ್ನು ತೋರಿಸುತ್ತದೆ ಎಂದು ನಿತೀಶ್ ಕುಮಾರ್ ಸರ್ಕಾರದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ರಾಜಕೀಯ ಕ್ಷೇತ್ರದ ವಿಶ್ಲೇಷಕರ ಪ್ರಕಾರ ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಹೊಸ ಗುರಿಯನ್ನು ಪಕ್ಷ ಹಾಕಿಕೊಂಡಿದೆ. ಅದನ್ನು ಮುಟ್ಟುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಿಕೊಳ್ಳಲಾಗಿದೆ. ಬಿಜೆಪಿಯನ್ನು ಸ್ಥಾಪಿಸಿ ಬಲಪಡಿಸಿದ ನಾಯಕರನ್ನು ಅವಗಣಿಸಲಾಗಿದೆ, ಇದು ಸರಿಯಾದ ಕ್ರಮವಲ್ಲ ಎನ್ನುವುದು ಕಾಂಗ್ರೆಸ್‌ನ ವಾದ.
ಉ.ಪ್ರದಲ್ಲೂ ಲೆಕ್ಕಾಚಾರ ಬದಲುಉತ್ತರ ಪ್ರದೇಶದಲ್ಲಿ ಗೆಲ್ಲುವ ಛಾತಿ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವೇ. ಬಿಎಸ್‌ಪಿ ಮತ್ತು ಎಸ್‌ಪಿ ಮಾಡಿಕೊಂಡಿರುವ ಮೈತ್ರಿಕೂಟ ನಿಜಕ್ಕೂ ಪಕ್ಷಕ್ಕೆ ಸವಾಲಾಗಿಯೇ ಇದೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ. ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ 31 ಅಭ್ಯರ್ಥಿಗಳ ಪಟ್ಟಿಯ ಪೈಕಿ ಆರು ಮಂದಿಯನ್ನು ಕೈಬಿಡಲಾಗಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ 78ರ ಪೈಕಿ 71ನ್ನು ಗೆದ್ದಿತ್ತು. ಹೊಸ ಮುಖಗಳನ್ನು ಆಯ್ಕೆ ಮಾಡುವ ಮೂಲಕ ಆಡಳಿತ ವಿರೋಧಿ ಅಲೆಯ ಪ್ರಭಾವ ತಗ್ಗಿಸಲು ಕ್ರಮ ಕೈಗೊಂಡಿದೆ.