ರಾಯಚೂರು: ಬಿಜೆಪಿಯಿಂದ ಕಣಕ್ಕಿಳಿದಿರುವ ರಾಜಾ ಅಮರೇಶ್ವರ ನಾಯಕರಿಗೂ ಒಂಬತ್ತು ಸಂಖ್ಯೆಗೂ ಅದೇನೋ ಅವಿನಾಭಾವ ನಂಟಿದ್ದಂತಿದೆ. ಈ ಹಿಂದೆ ಅವರ ರಾಜಕೀಯ ಬದುಕಿನ ಪುಟಗಳನ್ನು ಮೆಲುಕು ಹಾಕಿದರೆ ಅವರಿಗೆ ಯಶಸ್ಸು ಸಿಕ್ಕಿರುವುದು 9 ಸಂಖ್ಯೆ ಇರುವ ವರ್ಷಗಳಲ್ಲೇ ಎನ್ನುವುದು ಗಮನಾರ್ಹ.
ಅವರು ಮೊಟ್ಟಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು 1989ರಲ್ಲಿ. ಮೊದಲ ಬಾರಿಗೆ ಲಿಂಗಸುಗೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಶಾಸಕರಾಗಿದ್ದಲ್ಲದೇ ಸಚಿವರು
ಆಗಿಬಿಟ್ಟರು. ಅದಾದ ಬಳಿಕ ಅವರು ಕಲ್ಮಲ ಕ್ಷೇತ್ರದಿಂದ ಪುನಃ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು 1999ರಲ್ಲಿ. ಅಚ್ಚರಿ ಎಂದರೆ ಆಗಲೂ ಅವರಿಗೆ ಬಂಧಿಖಾನೆ ಸಚಿವ ಸ್ಥಾನ ಲಭಿಸಿತ್ತು.
ಬಳಿಕ 2009ರಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಕರೆದು ಬಿ ಫಾರಂ ನೀಡಿತ್ತು. ಆಗ ಅವರು ಗಣಿಧಣಿಗಳ ಲಾಬಿಗೆ ಮಣಿದು ಕಣದಿಂದ ಹಿಂದೆ ಸರಿದರು ಎನ್ನಲಾಗುತ್ತಿದೆ. ಆದರೆ, ಆಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಗೆಲ್ಲಲು ಸಾಕಷ್ಟು ಅವಕಾಶಗಳಿತ್ತು. ಅಲ್ಲದೇ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಸ್.ಫಕ್ಕೀರಪ್ಪ ಗೆದ್ದು ಬೀಗಿದ್ದರು. 2019ರಲ್ಲಿ ಪುನಃ ಬಿಜೆಪಿ ಬಿ ಫಾರಂ ನೀಡಿ ಕಣಕ್ಕಿಳಿಸಿದೆ. ಈ ಬಾರಿ ಅವರ ಪಾಲಿಗೆ ಒಂಭತ್ತು ಕೈ ಹಿಡಿಯುವುದೋ ಕೈ ಕೊಡುವುದೋ ಎನ್ನುವ ಕುತೂಹಲವಿದೆ. ಒಂದು ವೇಳೆ ಗೆದ್ದಿದ್ದೇ ಆದಲ್ಲಿ ಅವರ ಅದೃಷ್ಟ ಒಂಭತ್ತರ ನಂಟಲ್ಲಿ ಅಡಗಿದೆ ಎಂಬುದು ಖಾತ್ರಿಯಾಗಲಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಅವರು ಜೆಡಿಎಸ್ ನಿಂದ 2004ರಲ್ಲಿ ಕಲ್ಮಲ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸೋಲನುಭವಿಸಿದ್ದರು. 2013ರಲ್ಲೂ ಗ್ರಾಮೀಣ ಕ್ಷೇತ್ರದಿಂದ ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸಿದ್ದರು. ಆಗಲೂ ಅವರು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ, ಅವರ ಸೋಲಿಗೆ ಕಾಂಗ್ರೆಸ್, ಬಿಜೆಪಿ ಟಿಕೆಟ್ ಸಿಗದಿರುವುದು ಕಾರಣ ಎನ್ನುವುದು ಸತ್ಯ. ಸಂಖ್ಯೆಗಳಿಗೆ ಹೋಲಿಸಿದರೆ ಅವರು ಪರಾಭವಗೊಂಡ ವರ್ಷಗಳಲ್ಲಿ ಒಂಭತ್ತು
ಇರಲಿಲ್ಲ ಎನ್ನುವುದು ವಿಪರ್ಯಾಸ.
ಗೆದ್ದರೆ ಸಚಿವರಾಗ್ತಾರಾ?: ರಾಜಾ ಅಮರೇಶ್ವರ ನಾಯಕ ಅವರು ಈ ಹಿಂದೆ ಎರಡು ಬಾರಿ ಶಾಸಕರಾಗಿ ಗೆದ್ದಾಗಲೂ ಸಚಿವರಾಗಿದ್ದರು. ಹೀಗಾಗಿ ಈ ಬಾರಿ ಅವರು ಸ್ಪ ರ್ಧಿಸುತ್ತಿದ್ದಂತೆ ಚರ್ಚೆಯೊಂದು ಶುರುವಾಗಿದೆ. ಈ ಬಾರಿ ಅವರು ಗೆದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಮರೇಶ್ವರ ನಾಯಕರು
ಸಚಿವರಾಗ್ತಾರೆ ಎನ್ನುವ ಚರ್ಚೆ ನಡೆಯುತ್ತಿವೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸ್ಪಧಿ ìಸಿರುವ ಅವರು, ಜಾತಿ ಆಧಾರಿತ ಸಚಿವ ಸ್ಥಾನ ಹಂಚಿಕೆಯಾದರೆ ಅವರ ಸರದಿ ಬಂದರೂ ಅಚ್ಚರಿಪಡಬೇಕಿಲ್ಲ
ಸಿದ್ಧಯ್ಯಸ್ವಾಮಿ ಕುಕನೂರು