Advertisement

ಬರ ಬಾಯ್ತೆರೆದಾಗ ನೀರು ನೀಡಿದ ಪುಣ್ಯಾತ್ಮರು

10:08 AM Apr 13, 2019 | Naveen |

ಅಫಜಲಪುರ: ಮಳೆ ಬಾರದೆ ಹಳ್ಳ, ಕೊಳ್ಳ ನದಿ ತೊರೆಗಳು ಬರಿದಾಗಿ ಬಿರುಕು ಬಿಟ್ಟಿವೆ. ಎಲ್ಲಿ ನೋಡಿದರೂ ರಣಭೀಕರ ಬರಗಾಲ, ಎಷ್ಟು ಆಳ ಅಗೆದರೂ ಹನಿ ನೀರು ಸಿಗದ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಬರದಿಂದ ಬಾಯಿ ತೆರೆದು ಮುಗಿಲ ಕಡೆ ನೋಡುತ್ತಿರುವ ಜನರಿಗೆ ಚಿನ್ಮಯಗಿರಿ ಮಹಾಂತ ಮಠದ ಸಿದ್ಧರಾಮ ಶಿವಾಚಾರ್ಯರು, ಅಭಿನವ ವೀರ ಮಹಾಂತ ಶಿವಾಚಾರ್ಯರು ನೀರು ಕೊಟ್ಟು ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಸಮಾಜ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ಕೇಳಿ ಬರುತ್ತಿದೆ.

Advertisement

ಬರದಿಂದ ಕಂಗೆಟ್ಟ ಚಿಣಮಗೇರಾ: ತಾಲೂಕಿನ ಚಿಣಮಗೇರಾ ಗ್ರಾಮ ಬಹು ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಅಣತಿ ದೂರದಲ್ಲಿ ಗ್ರಾಮವಿದೆ. ಗ್ರಾಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಂತಹ ದೊಡ್ಡ ಊರಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಎಲ್ಲಿ ನೋಡಿದರೂ ಹನಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನಸಾಮಾನ್ಯರು ಖಾಸಗಿಯವರ ಹೊಲ ಗದ್ದೆಗಳಿಗೆ ಅಲೆದಾಡಿ ನೀರು ಹೊತ್ತುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮಹಿಳೆಯರು, ವೃದ್ಧರು, ಬಾಣಂತಿಯರು ನೀರಿಗಾಗಿ ಸುಡು ಬಿಸಿಲಲ್ಲಿ ತಿರುಗುವ ಪರಿ ನೋಡಿದಾಗ ಯಾರಿಗಾದರೂ ಕಣ್ಣಂಚಲ್ಲಿ ನೀರು ಬರದೆ ಇರುವುದಿಲ್ಲ.

ಇಂತಹ ಭೀಕರತೆ ಕಂಡ ಚಿನ್ಮಯಗಿರಿ ಮಹಾಂತ ಮಠದ ಶಿವಾಚಾರ್ಯರು ಮಠದ ವತಿಯಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಿ ಜನರ ದಾಹ ತಣಿಸಬೇಕೆಂದು ನಿರ್ಧರಿಸಿದರು. ಅದರಲ್ಲೂ ಹಿರಿಯ ಮಠಾಧಿಧೀಶ ಸಿದ್ಧರಾಮ ಶಿವಾಚಾರ್ಯರು ಜನ ನೀರಿಗಾಗಿ ಪರಿತಪಿಸದಂತೆ ನೀರಿನ ವ್ಯವಸ್ಥೆ ಮಾಡಲು ಪ್ರಸ್ತುತ ವೀರಮಹಾಂತ ಶಿವಾಚಾರ್ಯರಿಗೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಶ್ರೀಗಳ ಆದೇಶದಂತೆ ಚಿಣಮಗೇರಾ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ವೀರಮಹಾಂತ ಶಿವಾಚಾರ್ಯರು ಮುಂದಾದರು.

ನೀರಿನ ಸಮಸ್ಯೆ: ಅಹವಾಲು ಸ್ವೀಕಾರ ಕಲಬುರಗಿ:
ನಗರದ ಕುಡಿಯುವ ನೀರು ಸರಬರಾಜು ಸಮಸ್ಯೆ ಹಾಗೂ ಪರಿಹಾರಕ್ಕೆ
ಸಂಬಂಧಿಸಿದಂತೆ ಜಲಮಂಡಳಿ ಕಾರ್ಯಪಾಲಕ ಇಂಜಿನಿಯರ್‌ ಆರ್‌.ವಿ. ಪಾಟೀಲ (ಮೊ. ಸಂಖ್ಯೆ 09480813143) ಏ. 12 ರಿಂದ ಜೂ.15ರ ವರೆಗೆ ಪ್ರತಿದಿನ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30 ಗಂಟೆ ವರೆಗೆ ಮಹಾನಗರ ಪಾಲಿಕೆ ಕೊಠಡಿ ಸಂಖ್ಯೆ 26 ರಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಪಾಲಿಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಆಡಳಿತಾಧಿಕಾರಿಗಳ ನಿರ್ದೇಶನದ ಮೇರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಸಾರ್ವಜನಿಕರು ಮೇಲ್ಕಂಡ ದಿನದಂದು ಕುಡಿಯುವ ನೀರಿನ ಸಮಸ್ಯೆ ಕುರಿತು ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಠಕ್ಕೆ ಬರುವ ಭಕ್ತರ ಕಷ್ಟ ನೀಗಿಸಬೇಕಾಗಿತ್ತು. ಭಕ್ತರು ನೀರಿನ ಸಮಸ್ಯೆ ಹೇಳಿದ್ದರು. ಹೀಗಾಗಿ ಮಠದ ವತಿಯಿಂದ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಭಕ್ತರು ಕಷ್ಟದಲ್ಲಿದ್ದಾಗ ಗುರುವಾದವರು ಕಾಯುವುದು ಕರ್ತವ್ಯ.
.ಸಿದ್ಧರಾಮ ಶಿವಾಚಾರ್ಯರು, ವೀರಮಹಾಂತ
ಶಿವಾಚಾರ್ಯರು,ಮಹಾಂತಪುರ, ಚಿನ್ಮಯಗಿರಿ ಮಠ

Advertisement

ತಾಲೂಕಿನಾದ್ಯಂತ ಭೀಕರ ಬರ ಆವರಿಸಿದೆ. ತಾಲೂಕು ಆಡಳಿತವೂ ಜನರ ನೀರಿನ ಬವಣೆ ನೀಗಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇಂತಹ ಗಂಭೀರ ಸಮಯದಲ್ಲಿ ಮಠದ ವತಿಯಿಂದ ಚಿಣಮಗೇರಾ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುತ್ತಿರುವುದು ಬಹಳ ಶ್ಲಾಘನೀಯ ಕೆಲಸವಾಗಿದೆ.
. ಮಧುರಾಜ್‌ ಕೂಡಲಗಿ,
 ತಹಶೀಲ್ದಾರ್‌

ಮಠದ ಸ್ವಾಮಿಜಿ ಮಾಡುತ್ತಿರುವ ಸಮಾಜ ಕಾರ್ಯ ಶ್ಲಾಘನೀಯವಾಗಿದೆ. ಆದರೆ ಅವರು ಗ್ರಾಮಸ್ಥರಿಗೆ ನೀರು ಕೊಡುತ್ತಿದ್ದಾರೆಂದು ನಾವು ಸುಮ್ಮನಾಗಿಲ್ಲ. ನೀರಿನ ಮೂಲ ಹುಡುಕುತ್ತಿದ್ದೇವೆ. ನೀರಿನ ಮೂಲ ಸಿಕ್ಕ ಕಡೆ ಕೊಳವೆ ಬಾವಿ ಕೊರೆದು ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಲಾಗುವುದು.
.ಪಿ. ರಾಜಾ, ಜಿಪಂ ಸಿಇಒ

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next